ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ಡಾ. ಶಿವಕುಮಾರಸ್ವಾಮೀಜೀಯವರ ೭ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಅನ್ನದಾಸೋಹದ ಮೂಲಕ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ದಾರಿ ತೋರುವ ಜತೆಗೆ ಮನುಕುಲವನ್ನು ಸಂತೈಸುತ್ತಾ, ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಪೂಜ್ಯರ ಸಂದೇಶಗಳು, ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ಮುನ್ನಡೆಯೋಣವೆಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂಬ ಪ್ರವೃತ್ತಿ ಕಡಿಮೆ ಇರುವ ಇಂದಿನ ಸಮಾಜದಲ್ಲಿ ಡಾ. ಶಿವಕುಮಾರಸ್ವಾಮೀಜಿಯವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಜಾತಿ, ಬೇಧ, ಮತ, ಪಂಥಗಳಿಲ್ಲದೇ ತ್ರಿವಿಧ ದಾಸೋಹದ ಮೂಲಕ ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಬಣ್ಣಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ಡಾ. ಶಿವಕುಮಾರಸ್ವಾಮೀಜೀಯವರ ೭ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಅನ್ನದಾಸೋಹದ ಮೂಲಕ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ದಾರಿ ತೋರುವ ಜತೆಗೆ ಮನುಕುಲವನ್ನು ಸಂತೈಸುತ್ತಾ, ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಪೂಜ್ಯರ ಸಂದೇಶಗಳು, ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ಮುನ್ನಡೆಯೋಣವೆಂದರು. ಶಿಕ್ಷಕ ಪರಮೇಶ್ ಪ್ರಧಾನ ಭಾಷಣ ಮಾಡಿದರು. ನ್ಯಾಯಾಲಯದ ಸಿಬ್ಬಂದಿ ಚೈತ್ರ ಪ್ರಾರ್ಥಿಸಿದರು, ಜಯಪ್ರಕಾಶ ಸ್ವಾಗತಿಸಿದರು, ಬಿ.ಎನ್. ಕೃಷ್ಣಮೂರ್ತಿ ವಂದಿಸಿದರು ಹಾಗೂ ಶ್ವೇತ ನಿರೂಪಿಸಿದರು. ಸಿವಿಲ್ ನ್ಯಾಯಾಧೀಶರಾದ ಚೇತನಾ, ಅಧಿಕ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಅಪರ ಸರ್ಕಾರಿ ಸಹಾಯಕ ಅಭಿಯೋಜಕ ಸುರೇಶ್ ಜಿ.ಎಸ್., ಹಿರಿಯ ವಕೀಲರಾದ ಉದಯರಂಜನ್, ಪುರುಷೋತಮ್, ಎಚ್.ಎಸ್.ಅರುಣ್ ಕುಮಾರ್, ರಾಮಪ್ರಸನ್ನ, ರವೀಶ್, ನಟರಾಜ್, ಯು.ಆರ್. ಸತೀಶ್, ಪ್ರಶಾಂತ್, ಮೈತ್ರಿ ಕೆ. ಎನ್., ಕೆ.ಎಸ್. ಪ್ರಕಾಶ್, ಕೆ.ಆರ್. ಸುನೀಲ್, ಬಲರಾಮ, ದೇವರಾಜ್, ದೇವರಾಜ್ ಎಂ.ಕೆ., ಸುನೀಲ್, ಚೇತನ್, ಮಮತ, ಸಂಗೀತಾ, ಜಯಲಕ್ಷ್ಮೀ, ರಾಮಪ್ರಸಾದ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶೇಖರಪ್ಪ, ಶಶಿಕುಮಾರ್, ಮಮತ, ಆಶಾಕುಮಾರಿ, ಆಶಾರಾಣಿ, ಮೇಘನ, ಉಮೇಶ, ಪ್ರಕಾಶ್, ಎಸ್.ಬಿ. ಸೋಮಶೇಖರ್, ಸಂಗೀತ, ರಾಣಿ, ಜ್ಯೋತಿ, ಅನುಷಾ, ಕೃಷ್ಣೇಗೌಡ, ಐ.ಎಲ್.ಸುರೇಶ್, ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.