ಕನ್ನಡಪ್ರಭ ವಾರ್ತೆ ಮೂಲ್ಕಿ
ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಪಾಥ್ ವೇ ಎಂಟರ್ ಪ್ರ್ಯೆಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಸಹಭಾಗಿತ್ವದಲ್ಲಿ ಹಳೆಯಂಗಡಿಯ ಹರಿ ಓಂ ಸಭಾ ಭವನದಲ್ಲಿ ನಡೆದ ಪ್ರಿಯದರ್ಶಿನಿ ಕಿಂಗ್ ಆ್ಯಂಡ್ ಕ್ವೀನ್ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜೇತರು: 1ರಿಂದ 6 ವರ್ಷ ಕಿಡ್ಸ್ ಮೇಲ್ವಿನ್ನರ್ - ಲೆಹರ್ ಸಾಯಿ ,ಫಸ್ಟ್ ರನ್ನರ್ ಅಪ್ - ಆದಿಶ್ ಎ. ಕೆ.,ಸೆಕೆಂಡ್ ರನ್ನರ್ ಅಪ್ - ಹಾಯಾನ್ಷ್ ಶೆಟ್ಟಿ,1ರಿಂದ 6 ವರ್ಷ ಕಿಡ್ಸ್ ಫೀಮೇಲ್ ,ವಿನ್ನರ್ -ಚಾರ್ವಿ ಅಶ್ವಿ, ಫಸ್ಟ್ ರನ್ನರ್ ಅಪ್ - ಲೀಶಾ ,ಸೆಕೆಂಡ್ ರನ್ನರ್ ಅಪ್ - ದೀಪಾಂಜಲಿ .
ತೀರ್ಪುಗಾರರಾದ ಕ್ಲಾಸಿಕ್ ಮಿಸಸ್ ಇಂಡಿಯಾ ಕರ್ನಾಟಕ ವಿಜೇತೆ ಸಬಿತಾ ರಂಜಿತ್ ರಾವ್, ಕ್ಲಾಸಿಕ್ ಮಿಸಸ್ ಇಂಡಿಯಾ ಕರ್ನಾಟಕ ಥರ್ಡ್ ರನ್ನರ್ ಅಪ್ ಡಾ.ಅರ್ಚನಾ ಭಟ್, ಮಿಸಸ್ ಇಂಡಿಯಾ ಕರ್ನಾಟಕ ಸೆಕೆಂಡ್ ರನ್ನರ್ ಅಪ್ ವಿದ್ಯಾ ಸಂಪತ್ ಕರ್ಕೇರ, ಮಿಸಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಆಗಮಿಸಿದ್ದರು. ಸಹ ಪ್ರಾಯೋಜಕರಾದ ಪಡುಬಿದ್ರಿ ಗ್ಲಾಮರಸ್ ಸ್ನಿಪ್ ಸೆಲೂನ್ ನ ನಿಶಾ ಸಂದೇಶ ಸಾಲ್ಯಾನ್, ಮರ್ಸಿ ಬ್ಯೂಟಿ ಅಂಡ್ ಲೇಡೀಸ್ ಸಲೂನ್ ಆಡಳಿತ ನಿರ್ದೇಶಕಿ ಮರ್ಸಿ ವೀಣಾ ಡಿಸೋಜಾ, ರಾಜ್ಯ ಸೇವಾದಳದ ಪ್ರಧಾನ ಕಾರ್ಯದರ್ಶಿ ಧರ್ಮಾನಂದ ಶೆಟ್ಟಿಗಾರ್, ಪಾಥ್ ವೇ ಸಂಸ್ಥೆಯ ದೀಪಕ್ ಗಂಗೋಲಿ, ವಿಲ್ಸನ್ ಡಿಸೋಜ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್ ವಂದಿಸಿದರು. ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು.