ದಾವಣಗೆರೆ ಗಾಜಿನ ಮನೆ ಫಲಪುಷ್ಪ ಪ್ರದರ್ಶನದಲ್ಲಿ ‘ಸಿರಿಧಾನ್ಯ ಹಬ್ಬ’

KannadaprabhaNewsNetwork |  
Published : Feb 27, 2026, 01:45 AM IST
ಕ್ಯಾಪ್ಷನ26ಕೆಡಿವಿಜಿ32 ದಾವಣಗೆರೆಯ ಗಾಜಿನ ಮನೆಯಲ್ಲಿ ಸಿರಿಧಾನ್ಯ ಹಬ್ಬಕ್ಕೆ ನಿರ್ಮಿಸಿರುವ ಸುಂದರ ಚಿತ್ರ | Kannada Prabha

ಸಾರಾಂಶ

ನಗರದಲ್ಲಿ ನಾಡಿನ ಶಕ್ತಿ ಅಧಿದೇವತೆಯಾದ ದುರ್ಗಾಂಬಿಕ ಜಾತ್ರಾ ಮಹೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಬೈಪಾಸ್‌ನಲ್ಲಿರುವ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫೆ.25ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು ಮಾ.1ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದಲ್ಲಿ ನಾಡಿನ ಶಕ್ತಿ ಅಧಿದೇವತೆಯಾದ ದುರ್ಗಾಂಬಿಕ ಜಾತ್ರಾ ಮಹೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಬೈಪಾಸ್‌ನಲ್ಲಿರುವ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫೆ.25ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು ಮಾ.1ರವರೆಗೆ ನಡೆಯಲಿದೆ.

ದುರ್ಗಾಂಬಿಕ ಜಾತ್ರೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಬರುವ ನೆಂಟರು, ಸಂಬಂಧಿಕರು ಒಂದು ವಾರದವರೆಗೆ ನಡೆವ ಜಾತ್ರೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುವ ಸಂದರ್ಭದಲ್ಲಿ ಸಿರಿಧಾನ್ಯ ಹಬ್ಬ ಕಾರ್ಯಕ್ರಮ ಆಯೋಜಿಸಿರುವುದು ಮಕ್ಕಳು ಹಾಗೂ ನಾಗರಿಕರಿಗೆ ಹಿತವಾದ ಅನುಭವದೊಂದಿಗೆ ಪೌಷ್ಟಿಕ ಆಹಾರದ ಸಂದೇಶ ನೀಡುವ ವಿವಿಧ ಸಿರಿಧಾನ್ಯಗಳಾದ ಬರಗು, ನವಣೆ, ಕೊರಲೆ, ಹಾರಕ, ಸಾಮೆ, ಊದಲು, ಜೋಳ, ರಾಗಿ ಬೆಳೆಗಳನ್ನು ಬಳಸಿ ನಗರ ಶಕ್ತಿ ದೇವತೆಯ ಸುಂದರ ಮೂರ್ತಿಯ ರಂಗೋಲಿ ಜನಾಕರ್ಷಣೆ ಗಳಿಸಿದೆ.

ರಂಗೋಲಿಯಲ್ಲಿ ಬಳಸಿದ ಸಿರಿಧಾನ್ಯಗಳಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಇವುಗಳನ್ನು ನಿಯಮಿತವಾಗಿ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ, ಮಧುಮೇಹ/ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಾಧ್ಯವಾಗುತ್ತವೆ. ಸಿರಿಧಾನ್ಯಗಳಲ್ಲಿ ಖನಿಜಾಂಶಗಳು, ಐರನ್ ಹೇರಳವಾಗಿರುವುದರಿಂದ, ಮಕ್ಕಳಲ್ಲಿ ಮಹಿಳೆಯರಲ್ಲಿ ಮೂಳೆಗಳ ಸಾಂದ್ರತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ಆರೋಗ್ಯದ ಸಂದೇಶವನ್ನು ರಂಗೋಲಿ ಮೂಲಕ ಸಾರಲಾಗಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಸಿರಿಧಾನ್ಯಗಳನ್ನು ಬೆಳೆಯಲು ವ್ಯಾಪಕ ಪ್ರಚಾರದಿಂದಾಗಿ ವಿರಳವಾಗಿದ್ದ ಸಿರಿಧಾನ್ಯಗಳು ಇಂದು ಸುಲಭವಾಗಿ ಮತ್ತು ಹೇರಳವಾಗಿ ಜನಸಾಮಾನ್ಯರಿಗೆ ಮಾರುಕಟ್ಟೆಯಲ್ಲಿ ಎಲ್ಲಾ ಅಂಗಡಿಗಳಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿವೆ. ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ ನೀಡಲಾದ ಸಂಸ್ಕರಣಾ ಘಟಕಗಳ ಮೂಲಕ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಚಿಕ್ಕಿ, ಚಕ್ಕುಲಿ, ನಿಪ್ಪಟ್ಟು, ದೋಸೆ, ಉಪ್ಪಿಟ್ಟು, ಇಡ್ಲಿ ಹಾಗೂ ಮುಂತಾದ ವಿವಿಧ ಖಾಧ್ಯಗಳನ್ನು ಜನರು ಬಳಸುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಾರೆ.

ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯ ಹಬ್ಬವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯ ನಗರದೇವತೆ ಜಿಲ್ಲೆಯ ರೈತರಿಗೆ ಹಾಗೂ ಜನರಿಗೆ ಸಕಲ ಸಂತೋಷಗಳನ್ನು ನೀಡಿ ಮುಂಬರುವ ದಿನಗಳಲ್ಲಿ ಒಳ್ಳೆಯ ಮಳೆ, ಬೆಳೆಯಾಗಿ ರೈತರಿಗೆ ಸಂತೃಪ್ತರಾಗುವಂತೆ ಹಾರೈಸಲೆಂದು ನುಡಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

]ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದರೆ ಜನ ನಂಬಲ್ಲ: ಶಾಸಕ ಗಣೇಶ್‌
ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ತರಗತಿಗಳು ವರದಾನ: ಡಾ.ಯೋಗೇಶ್