ಹೇಮಾವತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ

KannadaprabhaNewsNetwork |  
Published : Jun 11, 2026, 12:15 AM IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ತಮ್ಮಡಿಹಳ್ಳಿಯ ವಿರಕ್ತಮಠದಲ್ಲಿ ರೈತರ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಹೇಮಾವತಿ ನಾಲೆಯಿಂದ ತಾಲೂಕಿನ ೨೬ ಕೆರೆಗಳಿಗೆ ನೀರು ಹರಿಸುವ ಯೋಜನೆಯಡಿ ಕುಪ್ಪೂರು ಹಾಗೂ ಸುತ್ತಮುತ್ತ ಭಾಗದ ಕೆರೆಗೆಳಿಗೆ ನೀರು ಹರಿಸುವ ಕುರಿತು ಹೋರಾಟ ಅನಿವಾರ್ಯ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠಾಧೀಶರಾದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಹೇಮಾವತಿ ನಾಲೆಯಿಂದ ತಾಲೂಕಿನ ೨೬ ಕೆರೆಗಳಿಗೆ ನೀರು ಹರಿಸುವ ಯೋಜನೆಯಡಿ ಕುಪ್ಪೂರು ಹಾಗೂ ಸುತ್ತಮುತ್ತ ಭಾಗದ ಕೆರೆಗೆಳಿಗೆ ನೀರು ಹರಿಸುವ ಕುರಿತು ಹೋರಾಟ ಅನಿವಾರ್ಯ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠಾಧೀಶರಾದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದಲ್ಲಿ ಕುಪ್ಪೂರು ಸುತ್ತಮುತ್ತ ಗ್ರಾಮದ ರೈತರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ೧೮ವರ್ಷದ ಅವಧಿಯಲ್ಲಿ ಇಲ್ಲಿಯವರೆಗೆ 4-5 ಕೆರೆಗಳಿಗೆ ನೀರುಣಿಸವಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಆದರೆ ಈಗ ನವಿಲೆ ಭಾಗದ ಕೆರೆಗಳಿಗೆ ನೀರುಹರಿಸುವ ರೈತರ ನಿರಂತರ ಹೋರಾಟಕ್ಕೆ ಫಲ ದೊರೆತು ಕೆಲಸ ತ್ವರಿತಗತಿಯಲ್ಲಿ ಸಾಗಿದೆ. ಆದರೆ ಕುಪ್ಪೂರು ಭಾಗದ ಕೆರೆಗಳಿಗೆ ಹರಿಸುವ ಕಾಮಗಾರಿ ಅನುಷ್ಠಾನಗೊಳ್ಳಲು ನಾವೆಲ್ಲ ಸಂಘಟಿತ ಹೋರಾಟ ನಡೆಸೋಣವೆಂದರು. ಜೂನ್ ೧೫ ರಂದು ಈ ಭಾಗದ ರೈತರಿಂದ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಗುವುದು. ನಂತರ ಮುಂದಿನ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಚರ್ಚಿಸಿ ಮುಂದುವರೆಯೋಣ ಎಂದರು.

ಕುಪ್ಪೂರು ಗ್ರಾಮದ ಪರಮೇಶ್ ಮಾತನಾಡಿ, ಹಾಲ್ಕುರ್ಕೆಕೆರೆಗೆ ಹೇಮಾವತಿ ನೀರು ಹರಿಯವಂತಾದರೆ ತಾಲೂಕಿನ ಪಟ್ಟದದೇವರಕೆರೆ, ಮಾದಿಹಳ್ಳಿ, ಮಂಚಸಂದ್ರ, ಕುಪ್ಪೂರು, ದಿಬ್ಬದಹಳ್ಳಿ ಕೆರೆಗಳಿಗೆ ನೀರು ಹರಿದು ಪಾತಾಳ ಕಂಡಿರುವ ಈ ಭಾಗದ ಅಂತರ್ಜಲ ಉತ್ತಮವಾಗಲಿದೆ ಎಂದರು.

ಹೋರಾಟಗಾರ ಅಜ್ಜೇನಹಳ್ಳಿ ಶರತ್‌ಕುಮಾರ್ ಮಾತನಾಡಿ ನಮ್ಮ ಗುರಿ ತಾಲೂಕಿನ ೨೬ ಕೆರೆಗಳಿಗೆ ಸಂಪೂರ್ಣವಾಗಿ ಹೇಮಾವತಿ ನೀರು ಹರಿಯಬೇಕು ಎಂಬುದಾಗಿದೆ. ಈ ನಿಟ್ಟನಲ್ಲಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಇಂದು ರೈತರಿಂದ ಪೂವಭಾವಿ ಸಭೆ ನಡೆಸಿದ್ದು, ಈ ಭಾಗದ ಕಾಮಗಾರಿ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕುವ ನಿಟ್ಟಿನಲ್ಲಿ ಶ್ರೀಗಳು ನಮ್ಮೊಂದಿನ ಹೋರಾಟಕ್ಕೆ ಕೈ ಜೋಡಿಸಿದ್ದಾರೆ ಎಂದರು.

ಸಭೆಯಲ್ಲಿಕುಪ್ಪೂರು, ಮಂಚಸಂದ್ರ, ಬೆನಕನಕಟ್ಟೆ, ದಿಬ್ಬದಹಳ್ಳಿಯ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ನೀಡಿ
ನರೇಂದ್ರ ಮೋದಿ ಪ್ರಧಾನಿಯಾಗಿ ಅತಿ ಹೆಚ್ಚು ದಿನಗಳ ದಾಖಲೆ