ಪತ್ರಿಕೆ ಹಂಚುವ ಹುಡುಗರಿಗೆ ರೇನ್‌ ಕೋಟ್‌ ವಿತರಣೆ

KannadaprabhaNewsNetwork |  
Published : Aug 20, 2025, 01:30 AM IST
19ಎಚ್ಎಸ್ಎನ್6 : ಸುಮುಖ ಕಲ್ಯಾಣ ಮಂಟಪದಲ್ಲಿ  ಪತ್ರಿಕೆ ಹಂಚುವ ಯುವಕರಿಗೆ ಮಳೆಗಾಲದ ರೈನ್ ಕೋಟ್ ವಿತರಿಸಲಾಯಿತು. | Kannada Prabha

ಸಾರಾಂಶ

ಮಳೆಗಾಲ, ಬೇಸಿಗೆ ಅಥವಾ ಚಳಿಗಾಲ ಯಾವ ಋತುವಾಗಿದ್ದರೂ ಬೆಳಿಗ್ಗೆ ನಮ್ಮ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವುದು ಇವರ ನಿರಂತರ ಸೇವಾಭಾವ. ಇವರು ಸುದ್ದಿಗಳ ಹರಿಕಾರರು, ಸಮಾಜಕ್ಕೆ ಜಾಗೃತಿಯ ದಾರಿ ತೋರಿಸುವವರು. ಇವರ ಸೇವೆಯನ್ನು ನಾವು ಎಲ್ಲರೂ ಸ್ಮರಿಸಿ ಗೌರವಿಸಬೇಕು. ಪತ್ರಿಕೆ ಹಂಚುವ ವಿತರಕರ ಸಂಕಷ್ಟಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪತ್ರಿಕೆ ಹಂಚುವ ವಿತರಕರ ಸಂಕಷ್ಟಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಹೇಳಿದರು. ಸುಮುಖ ಕಲ್ಯಾಣ ಮಂಟಪದಲ್ಲಿ ಪತ್ರಿಕೆ ಹಂಚುವ ಯುವಕರಿಗೆ ಮಳೆಗಾಲದ ರೇನ್‌ ಕೋಟ್‌ ವಿತರಿಸಿ ಮಾತನಾಡಿದ ಅವರು, ನಮ್ಮ ಅಣ್ಣ ಬಿ ಎಂ ಸಂತೋಷ್ ಅವರ ಹುಟ್ಟುಹಬ್ಬದ ಅಂಗವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರ ಅಭಿಮಾನ ಬಳಗ ಹಮ್ಮಿಕೊಂಡಿದ್ದು ವಿಶೇಷವಾಗಿ ಪ್ರತಿನಿತ್ಯ ಪತ್ರಿಕೆ ಹಂಚುವ ಮೂಲಕ ರಾಜ್ಯದ ವಿವಿಧ ಸುದ್ದಿಗಳನ್ನು ಮನೆಮನೆಗೆ ತಲುಪಿಸುವ ವಿತರಕರಿಗೆ ಅಭಿನಂದಿಸಿದ್ದೇವೆ.ಪತ್ರಿಕೆ ವಿತರಕರ ಸೇವೆಯು ಸಮಾಜದಲ್ಲಿ ಅಪಾರವಾದ ಮಹತ್ವವನ್ನು ಹೊಂದಿದೆ. ಮಳೆಗಾಲ, ಬೇಸಿಗೆ ಅಥವಾ ಚಳಿಗಾಲ ಯಾವ ಋತುವಾಗಿದ್ದರೂ ಬೆಳಿಗ್ಗೆ ನಮ್ಮ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವುದು ಇವರ ನಿರಂತರ ಸೇವಾಭಾವ. ಇವರು ಸುದ್ದಿಗಳ ಹರಿಕಾರರು, ಸಮಾಜಕ್ಕೆ ಜಾಗೃತಿಯ ದಾರಿ ತೋರಿಸುವವರು. ಇವರ ಸೇವೆಯನ್ನು ನಾವು ಎಲ್ಲರೂ ಸ್ಮರಿಸಿ ಗೌರವಿಸಬೇಕು ಎಂದರು.ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಬಿಎಂ ಸಂತೋಷ್ ಮಾತನಾಡಿ, ನಮ್ಮ ತಂದೆತಾಯಿ ಮಾಡಿದ ಸಮಾಜ ಸೇವೆಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದು, ನಮ್ಮ ಸ್ನೇಹಿತರ ಬಳಗ ಹಾಗು ನನ್ನ ಸಹೋದರ ಸುನೀಲ್ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ೫೦೦ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್‌ಗಳನ್ನು ವಿತರಿಸುತ್ತಿದ್ದು, ಇದರ ಜೊತೆಯಲ್ಲಿ ಪತ್ರಿಕೆ ಹಂಚುವ ಯುವಕರಿಗೂ ಅವರ ವಿದ್ಯಾ ಭ್ಯಾಸ ಜೊತೆಯಲ್ಲಿ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದು ಅದರ ಹಿಂದೆ ಇರುವ ಕಷ್ಟ ಶ್ರಮ, ತ್ಯಾಗವನ್ನು ನಾವು ಅಪರೂಪಕ್ಕೆ ಮಾತ್ರ ಯೋಚಿಸುತ್ತೇವೆ. ಈ ರೇನ್ ಕೋಟ್ ವಿತರಿಸುವ ಕಾರ್ಯಕ್ರಮ ಅವರ ಪರಿಶ್ರಮವನ್ನು ಗುರುತಿಸಿದ ಪ್ರಯತ್ನವಿದ್ದು ಅವರ ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಿರಲಿ ಇಂತಹ ಮಕ್ಕಳೆ ಮುಂದೆ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.ವಿತರಕರ ಒಕ್ಕೂಟದ ತಾಲೂಕು ಅಧ್ಯಕ್ಷ ಆರಾಧ್ಯ, ಕಾರ್ಯದರ್ಶಿ ಬಿ ಎನ್ ಗಣೇಶ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸುವ ದಿನಮಾನದಲ್ಲಿ ಯಾವುದೇ ಸ್ವಾರ್ಥ ಮನೋಭಾವವಿಲ್ಲದೆ ಬೆಳಗಿನ ಜಾವ ಪತ್ರಿಕೆ ಹಂಚುವ ಯುವಕರನ್ನು ಗುರ್ತಿಸಿ ಅವರಿಗೆ ಇಂತಹ ಒಂದು ಸಹಾಯ ಮಾಡಿದ ಅವರಿಗೆ ಒಕ್ಕೂಟದ ವತಿಯಿಂದ ಧನ್ಯವಾದಗಳು. ಅದೇ ರೀತಿಯಾಗಿ ನಮ್ಮ ಹಲವಾರು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ನಿಮ್ಮೆಲ್ಲರ ಸಹಕಾರ ಅತಿಮುಖ್ಯ ಎಂದರು.

ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಬಿ ಎಂ ಆನಂದ್, ಮಧು, ನರಸಿಂಹಸ್ವಾಮಿ,ಪತ್ರಕರ್ತ ಕೇಬಲ್ ವಿಜಯ್ ಕುಮಾರ, ವಿತರಕರ ಸಂಘದ ಖಜಾಂಚಿ ಲೋಹಿತ್, ರವಿಹೊಳ್ಳ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ