ಶಿವರಾತ್ರಿ: ಕೋಟಿಲಿಂಗೇಶ್ವರದಲ್ಲಿ ಭಕ್ತರ ದಂಡು

KannadaprabhaNewsNetwork |  
Published : Mar 09, 2024, 01:31 AM IST
೮ಕೆಜಿಎಫ್೫ಬೃಹತ್ ೧೦೮ ಅಡಿ ಲಿಂಗಕ್ಕೆ ಪೂಜೆ ಸಲ್ಲಿಸಿದ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕಿ ರೂಪಕಲಾಶಶಿಧರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬ್ರಹ್ನರಥೋತ್ಸವಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವರಾತ್ರಿ ಪ್ರಯುಕ್ತ ಶಿವಲಿಂಗಗಳ ದರ್ಶನಕ್ಕಾಗಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ನಾನಾ ಕಡೆಗಳಿಂದ ಭಕ್ತರ ಸಮೂಹವೇ ಹರಿದು ಬಂದಿತ್ತು. ಕೋಟಿಲಿಂಗಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯದಿಂದ ಸೂಕ್ತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು, ಶಿವರಾತ್ರಿ ಪ್ರಯುಕ್ತ ಕೆಜಿಎಫ್, ಬಂಗಾರಪೇಟೆ, ಕೋಲಾರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ವಿಕೋಟದಿಂದ ಬರುವ ಭಕ್ತರಿಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆಜಿಎಫ್

ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಭಕ್ತರ ಸಮೂಹವೇ ಹರಿದು ಬಂದಿತು.

ಗಣೇಶನ ದೇವಾಲಯ, ಮಂಜುನಾಥ ದೇವಾಲಯ, ಶ್ರೀದೇವಿ, ಭೂದೇವಿ, ಶನಿಸಿಂಗಾಪುರ, ಅಯ್ಯಪ್ಪ, ಸುಬ್ರಮಣ್ಯ, ವಿಷ್ಣು ಮಹೇಶ್ವರ, ಕನ್ನಿಕಾ ಪರಮೇಶ್ವರಿ, ದುರ್ಗಾದೇವಿ ದೇವಾಲಯಗಳಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಕೋಟಿಲಿಂಗಗಳಿಗೆ ಅಭಿಷೇಕ, ನವ್ಯ ದ್ರವ್ಯಗಳಿಂದ ವಿಶೇಷ ಪೂಜೆ, ಹೋಮ, ಹವನಗಳು ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ನೇತೃತ್ವದಲ್ಲಿ ನಡೆದವು.

ಬ್ರಹ್ಮರಥೋತ್ಸವದ ಪ್ರಯುಕ್ತ ರಥೋತ್ಸವದ ವಿಧಿ,ವಿಧಾನಗಳನ್ನು ದೇವಾಲಯದ ಅರ್ಚಕರಿಂದ ನೇರವೇರಿಸಿ, ದೇವಾಲಯದ ಆವರಣದಲ್ಲಿರುವ ಎಲ್ಲಾ ಶಿವಲಿಂಗಗಳಿಗೆ ಮಲ್ಲಿಗೆ, ಚೆಂಡು, ಕನಕಾಂಬರ, ಕಾಕಡ ಹೂವುಗಳಿಂದ ಅಲಂಕರಿಸಲಾಗಿತ್ತು, ೧೦೧ ಅರ್ಚಕರಿಂದ ಶಿವಲಿಂಗಗಳಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು.

೧೦೮ ಅಡಿ ಶಿವಲಿಂಗಕ್ಕೆ ವಿಶೇಷ ಪೂಜೆ:

ಶುಕ್ರವಾರ ಬೆಳಗ್ಗೆ ದೇವಾಲಯದ ಅರ್ಚಕರಿಂದ ೧೦೮ ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು ೫೧ ಅಡಿ ಎತ್ತರದ ಶಿವಲಿಂಗಕ್ಕೆ ಹಾಲು, ತುಪ್ಪದ ಅಭಿಷೇಕ ಮಾಡಿ ಹೂಗಳಿಂದ ಪುಷ್ಪರ್ಚನೆ ಸಲ್ಲಿಸಲಾಯಿತು.

ಸಚಿವ ಕೆ.ಎಚ್.ಮುನಿಯಪ್ಪ, ಶಾಸಕಿ ರೂಪಕಲಾ ಶಶಿಧರ್ ರಥೋತ್ಸವಕ್ಕೆ ಚಾಲನೆ ನೀಡಿದರು.

ಕೆ.ಎಚ್‌. ಮುನಿಯಪ್ಪನವರಿಂದ ಶಿವಲಿಂಗಗಳ ದರ್ಶನ:

ಸಚಿವ ಕೆ.ಎಚ್.ಮುನಿಯಪ್ಪ ಕೋಟಿಲಿಂಗ ದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗಗಳ ದರ್ಶನ ಪಡೆದ ನಂತರ ದೇವಾಲಯದ ಆವರಣದಲ್ಲಿದ್ದ ಎಲ್ಲ ದೇವರಿಗೂ ಪೂಜೆ ಸಲ್ಲಿಸಿ, ನಂತರ ೧೦೮ ಅಡಿ ಎತ್ತರದ ಬೃಹತ್ ಶಿವಲಿಂಗದ ಮುಂಭಾಗ ತನ್ನ ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿದರು.

ಅಪಾರ ಭಕ್ತರ ಸಮೂಹ:

ಶಿವರಾತ್ರಿ ಪ್ರಯುಕ್ತ ಶಿವಲಿಂಗಗಳ ದರ್ಶನಕ್ಕಾಗಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ನಾನಾ ಕಡೆಗಳಿಂದ ಭಕ್ತರ ಸಮೂಹವೇ ಹರಿದು ಬಂದಿತ್ತು. ಕೋಟಿಲಿಂಗಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯದಿಂದ ಸೂಕ್ತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು, ಶಿವರಾತ್ರಿ ಪ್ರಯುಕ್ತ ಕೆಜಿಎಫ್, ಬಂಗಾರಪೇಟೆ, ಕೋಲಾರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ವಿಕೋಟದಿಂದ ಬರುವ ಭಕ್ತರಿಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ವ್ಯಾಪಕ ಪೊಲೀಸ್ ಬಂದೋಬಸ್ತ್:

ಪೊಲೀಸ್ ವರಿಷ್ಠಾದಿಕಾರಿ ಶಾಂತರಾಜು ಮಾರ್ಗದರ್ಶನದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ೧೦೦ಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. ವಾಹನ ದಟ್ಟಣೆ ತಡೆಗಟ್ಟಲು ಪೊಲೀಸರು ಆಯಾ ಕಡೆಗಳಿಂದ ಬರುವ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ