- ಮಾಜಿ ಸಚಿವ ಡಿ.ಎನ್.ಜೀವರಾಜ್ ಹಾಗೂ ಬಿಜೆಪಿ ಪಕ್ಷದಿಂದ ಬಸ್ತಿಮಠದಲ್ಲಿ ವಿಶೇಷ ಪೂಜೆ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಈ ಹಿಂದೆ ನೆಹರೂ ಭಾರತದ ಪ್ರಧಾನಿಯಾಗಿ ಹೆಚ್ಚು ವರ್ಷ ಆಳ್ವಿಕೆ ಮಾಡಿದ್ದ ದಾಖಲೆಯನ್ನು ನರೇಂದ್ರ ಮೋದಿ ಮುರಿದು ಹೊಸ ದಾಖಲೆ ಸೃಷ್ಠಿ ಸಿ ದ್ದಾರೆ. ಚುನಾಯಿತ ಪ್ರಧಾನಿಯಾಗಿ ಮೋದಿ ಅತಿ ಹೆಚ್ಚು ದಿನ ಪ್ರಧಾನಿಯಾಗಿದ್ದಾರೆ. ಪ್ರಸ್ತುತ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಭಾರತ ದೇಶ ಸದೃಢವಾಗಿದೆ. ಈಗ ಪ್ರಪಂಚದಲ್ಲಿ ಭಾರತ ದೇಶ 4 ನೇ ಸ್ಥಾನದಲ್ಲಿದೆ. ಮೋದಿಯವರು ಇನ್ನೂ 10 ವರ್ಷ ಪ್ರಧಾನಿ ಯಾಗಿ ಭಾರತ ದೇಶವನ್ನು ಪ್ರಪಂಚದಲ್ಲೇ 1 ನೇ ಸ್ಥಾನಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ನಮಗೆ ಇದೆ ಎಂದರು.
ಬಸ್ತಿಮಠದಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್,ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ನಗರಘಟಕದ ಅಧ್ಯಕ್ಷ ಸುರಭಿ ರಾಜೇಂದ್ರ, ಬಿಜೆಪಿ ಮುಖಂಡರಾದ ಬಿ.ಎಸ್.ಆಶೀಶ್ ಕುಮಾರ್, ಸುರಭಿ ರಾಜೇಂದ್ರ, ಕೃಷ್ಣಯ್ಯ ಆಚಾರ್ ಮತ್ತಿತರರು ಇದ್ದರು.