ರೋಟರಿ ವಲಯ 9ರ ಸೌಮ್ಯಮಣಿ ಮಾಹಿತಿ । ಜಿಲ್ಲಾ ಗೌರ್ನರ್ ನೇತೃತ್ವ
ಹಾಸನ: ರೋಟರಿ ಡಿಸ್ಟ್ರಿಕ್ಟ್ ೩೧೮೨ ಜಿಲ್ಲಾ ಕಾರ್ಯಕ್ರಮವಾದ ‘ಮಾನಿನಿ’ ಎಂಬ ಸಮಾವೇಶವನ್ನು ಜಿಲ್ಲಾ ಗವರ್ನರ್ ರೋಟೇರಿಯನ್ ಬಿ.ಸಿ.ಗೀತ ರವರ ನೇತೃತ್ವದಲ್ಲಿ ಮಾ.೨೪ರ ಭಾನುವಾರ ನಗರದ ಹೊರವಲಯದಲ್ಲಿರುವ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಲಿದೆ ಎಂದು ರೋಟರಿ ವಲಯ ೯ಎನ ಕ್ಲಬ್ ಅಸಿಸ್ಟೆಂಟ್ ಗೌರ್‍ನರ್ ಡಾ.ಬಿ.ಕೆ.ಸೌಮ್ಯಮಣಿ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನದ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ರೋಟರಿಯ ವಲಯ೯ಎ ಸಂಸ್ಥೆ ಆಯೋಜಿಸಿದೆ. ಇದಕ್ಕೆ ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು ೫೦೦ ರೋಟೇರಿಯನ್ ಜತೆ ಫ್ಯಾಮಿಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಟಿ.ಎಸ್.ನಾಗಾಭರಣ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಪ್ರಸಕ್ತ ದೃಶ್ಯ ಮಾದ್ಯಮ-ಮಹಿಳೆ, ಪರಿಸರ ಸಂರಕ್ಷಣೆ, ಭಾರತೀಯ ಚಿಂತನೆಯಲ್ಲಿ ಮಹಿಳೆಯ ಪಾತ್ರ, ಮಾನವೀಯ ಮೌಲ್ಯವನ್ನು ಸಶಕ್ತಗೊಳಿಸುವಲ್ಲಿ ನಾಯಕತ್ವ ಗುಣಗಳು ಹೀಗೆ ಉತ್ತಮ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರಾತ್ಯಕ್ಷಿತೆ ಇರಲಿದೆ ಎಂದು ಹೇಳಿದರು.
ರೋಟರಿಯ ಧ್ಯೇಯ ಎಂದರೆ ಅದು ಸೇವೆಯಾಗಿದೆ. ರೋಟರಿಯ ಸೇವೆಯ ಮುಖಾಂತರ ಸಮಾಜದ ಅಭಿವೃದ್ಧಿಗೆ ಒಟ್ಟಾಗಿ ಹೆಜ್ಜೆ ಹಾಕೋಣ. ಮಾನಿನಿ ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಗೌರ್‍ನರ್ ಬಿ.ಸಿ. ಗೀತಾ ನೆರವೇರಿಸುವರು. ಜಿಲ್ಲಾ ಮಾಜಿ ಗೌರ್‍ನರ್ ಅಭಿನಂದನ್ ಶೆಟ್ಟಿ, ಡಿ.ಎಸ್. ರವಿ, ದೇವಾನಂದ್, ಕೆ. ಪಾಲಾಕ್ಷ, ಬಿ.ಎಂ. ಭಟ್, ಸ್ಪೂರ್ತಿ ವಿಶ್ವಾಸ್, ನಮಿತೊ ಕಾಮ್ದರ್, ವಾಗೀಶ್ ಭಟ್ ಉಪಸ್ಥಿತರಿರುವರು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರೋಟರಿಯ ಡಾ. ವಾಣಿ ನಾಗೇಶ್, ರೋಟರಿ ಡಾ. ಮಮತಾ, ಬೆಂಗಳೂರು ರೋಟರಿ ಮಮತಾ ನಟೇಶ್, ರೋ ಬೊಮ್ಮೇಗೌಡ, ವಿಕ್ರಂ, ನಾಗೇಶ್ ಇತರರು ಉಪಸ್ಥಿತರಿದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೋಟರಿ ವಲಯ ೯ಎನ ಕ್ಲಬ್ ಅಸಿಸ್ಟೆಂಟ್ ಗೌರ್‍ನರ್ ಡಾ. ಬಿ.ಕೆ. ಸೌಮ್ಯಮಣಿ.