ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು

KannadaprabhaNewsNetwork |  
Published : Jun 27, 2025, 12:48 AM IST
26ಕೆಜಿಎಫ್‌1 | Kannada Prabha

ಸಾರಾಂಶ

ಪ್ರತಿ ೫ ವರ್ಷಕ್ಕೆ ಒಮ್ಮೆ ಪಾಲಿಟೆಕ್ನಿಕ್ ಪಠ್ಯವನ್ನು ಪರಿಷ್ಕರಣೆ ಮಾಡಲಾಗುವುದು, ಉನ್ನತ ತಾಂತ್ರಿಕ ವಿದ್ಯಾಭಸಕ್ಕೆ ಅನುಕೂಲವಾಗುತೆ ಪಠ್ಯವನ್ನು ಸಿದ್ದಪಡಿಸಲಾಗುವುದು. ರಾಜ್ಯದ ಕಾಲೇಜುಗಳಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅದ್ಯತೆ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಕೆಜಿಎಫ್ಗ್ರಾಮೀಣ ಭಾಗದಲ್ಲಿಯೂ ನಗರದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗಬೇಕು. ಇದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳು ತಾಂತ್ರಿಕ ಕಾಲೇಜುಗಳ ಕಟ್ಟಡ ನಿರ್ಮಾಣ, ಲ್ಯಾಬ್, ಗ್ರಂಥಾಲಯ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಮುಂದೆ ಬರಬೇಕೆಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಎನ್‌.ಮಂಜುಶ್ರೀ ಹೇಳಿದರು. ಕೆಜಿಎಫ್ ಸರ್ಕಾರಿ ಪಾಲಿಟೆಕ್ನಿಕ್ ತಾಂತ್ರಿಕ ಕಾಲೇಜಿಗೆ ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಸಂಸ್ಥೆಯವರು ಸಿಎಸ್‌ಆರ್ ಅಡಿಯಲ್ಲಿ ೯೫ ಲಕ್ಷ ರುಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿದ 4 ಕಂಪ್ಯೂಟರ್ ಲ್ಯಾಬ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.

ಪಾಲಿಟೆಕ್ನಿಕ್ ಪಠ್ಯ ಪರಿಷ್ಕರಣೆ

ಪ್ರತಿ ೫ ವರ್ಷಕ್ಕೆ ಒಮ್ಮೆ ಪಾಲಿಟೆಕ್ನಿಕ್ ಪಠ್ಯವನ್ನು ಪರಿಷ್ಕರಣೆ ಮಾಡಲಾಗುವುದು, ಉನ್ನತ ತಾಂತ್ರಿಕ ವಿದ್ಯಾಭಸಕ್ಕೆ ಅನುಕೂಲವಾಗುತೆ ಪಠ್ಯವನ್ನು ಸಿದ್ದಪಡಿಸಲಾಗುವುದೆಂದು ತಿಳಿಸಿದರು, ರಾಜ್ಯದ ಕಾಲೇಜುಗಳಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅದ್ಯತೆ ನೀಡಲಾಗುವುದೆಂದು ತಿಳಿಸಿದರು.ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್‌ ಉಪಾಧ್ಯಕ್ಷರಾದ ಬಾಲಾಜಿ ಸೌರೀರಾಜನ್ ಮಾತನಾಡಿ, ನಾವು ನಮ್ಮ ಸಂಸ್ಥೆಯ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ೯೫ ಲಕ್ಷ ರುಪಾಯಿಗಳ ಗುಣಮಟ್ಟದ ೪ ಕಂಪ್ಯೂಟರ್ ಲ್ಯಾಬ್‌ಗಳನ್ನು ಸಿಎಸ್‌ಆರ್ ಅಡಿಯಲ್ಲಿ ನೀಡಿ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲ್ಯಾಬ್‌ಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಗುಣಮಟ್ಟದ ಶಿಕ್ಷಣ, ಕೌಶಲ ವರ್ಧನೆ

ಜೀವನ ಮತ್ತು ಜೀವನೋಪಾಯದ ಗುಣಮಟ್ಟವನ್ನು ಸುಧಾರಿಸಲು ಗುಣಮಟ್ಟದ ಶಿಕ್ಷಣ, ತರಬೇತಿ ಮತ್ತು ಕೌಶಲ್ಯ ವರ್ಧನೆಯನ್ನು ಒದಗಿಸಲು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ ಪ್ರಗತಿಪರ ಸಮಾಜದ ಮೂಲಾಧಾರಗಳಾಗಿವೆ ಮತ್ತು ಅದು ನಿರಂತರವಾಗಿ ಗುಣÀಮಟ್ಟದ ಶಿಕ್ಷಣವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು.ಶಾಸಕಿ ರೂಪಕಲಾಶಶಿಧರ್ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಸಂಸ್ಥೆಯವರು ಬಡ ಮಕ್ಕಳ ಶಿಕ್ಷಣಕ್ಕೆ ಅತ್ಯಾದುನಿಕ ೯೫ ಕಂಪ್ಯೂಟರ್‌ಗಳು, ಲ್ಯಾಬ್ ಅಗತ್ಯವಿರುವ ಪಿಠೋಪಕರಣಗಳು, ಯುಪಿಎಸ್‌ನ್ನು ಅಳವಡಿಸಿ ಮಕ್ಕಳ ವಿದ್ಯಾಭ್ಯಸಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಸಂಸ್ಥೆಗೆ ಧನ್ಯವಾದ ತಿಳಿಸಿದರು. ಕಾಂಪೌಂಡ್ ನಿರ್ಮಾಣಮುಂದಿನ ದಿನಗಳಲ್ಲಿ ಸುರಕ್ಷೆತಯ ದೃಷ್ಟಿಯಿಂದ ಕಾಲೇಜಿಗೆ ಕಾಂಪೌಂಡ್ ಮತ್ತು ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು. ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಸಂಸ್ಥೆಯಿಂದ ಅನುದಾನವನ್ನು ತಂದ ಮಲ್ಲೇಶ್ ಮತ್ತು ತಂಡದವಕ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸ್ಯಾಮ್‌ಸಂಗ್‌ ಸಂಸ್ಥೆಯ ನಿರ್ದೇಶಕ ದಮಯಂತಿ, ಸಿಎಸ್‌ಆರ್‌ ವ್ಯವಸ್ಥಾಪಕ ದೃಮಿತ್‌ವ್ಯಸ್, ಶಿವೇಂದ್ರ ಶ್ರೀತ್ಸವಮ ಕಾಲೇಜಿನ ಪ್ರಾಂಶುಪಾಲೆ ಗೀತಾಂಜಲಿ, ನಗರಸಭೆ ಅಧ್ಯಕ್ಷರಾದ ಇಂದಿರಾಗಾಂಧಿ, ಪೌರಾಯುಕ್ತ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ, ಕರ‍್ಯದರ್ಶೀ ಅನಿಲ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ತಾಂತ್ರಿಕ ಕಾಲೇಜಿನ ಎಲ್ಲಾ ವಿಭಾಗಾಧಿಕಾರಿಗಳು, ಉಪನ್ಯಾಸಕರುಗಳು, ಕಚೇರಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಸ್ತಂಜಾನಿ ಅ‍ವರು ಸ್ವಾಗತಿಸಿ, ವಂದಾನರ್ಪಣೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ