ಸತ್ಯ ಶೋಧನೆ ಮಾಡುವುದೇ ವಿಜ್ಞಾನ

KannadaprabhaNewsNetwork |  
Published : Sep 15, 2024, 01:58 AM IST
ಚಿತ್ರ 14ಬಿಡಿಆರ್‌6ಬೀದರ್‌ನ ಸಂಸ್ಕಾರ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಜಿಲ್ಲೆಯ ಸಿಬಿಎಸಿ ಶಾಲೆಗಳ ಸಂಘ ಹಾಗೂ ಸಂಸ್ಕಾರ ಇಂಟರ್‌ ನ್ಯಾಷನಲ್‌ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿರುವ ವಿಜ್ಞಾನ ವಸ್ತು ಪ್ರದರ್ಶನ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೀದರ್‌ನ ಸಂಸ್ಕಾರ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಜಿಲ್ಲೆಯ ಸಿಬಿಎಸಿ ಶಾಲೆಗಳ ಸಂಘ ಹಾಗೂ ಸಂಸ್ಕಾರ ಇಂಟರ್‌ ನ್ಯಾಷನಲ್‌ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿರುವ ವಿಜ್ಞಾನ ವಸ್ತು ಪ್ರದರ್ಶನ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಆಧುನಿಕ ಯುಗದಲ್ಲಿ ವಿಜ್ಞಾನ ಇಲ್ಲದಿದ್ದರೆ ಏನೂ ಇಲ್ಲ. ಸತ್ಯದ ಶೋಧನೆ ಮಾಡುವುದೆ ವಿಜ್ಞಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಹೊರವಲಯದಲಿರುವ ಸಂಸ್ಕಾರ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಜಿಲ್ಲೆಯ ಸಿಬಿಎಸ್ಸಿ ಶಾಲೆಗಳ ಸಂಘ ಹಾಗೂ ಸಂಸ್ಕಾರ ಇಂಟರ್‌ ನ್ಯಾಷನಲ್‌ ಶಾಲೆಯ ಆಶ್ರಯದಲ್ಲಿ ಶನಿವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆ ಮಾನವನಲ್ಲಿ ವಿಜ್ಞಾನ ಎಲ್ಲ ಕ್ಷೇತ್ರದಲ್ಲಿಯೂ ಆವರಿಸಿಕೊಂಡಿದೆ ಎಂದು ತಿಳಿಸಿದರು.

ವಿಜ್ಞಾನ ಎಷ್ಟರ ಮಟ್ಟಿಗೆ ಬೆಳದಿದೆಯೆಂದರೆ ನೂಕ್ಲಿಯರ್‌ ಬಾಂಬ್‌ ಎಂಬ ಒಂದು ಅವಿಷ್ಕಾರ ಇಡೀ ಜಗತ್ತನ್ನೆ ಸರ್ವನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇವತ್ತು ವಿಜ್ಞಾನ ಇಲ್ಲದೆ ಏನೂ ಇಲ್ಲ, ಮನುಷ್ಯನಲ್ಲಿರುವ ಶ್ರೇಷ್ಠವಾದ ಜ್ಞಾನವೆಂದರೆ ಅದು ವಿಜ್ಞಾನ. ಮನುಷ್ಯ ಅಗತ್ಯಕ್ಕೆ ತಕ್ಕಂತೆ ಅನ್ವೇಷಣೆ ಮಾಡುತ್ತಾ ಹೋಗುತ್ತೀವಿ ಅದು ನಮ್ಮ ಜೀವನ ಸುಗಮಗೊಳಿಸುತ್ತದೆ ಎಂದರು.

ಇವತ್ತು ನಾವು ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣೆಯಲಿದ್ದೇವೆ. ಕಡು ಬಡವ ಕೂಲಿಕಾರ್ಮಿಕ, ರೈತ ಸಹ ತಾನು ಇದ್ದ ಸ್ಥಳದಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತಿರುವ ವ್ಯಕ್ತಿಗೆ ಕ್ಷಣಾರ್ಧದಲ್ಲಿ ಸಂದೇಶ ಕಳಹಿಸುವ ಮಟ್ಟಕ್ಕೆ ವಿಜ್ಞಾನ ಬೆಳೆದಿದೆ. ಅದರೂ ಇನ್ನೂ ಹೆಚ್ಚಿನ ಪ್ರಮಾಣದಲಿ ವಿಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆ ಅಗತ್ಯವಿದೆ ಎಂದು ಹೇಳಿದರು.

ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೆಯೋ ಎಂದು ಅರಿತು ಅವರನ್ನು ಅವರಿಗೆ ಸ್ವಾತಂತ್ರ್ಯ ನೀಡಬೇಕು. ಮಕ್ಕಳು ಸಹ ತಾವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ವಿಷಯದಲಿ ಗುರಿಯಿಟ್ಟುಕೊಂಡು ಕಠಿಣ ಪರಿಶ್ರಮ, ಧೃಡವಾಧ ಆತ್ಮವಿಶ್ವಾಸದಿಂದ ಮುಂದೆ ಸಾಗಿದ್ದಾಗ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಿದೆ ಎಂ ದು ತಿಳಿಸಿದರು.

ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆಯಿಲ್ಲ ಆದರೆ ಅವರಿಗೆ ಪೂರಕವಾದ ವಾತವರಣ ಕಲ್ಪಿಸಿ ಅಗತ್ಯವಾದ ಸೌಲಭ್ಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಸಿಬಿಎಸ್‌ಸಿ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷರಾದ ಸಂಸ್ಕಾರ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪ್ರಾಂಶುಪಾಲ ಮಲ್ಲಿನಾಥ ಮಠಪತಿ ಸ್ವಾಗತಿಸಿದರು. ಸುರಬಿ ಎನ್‌ಜಿಒ ಹಾಗೂ ಸಂಸ್ಕಾರ ಇಂಟರ್‌ ನ್ಯಾಷಸ್ಕೂಲ್‌ ಅಧ್ಯಕ್ಷರಾದ ಡಾ.ಅಮರ ಎರೋಳಕರ್‌ ವಂದಿಸಿದರು.

ಈ ಸಂದರ್ಭದಲ್ಲಿ ಗೀತಾ ಖಂಡ್ರೆ, ಸಂಸ್ಥೇಯ ನಿರ್ದೇಶಕರಾದ ಕ್ಷಿತಿಜಾ ಏರೋಳಕರ್‌, ಪ್ರಕಾಶ ಟೊಣ್ಣೆ, ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಡಾ.ರಘುನಾಥ ಹಾಗೂ ಅವಿನಾಶ ಏರೋಳಕರ ಇದ್ದರು.

ಇದೇ ವೇಳೆ ಜಿಲ್ಲೆಯ ಸುಮಾರು 23 ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ 160ಕ್ಕೂ ಹೆಚ್ಚು ತಯಾರಿಸಿದ ವಿಜ್ಞಾನ ವಸ್ತುಗಳ ವಿಕ್ಷಿಸಿದ ಸಚಿವರು ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''