ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅವರ ಪುತ್ರ ಅನ್ವಿತ್ ಹರಿಪ್ರಸಾದ್ ಗ್ರಂಥವನ್ನು ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡ ತುಳು ಸಾಹಿತ್ಯ ವೇದಿಕೆ ಉಡುಪಿ ಜಿಲ್ಲೆ ವಾಟ್ಸಾಪ್ ಬಳಗದಲ್ಲಿ ಪ್ರಸಾರವಾದ, ಶೋಭಾ ಹರಿಪ್ರಸಾದ್ ಅವರು ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಆಧಾರವಾಗಿರಿಸಿ, ತನ್ನದೇ ಚಿಂತನೆ ಅಭಿಪ್ರಾಯಗಳನ್ನು ಅಳವಡಿಸಿ ಬರೆದ 3991 ಭಾಮಿನೀ ಷಟ್ಪದಿಗಳನ್ನು ಹೊಂದಿದ ‘ಶೋಭಾ ರಾಮಾಯಣ’ ಗ್ರಂಥವನ್ನು ರಾಮ ಪ್ರಾಣ ಪ್ರತಿಷ್ಠೆಯಂದು ಬಿಡುಗಡೆ ಮಾಡಲಾಯಿತು.
ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅವರ ಪುತ್ರ ಅನ್ವಿತ್ ಹರಿಪ್ರಸಾದ್ ಗ್ರಂಥವನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಪಾಲ್ಗೊಂಡು ಮಾತನಾಡಿ, ಭಗವಂತನ ಕೆಲಸ ಅವನ ಮಹಿಮೆಯಿಂದಲೇ ಅನುಗ್ರಹಿತವಾಗುತ್ತದೆ. ಶೋಭಾ ಅವರು ನಿರಂತರವಾಗಿ ವಾಟ್ಸಾಪ್ ಬಳಗದಲ್ಲಿ ಧಾರಾವಾಹಿಯಾಗಿ ಉತ್ತರಕಾಂಡ ಸಹಿತ ಬರೆದ ಸಂಪೂರ್ಣ ರಾಮಾಯಣ ಮೂಲಸಂಕಲ್ಪಗಳಿಗೆ ಪೂರಕವಾಗಿ ಯಾವುದೇ ಗೊಂದಲಗಳಿಲ್ಲದೇ ಸಿದ್ಧವಾಗಿದೆ ಎಂದು ಶ್ಲಾಘಿಸಿದರು.
ಶ್ರೀ ದೇವಳದ ಆಡಳಿತಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ವಾಟ್ಸಾಪ್ ವೇದಿಕೆಯ ಸದಸ್ಯೆ ಜಯಶ್ರೀ ಭಟ್ ಗ್ರಂಥಾವಲೋಕನ ಮಾಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.