ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣಕ್ಕೆ ಬುಧವಾರ ಆಗಮಿಸಿದ ಸಚಿವ ಶಿವಲಿಂಗೇಗೌಡರು ಡಾ. ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಮಹಾತ್ಮಗಾಂಧಿ ವೃತ್ತದ ತನಕ ಕರೆತಂದ ನಂತರ ಮಾತನಾಡಿದರು. ನನ್ನನ್ನು ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ಯಾವತ್ತು ಮರೆಯುವುದಿಲ್ಲ. ನಾವೆಲ್ಲಾ ಸೇರಿ ಹಾಸನ ಜಿಲ್ಲೆಯಲ್ಲಿ ಹೊಸ ನಾಯಕತ್ವ ಕಟ್ಟೋಣ ಎಂದು ಕರೆ ನೀಡಿದರು. ಸಾವಿರಾರು ಹೆಕ್ಟೇರ್ ಜೋಳಕ್ಕೆ ರೋಗ ಬಂದಿದೆ. ರೈತರ ನೂರಾರು ಕೋಟಿ ಹಣ ನಷ್ಟ ಆಗಿದೆ. ರೈತರಿಗೆ ನಷ್ಟವನ್ನು ತುಂಬಿ ಕೊಡುವ ಕೆಲಸ ಮಾಡಬೇಕಿದೆ. ಇನ್ಸೂರೆನ್ಸ್ ಕಟ್ಟಿದವರಿಗೆ ಇನ್ನೊಂದು ತಿಂಗಳಲ್ಲಿ ಮನೆ ಬಾಗಿಲಿಗೆ ಪರಿಹಾರ ಚೆಕ್ ಕೊಡುತ್ತೇವೆ ಹಾಗೂ ಬರ ಅದ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು. ಪಟ್ಟಣಕ್ಕೆ ಆಗಮಿಸಿದ ಸಚಿವ ಶಿವಲಿಂಗೇಗೌಡರು ಹಾಗೂ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾಯಕರ್ತರು ಬೃಹತ್ತಾದ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ, ಪುಷ್ಪವೃಷ್ಠಿಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಸಚಿವರಾದ ಶಿವಲಿಂಗೇಗೌಡರು ಬರ ಪೀಡಿತ ಹಾಗೂ ರೋಗ ಪೀಡಿದ ಬೆಳೆ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ತಹಸೀಲ್ದಾರ್ ವೈ. ಎಂ. ರೇಣುಕುಮಾರ್, ಕೃಷಿ ಅಧಿಕಾರಿ ಸಪ್ನ, ಇತರರು ಇದ್ದರು.