ಮಂಗಳೂರಿನ ಪಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ‘ಸ್ನೋ ಫ್ಯಾಂಟಸಿ’ ಆರಂಭ

KannadaprabhaNewsNetwork | Published : Apr 5, 2024 1:01 AM

ಸಾರಾಂಶ

ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಆಡಳಿತ ಅಧಿಕಾರಿ ಬಿಪಿನ್ ಝಕಾರಿಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತದ ಅತ್ಯಂತ ಪ್ರತಿಷ್ಠಿತ, ಹಿಮ ವಾತಾವರಣದ ಮತ್ತು ಮಂಜಿನ ವಿಶೇಷ ಅನುಭವ ನೀಡುವ ‘ಸ್ನೋ ಫ್ಯಾಂಟಸಿ’ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭಗೊಂಡಿದೆ.ಮಂಗಳೂರಿನ ಪ್ರಥಮ ಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ, ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ ಹಾಗೆಯೇ ಹಿಮ ಶಿಖರಗಳ, ಹಿಮ ಕಣಿವೆಯೊಳಗೆ ಓಡಾಡುವ ಅದ್ಭುತ ಅನುಭವ, ಹಿಮದ ಗುಡ್ಡೆ ಕಟ್ಟುವ ಆಟಗಳು ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿವೆ.

ಮಂಗಳೂರಿನ ಬಿಸಿಲಿನ ವಾತಾವರಣದ ಈ ಸಂದರ್ಭದಲ್ಲಿ ಮನೆ-ಮಂದಿ-ಮಕ್ಕಳೆಲ್ಲ ಒಂದು ಅನುಭವವನ್ನು ಆಸ್ವಾದಿಸುವುದು ಒಳ್ಳೆಯದು ಎನ್ನುತ್ತಾರೆ ಸ್ನೋ ಫ್ಯಾಂಟಸಿಯ ನಿರ್ದೇಶಕ ಆದಿತ್ಯ.

ಅಂತಾರಾಷ್ಟ್ರೀಯ ಗುಣಮಟ್ಟದ ಈ ಸ್ನೋ ಫ್ಯಾಂಟಸಿ ಪ್ರವೇಶ ಪಡೆದವರಿಗೆ ಜಾಕೆಟ್, ಸಾಕ್ಸ್, ಬೂಟ್, ಮುಂತಾದವುಗಳನ್ನ ನೀಡಲಾಗುವುದು. ಅವರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಗಟ್ಟುವ ಎಲ್ಲ ಕಾರ್ಯಕ್ಷಮತೆ, ಸೇಫ್ಟಿ ಫೀಚರ್‌ಗಳನ್ನು ಅಳವಡಿಸಲಾಗಿದೆ.

ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಿಒಒ ಜಯೇನ್ ನಾಯಕ್ ಮಾತನಾಡಿ, ಸ್ನೋ ಫ್ಯಾಂಟಸಿ- ಫೆಂಟಾಸ್ಟಿಕ್ ಆಗಿದ್ದು ನಮ್ಮ ಮಾಲ್‌ನ್ನು ಆಯ್ಕೆ ಮಾಡಿರುವುದು ಸಂತೋಷ ಎಂದರು.

ಸ್ನೋ ಫ್ಯಾಂಟಸಿಯ ವಿಶೇಷತೆಗಳ ಬಗ್ಗೆ ಮೆನೇಜ್‌ಮೆಂಟ್‌ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ, ಮಂಗಳೂರಿನ ಜನತೆ ತಮ್ಮ ಕಿಟ್ಟಿ ಪಾರ್ಟಿ, ಬರ್ತಡೇ ಹಾಗೂ ಗೆಳೆಯರ ಆಟ- ಕೂಟಗಳನ್ನು ಗ್ರೂಪ್ ಬುಕಿಂಗ್ ಮೂಲಕ ನಡೆಸಿದರೆ ಅವರ ಸಂತೋಷ ದುಪ್ಪಟ್ಟಾಗುವುದು ಖಂಡಿತ ಎಂದರು. ಕಂಪನಿಯ ಇನ್ನೋರ್ವ ನಿರ್ದೇಶಕ ವಿಪಿನ್ ಝಕಾರಿಯ ಮಾತನಾಡಿ, ಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲ ವರ್ಗದ ಜನರಿಗೆ ಸಂತೋಷ ನೀಡುವ ಉದ್ದೇಶದಿಂದಾಗಿ ಆರಂಭವಾಗಿದೆ. ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಗುಣಮಟ್ಟದ ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್.... ಸ್ನೋ ಫ್ಯಾಂಟಸಿಯ ವಿಶೇಷಗಳು ಎನ್ನುತ್ತಾರೆ ನಿಯೋಸ್ನೋ ಅಮ್ಯೂಸ್ಮೆಂಟ್ ಅಂಡ್ ಪಾರ್ಕ್ ಇಂಡಿಯಾ (ಪ್ರೈ) ಲಿಮಿಟೆಡ್ ಕಂಪನಿಯ ಚೇರ್ಮನ್ ಹಾಗೂ ಮುಖ್ಯಸ್ಥ ಕ್ಯಾಪ್ಟನ್ . ಟಿ. ಎಸ್. ಅಶೋಕನ್.

ಈ ಸಂದರ್ಭ ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಹಾಗೂ ನೆಕ್ಷಸ್ ಸೆಲೆಕ್ಟ್ ಮಾಲ್ಸ್, ರೀಜನಲ್ ಮುಖ್ಯಸ್ಥ ತನ್ವೀರ್ ಶೇಖ್‌ ಇದ್ದರು. ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಆಡಳಿತ ಅಧಿಕಾರಿ ಬಿಪಿನ್ ಝಕಾರಿಯ ತಿಳಿಸಿದರು.

Share this article