ಕನ್ನಡಪ್ರಭ ವಾರ್ತೆ ಸರಗೂರುಜೀವನದಲ್ಲಿ ಕಷ್ಟ, ಸುಖ ಎರಡನ್ನು ಸಮಾನವಾಗಿ ಪ್ರೀತಿ, ಧೈರ್ಯದಿಂದ ಸ್ವೀಕರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಚನ್ನಗುಂಡಿ ಗ್ರಾಮದಲ್ಲಿ ನಡೆದ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ, ಕಳಶರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಮೊದಲು ಕಷ್ಟ ಬಂದಾಗ ಸ್ವೀಕರಿಸಬೇಕು. ಅನಂತರ ಸುಖ ಸಿಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಜವಾದ ಭಕ್ತಿ ತೋರಿಸುವವರಿಗೆ ಭಗವಂತ ಕಷ್ಟ ಕೊಡುತ್ತಲ್ಲೇ ಇರುತ್ತಾನೆ. ಭಕ್ತಿಯಿಂದ ಇರುವವರಿಗೆ ಪರೀಕ್ಷೆ ಮಾಡುತ್ತಾನೆ. ಭಗವಂತ ಏನೇ ಕಷ್ಟ ಕೊಟ್ಟರೂ ಪ್ರೀತಿ, ಧೈರ್ಯದಿಂದ ಸ್ವೀಕರಿಸಬೇಕು. ಆಗ ಯಶಸ್ಸು ಸಿಗಲಿದೆ. ಬಂದುದ್ದೆಲ್ಲ ಭಗವಂತನ ಕೃಪೆ ಎಂದು ಅರ್ಥೈಹಿಸಿಕೊಳ್ಳಬೇಕು ಎಂದು ಅವರು ಹೇಳಿದರು. ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಬಿಡಗಲು ಪಡುವಲ ವಿರಕ್ತಮಠದ ಶ್ರೀ ಮಹದೇವ ಸ್ವಾಮೀಜಿ, ದಡದಹಳ್ಳಿ ಮಠದ ಶ್ರೀ ಷಡಕ್ಷರ ಸ್ವಾಮಿಜಿ, ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕಿರಿಯ ಶ್ರೀ ತೋಂಟದಾರ್ಯ ಸ್ವಾಮಿಜಿ, ದೇವನೂರು ಮಹಾ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಮಾದಪಟ್ಟಣದ ಶ್ರೀ ತೋಂಟದಾರ್ಯ ಸ್ವಾಮೀಜಿ, ಕುರುಬರ ಹುಂಡಿ ಮಠದ ಶ್ರೀ ಇಮ್ಮಡಿ ಮಹಾಂತ ಸ್ವಾಮೀಜಿ, ಪುರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೈಸೂರಿನ ಕುದೇರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗ ಸ್ವಾಮಿಗಳು, ಬೀಚನಹಳ್ಳಿಯ ಪುರ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಮಾದಾಪುರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರಿನ ಹುಲ್ಲಿನ ಬೀದಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಜಕ್ಕಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಯಡಿಯಾಲ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಚನ್ನಗುಂಡಿಯ ಶ್ರೀ ಗುರುಮಲ್ಲದೇವರು ಆಶೀರ್ವಚನ ನೀಡಿದರು. ಗುಂಡ್ಲುಪೇಟೆ ಡಿ.ಬಿ. ಸರಗೂರು ಪದವಿ ಪೂರ್ವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ್ ಮಾತನಾಡಿದರು.ಶಾಸಕ ಅನಿಲ್ ಚಿಕ್ಕಮಾದು, ಮೈಮುಲ್ ಅಧ್ಯಕ್ಷ ಕೆ. ಈರೇಗೌಡ ಅವರನ್ನು ಸಮಿತಿಯಿಂದ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.ಮೈಸೂರಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಿನ್ಕಲ್ ಬಸವರಾಜು, ಸರಗೂರು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ, ಮಾಜಿ ಅಧ್ಯಕ್ಷ ಡಿ.ಜಿ. ಶಿವರಾಜ್, ಎಸ್. ಮಳಲಿ ರುದ್ರಪ್ಪ, ಬಸವರಾಜು, ಮೈಸೂರಿನ ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ತಾಲೂಕು ಘಟಕದ ಮಹಾಸಭಾದ ಕಾರ್ಯಾಧ್ಯಕ್ಷ ಸಿ.ಕೆ. ಗಿರೀಶ್, ಜೆಡಿಎಸ್ ಮುಖಂಡ ಜಯಪ್ರಕಾಶ್ ಇದ್ದರು.