ಸಂಜಯ ಅವರನ್ನು ಗಂಡನ ಸಹೋದರರು ಸೇರಿ 8 ಜನರು ಮಾರಕಸ್ತ್ರಗಳಿಂದ ಹತ್ಯೆ
ಮಾನ್ವಿ: ಕುರ್ಡಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ನನ್ನ ಪತಿಯನ್ನು ಸ್ವಂತ ಅವರ ಸಹೋದರರೇ ಕೋಲೆ ಮಾಡಿದ್ದು, ಅರೋಪಿತರನ್ನು ವಶಕ್ಕೆ ಪಡೆಯುವವರೆಗೂ ನನಗೆ ಸೂಕ್ತವಾದ ಭದ್ರತೆ ನೀಡಬೇಕು ಎಂದು ಶಾಂತಮ್ಮ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿ, ಕಳೆದ ಆ.22ರಂದು ಕುರ್ಡಿ ಗ್ರಾಮದಲ್ಲಿ ಆಸ್ತಿ ವಿಷಯವಾಗಿ ನನ್ನ ಗಂಡ ಸಂಜಯ ಅವರನ್ನು ಗಂಡನ ಸಹೋದರರು ಸೇರಿ 8 ಜನರು ಮಾರಕಸ್ತ್ರಗಳಿಂದ ಹತ್ಯೆಮಾಡಿದ್ದು, ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಪೊಲೀಸರು ಇಬ್ಬರು ಅರೋಪಿಗಳನ್ನು ದಸ್ತಗಿರಿ ಮಾಡಿದ್ದು, ಉಳಿದ 6 ಜನರು ತಪ್ಪಿಸಿಕೊಂಡಿದ್ದು ಇದುವರೆಗೂ ಕೂಡ ಪೊಲೀಸರಿಗೆ ದೊರೆಯದೆ ಇರುವುದರಿಂದ ಮನೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಆರೋಪಿತರು ಸಿಗದ ಕಾರಣಕ್ಕೆ ದಿನವೂ ಭಯದಿಂದ ಬದುಕು ನಡೆಸುತ್ತಿದ್ದೇನೆ. ಆದ್ದರಿಂದ ನಮ್ಮ ಕುಟುಂಬಕ್ಕೆ ಪೊಲೀಸ್ ಇಲಾಖೆಯವರು ಸೂಕ್ತವಾದ ಭದ್ರತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷ ಸುಭಾನ ಬೇಗ್, ಭಾನುಪ್ರಿಯ, ಮೇರಿ ಶಾಂತಪುರ್, ರವಿಕುಮಾರ್, ಭೀಮಪ್ಪ, ಶಾಂತಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.