ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಸಾಯನ ವಿಜ್ಞಾನದ ಹೊಸ ನೋಟಗಳು ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು, ಔಷಧದಲ್ಲಿ ರಸಾಯನಿಕ ಜೀವವಿಜ್ಞಾನ ಕುರಿತು ಮಾತನಾಡಿದರು.
ಬದಲಾದ ಜೀವನಶೈಲಿ, ಕ್ಯಾನ್ಸರ್ ಕಾರಕಗಳ ಸೇವನೆಯಿಂದ ರೋಗವನ್ನು ಜನರು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಔಷಧ ವಿಜ್ಞಾನ ಕ್ಷೇತ್ರ ಬೆಳೆಯಲು ರಸಾಯನ ವಿಜ್ಞಾನಿಗಳು ಕೈ ಜೋಡಿಸಬೇಕಿದೆ. ರೋಗಕ್ಕೆ ಕಾರಣವೇನು? ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಅನುಸರಿಸಬೇಕಾದ ಮಾರ್ಗಗಳು ಯಾವುವು ಎಂಬುದನ್ನು ಅರ್ಥೈಸಿಕೊಂಡು ಪ್ರಯೋಗ ನಡೆಸಬೇಕು. ಹೊಸ ರಾಸಾಯನಿಕ ವಸ್ತು ಕಂಡು ಹಿಡಿದರೆ, ಅದರ ಬಳಕೆ, ಉಪಯೋಗದ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದರು.ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ತಂತ್ರಜ್ಞಾನಗಳು ಇತ್ತೀಚೆಗೆ ವಿಶ್ವವನ್ನು ಪ್ರವೇಶಿಸಿವೆ. ಹೊಸ ತಂತ್ರಜ್ಞಾನಗಳು ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಿವೆ. ಆದರೆ, ಪ್ರಯೋಗಗಳಿಗೆ, ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಬೇಕಿದೆ. ವಿಜ್ಞಾನಿಗಳ ಹೊಸ ತಂತ್ರಜ್ಞಾನಗಳ ಸಹಕಾರವನ್ನೂ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕ್ಯಾನ್ಸರ್ ಗೆ ಭಾದಿಸಿರುವ ಭಾಗದಲ್ಲಿ ಅಂಗಾಂಶಗಳು ವೇಗದಲ್ಲಿ ಊಹಾತೀತವಾಗಿ ಬೆಳೆಯುತ್ತವೆ. ಅವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕ್ಯಾನ್ಸರ್ ಅಣುಗಳು ಬೆಳೆಯಲು ಕಾರಣವಾದ ಪೌಷ್ಟಿಕಾಂಶ ಯಾವುದೆಂದು ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುವುದೇ ದಾರಿಯಾಗಿದೆ ಎಂದರು.