ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ

KannadaprabhaNewsNetwork |  
Published : Nov 25, 2025, 01:30 AM IST
ಸಿಆರ್‌ಪಿ೧ಪೋಟೋಸುದ್ದಿ: ಚನ್ನರಾಯಪಟ್ಟಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ ಅಭಿನಯಿಸಿದ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಉದ್ಘಾಟಿಸಿದರು.ಚನ್ನರಾಯಪಟ್ಟಣ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ ಅಭಿನಯಿಸಿದ ಕುರುಕ್ಷೇತ್ರ ನಾಟಕ ಪ್ರದರ್ಶನ ಕಂಡಿದ್ದು, ವೀಕ್ಷರ ಮೆಚ್ಚುಗೆಗೆ ಪಾತ್ರವಾಯಿತು.ಪೌರಾಣಿಕ ನಾಟಕಗಳೆಂದರೆ ಸಂಸ್ಕೃತ ಭಾ?ಯ ಮೇಲೆ ಹಿಡಿತ, ಗಾಂಭೀರ್ಯ ತೆ, ವಿ?ಯ ಸೂಕ್ಷ್ಮತೆ ಎಲ್ಲವನ್ನು ಮೈ ಗೂಡಿಸಿ ಕೊಳ್ಳುವುದರ ಜೊತೆಗೆ ಪಾತ್ರದ : ಗಾಂಭೀರ್ಯತೆಯನ್ನು ಪ್ರದರ್ಶಿಸಬೇಕಾ ಗುತ್ತದೆ. ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ಶಾಲಾ ವಿದ್ಯಾರ್ಥಿಳು ಸಹಜ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವುದು ಸಾಧ ನೆಯೇ ಸರಿ. ದಿನದ ೨೪ ಗಂಟೆ ಮೊಬೈಲ್ ನಲ್ಲೇ ಮುಳುಗುವ ವಿದ್ಯಾರ್ಥಿಗಳು ಆದೆ ಲ್ಲವನ್ನೂ ಬಿಟ್ಟು ಬಣ್ಣ ಹಚ್ಚಿ ಕಲಾವಿದ ರಾಗಿದ್ದು ಆಶಾದಾಯಕ ಬೆಳವಣಿಗೆಯಾಚನ್ನರಾಯಪಟ್ಟಣ ತಾಲ್ಲೂಕು ಕಲೆಗಳ ನಾಡು. ಗುಬ್ಬಿ ವೀರಣ್ಣ ಕಂಪನಿ, ರಾಮ ಚಂದ್ರ ರಾಯರು, ಮಾಸ್ಟರ್ ಹಿರಿಯ ಣ್ಣಯ್ಯ, ಹಂಸಲೇಖ, ಲಕ್ಷ್ಮೀ ಚಂದ್ರ ಶೇಖರ್, ವಾಸುದೇವರಾವ್, ಚಿಂದೋಡಿ ಲೀಲಾ ಸೇರಿ ಹೆಸರಾಂತ ನಾಟಕಕಾರರ ನೆಲೆ ಬೀಡಾಗಿದೆ. ಸಾಮಾಜಿಕ ಹಾಗು ಪೌರಾಣಿಕ ನಾಟಕ ಪ್ರಯೋಗ ಇಲ್ಲಿ ನಡೆದಿವೆ.ತಾಲ್ಲೂಕು ಹೆಚ್ಚು ಕಲಾವಿದರನ್ನು ಹೊಂದಿದ್ದು, ಗ್ರಾಮೀಣ ಭಾಗದ ಪ್ರಚಲಿತ ನಾಟಕ ಕುರುಕ್ಷೇತ್ರ ಆಗಿದೆ. ನೂರಾರು ಬಾರಿ ಬಿ. ಪುಟ್ಟಸ್ವಾಮಯ್ಯ ಅವರ ಕುರುಕ್ಷೇತ್ರ ನಾಟಕ ಪ್ರಯೋಗಗೊಂಡಿದ್ದು, ಇತ್ತೀಚೆಗೆ ಮಹಿಳಾ ಪಾತ್ರಧಾರಿಗಳೇ ’ಅಭಿನಯಿಸಿ ಶಹಬ್ಬಾ? ಗಿರಿ ಪಡೆದಿದ್ದಾರೆ. ಇದೀಗ ೧೮ ಮಕ್ಕಳು, ಕುರುಕ್ಷೇತ್ರ ನಾಟಕ ಅಭಿನಯ ಮಾಡುವ ಮೂಲಕ ನಾಟಕ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದ ತಂಡ ೧೮ ಮಕ್ಕಳನ್ನು ಒಟ್ಟುಗೂಡಿಸಿ ಅಭಿನಯ ಕಲಿಸಿರುವುದು ಒಂದೆಡೆಯಾದರೆ ತೆರೆ ಮೇಲೆ ಅದನ್ನು ತರುವಲ್ಲಿ ಶ್ರಮ ವಹಿಸಿದ ತಂಡದ ಕಾರ್ಯವನ್ನು ಶ್ಲಾಘಿಸಲೇಬೇಕಾ ಗುತ್ತದೆ. ಕುರುಕ್ಷೇತ್ರ ನಾಟಕ ಮಕ್ಕಳಿಂದ ಅಭಿನಯವಾಗಿ ರಂಜನೆ ಮಾಹಿತಿ, ಸಮಾಜಕ್ಕೆ ನೀತಿಗಳನ್ನು ಸಾರುವ ಮೂಲಕ, ದಾಖಲೆ ನಿರ್ಮಿಸಿದೆ. ಬಾಲ ಕಲಾವಿದರು ಭವಿ?ದಲ್ಲಿ ಉತ್ತಮ ಕಲಾವಿದರಾಗುವ ಲಕ್ಷಣಗಳನ್ನು ಹೊರ ಹೊಮ್ಮಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಡ್ರಾಮಾ ಸೀನ್ಸ್ ವೇದಿಕೆ ವ್ಯವಸ್ಥಾಪಕ ಹಿತೈಶ್ ರಾಜೇಶ್, ರಂಗಪ್ಪ ಬೆಳೆ ಚೌಡೇನಹಳ್ಳಿ, ರಾಜೇಶ್ ಕೆಂಚನಹಳ್ಳಿ, ಹನುಮೇಗೌಡ, ವಾದ್ಯ ನುಡಿಸಿದ ಲೋಕ ರಾಮ್, ಸಚಿನ್, ರಂಗರಾಜು, ಕುಮಾರ್ ನಾಟಕ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ.ರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಹಾ ಬುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಹಾಗು ಕೇಸರಿ ನಂದನ ಕಲಾ ಸಂಘ ದಿಂದ ಆಯೋಜಿಸಿದ್ದ ನಾಟಕ ಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು. ಸೊಗಸಾದ ಅಭಿನಯದ ಮೂಲಕ ಎಲ್ಲಾ ಪಾತ್ರಧಾರಿ ಗಳು ಚಪ್ಪಾಳೆ ಗಿಟ್ಟಿಸಿದರು. ನಾಟಕ ಯಶಸ್ಸಿಗೆ ವಿದ್ವಾನ್ ರಾಮಚಂದ್ರ, ನಿರ್ದೇಶಕ ಪ್ರಜ್ವಲ್ ಜಗದೀಶ್, ಕಾರ್ಯಕ್ರಮದ ರೂವಾರಿ ರಾಜೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಲೋಕೇಶ್, ಸುರೇಶ್ ರಾಜಕುಮಾರ್, ಮುಂತಾದ ವರು ಬಿ.ಬಿ.ಗೌಡ ಸಹಕರಿಸಿದ್ದಾರೆ.ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ, ನಾಟಕ, ಕಲೆ, ಸಂಸ್ಕೃತಿಯನ್ನು ಬೆಳೆಸುವ, ನಶಿಸುತ್ತಿರುವ ರಂಗಕಲೆಯನ್ನ ಪುನರು ಜೀವನಗೊಳಿಸುವ ಹಾಗು ಮೊಬೈಲ್ ನಿಂದ ಮಕ್ಕಳನ್ನು ದೂರ ಇರಿಸುವ ಪ್ರಯತ್ನ ಇದಾಗಿದೆ.೧೮ ಮಕ್ಕಳ ತಂಡ ರಚಿಸಿ ಏಳು ತಿಂಗಳ ನಾಟಕದ ಕಾಲ ಸತತ ಕುರುಕ್ಷೇತ್ರ ತಾಲಿಮು ನೀಡಿದ್ದು ವಿಶೇ?. ಹಿರಿಯ ಕಲಾವಿದರನ್ನು ಮೀರಿಸುವಂತೆ ಮಕ್ಕಳು ನಾಟಕದಲ್ಲಿ ತಲ್ಲೀ ನರಾಗಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೃ?ನ ಪಾತ್ರಧಾರಿ ಯಾಗಿ ಕೆ.ಆರ್.ಧಣಿ, ದುರ್ಯೋಧನ-ಧನು?, ರುಕ್ಕಿಣಿ-ಹನಿ, ಅರ್ಜುನ-ಧ್ಯಾನ್, ಭೀಮ-ರಿಶಾಂತ್ ವಿಶಿ? ಅಭಿನ ಯದ ಮೂಲಕ ಪ್ರೌಢಿಮೆ ಮೆರೆದರು. ನಿರಂತರವಾಗಿ ಸುಮಾರು ೭ ಗಂಟೆಗಳ ಕಾಲ ನಾಟಕ ನಡೆದು ಪಾತ್ರದಲ್ಲಿ ಬರುವ ಸಂಗೀತ ಹಾಡು ಸಂಭಾ?ಣೆಗಳನ್ನು ನಿರರ್ಗಳವಾಗಿ ತಪ್ಪಿಲ್ಲದಂತೆ ಭಾವಪೂರ್ಣ ವಾಗಿ ಅಭಿನಯಿಸಿದ್ದು ವಿಶೇ? ತಂದಿತ್ತು.ವಿದುರ-ಕುಶಾಲ್, ಅಭಿಮನ್ಯು-ಮಧುವನ, ಕುಂತಿ,ದೌಪದಿ ಪಾತ್ರದಲ್ಲಿ ಧನ್ಯರಾಜ್, ಉತ್ತರೆ ಪಾತ್ರದಲ್ಲಿ ಲಹರಿ, ದುಶ್ಯಾಸನಾಗಿ ಧನ್ಯ ರಾಜ್ ಕರ್ಣನಾಗಿ ಉತ್ಕ?, ಶಕುನಿಯಾಗಿ ರಮ್ಯ, ಸಾತ್ಯಕೀ ಶೀತಲಾಂಬ, ಭೀ? ಶೌರ್ಯ, ದ್ರೋಣಾ ಚಾರ್ಯ ಪ್ರಥಮ್, ನರ್ತಕಿಯರಾಗಿ ಕೀರ್ತನ, ತ್ರಿಶಾ ಅಭಿನಯ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿಆನಂದ್, ಬಿಜೆಪಿ ಮುಖಂಡ ಸಿ. ಆರ್. ಚಿದಾನಂದ್, ಎಂ.ಎ.ರಂಗಸ್ವಾಮಿ ಮತ್ತಿತರಿದ್ದರು. | Kannada Prabha

ಸಾರಾಂಶ

ಪೌರಾಣಿಕ ನಾಟಕಗಳೆಂದರೆ ಸಂಸ್ಕೃತ ಭಾಷೆಯ ಮೇಲೆ ಹಿಡಿತ, ಗಾಂಭೀರ್ಯತೆ, ವಿಷಯ ಸೂಕ್ಷ್ಮತೆ ಎಲ್ಲವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಪಾತ್ರದ ಗಾಂಭೀರ್ಯತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ಶಾಲಾ ವಿದ್ಯಾರ್ಥಿಗಳು ಸಹಜ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವುದು ಸಾಧನೆಯೇ ಸರಿ. ದಿನದ ೨೪ ಗಂಟೆ ಮೊಬೈಲ್‌ನಲ್ಲೇ ಮುಳುಗುವ ವಿದ್ಯಾರ್ಥಿಗಳು ಅದೆಲ್ಲವನ್ನೂ ಬಿಟ್ಟು ಬಣ್ಣ ಹಚ್ಚಿ ಕಲಾವಿದ ರಾಗಿದ್ದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ ಅಭಿನಯಿಸಿದ ಕುರುಕ್ಷೇತ್ರ ನಾಟಕ ಪ್ರದರ್ಶನ ಕಂಡಿದ್ದು, ವೀಕ್ಷರ ಮೆಚ್ಚುಗೆಗೆ ಪಾತ್ರವಾಯಿತು.

ಪೌರಾಣಿಕ ನಾಟಕಗಳೆಂದರೆ ಸಂಸ್ಕೃತ ಭಾಷೆಯ ಮೇಲೆ ಹಿಡಿತ, ಗಾಂಭೀರ್ಯತೆ, ವಿಷಯ ಸೂಕ್ಷ್ಮತೆ ಎಲ್ಲವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಪಾತ್ರದ ಗಾಂಭೀರ್ಯತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ಶಾಲಾ ವಿದ್ಯಾರ್ಥಿಗಳು ಸಹಜ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವುದು ಸಾಧನೆಯೇ ಸರಿ. ದಿನದ ೨೪ ಗಂಟೆ ಮೊಬೈಲ್‌ನಲ್ಲೇ ಮುಳುಗುವ ವಿದ್ಯಾರ್ಥಿಗಳು ಅದೆಲ್ಲವನ್ನೂ ಬಿಟ್ಟು ಬಣ್ಣ ಹಚ್ಚಿ ಕಲಾವಿದ ರಾಗಿದ್ದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಚನ್ನರಾಯಪಟ್ಟಣ ತಾಲೂಕು ಕಲೆಗಳ ನಾಡು. ಗುಬ್ಬಿ ವೀರಣ್ಣ ಕಂಪನಿ, ರಾಮಚಂದ್ರ ರಾಯರು, ಮಾಸ್ಟರ್‌ ಹಿರಿಯಣ್ಣಯ್ಯ, ಹಂಸಲೇಖ, ಲಕ್ಷ್ಮೀ ಚಂದ್ರಶೇಖರ್, ವಾಸುದೇವರಾವ್, ಚಿಂದೋಡಿ ಲೀಲಾ ಸೇರಿ ಹೆಸರಾಂತ ನಾಟಕಕಾರರ ನೆಲೆ ಬೀಡಾಗಿದೆ. ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಪ್ರಯೋಗ ಇಲ್ಲಿ ನಡೆದಿವೆ.ಮೈಸೂರಿನ ಚಾಮುಂಡೇಶ್ವರಿ ಡ್ರಾಮಾ ಸೀನ್ಸ್ ವೇದಿಕೆ ವ್ಯವಸ್ಥಾಪಕ ಹಿತೈಶ್ ರಾಜೇಶ್, ರಂಗಪ್ಪ ಬೆಳೆ ಚೌಡೇನಹಳ್ಳಿ, ರಾಜೇಶ್ ಕೆಂಚನಹಳ್ಳಿ, ಹನುಮೇಗೌಡ, ವಾದ್ಯ ನುಡಿಸಿದ ಲೋಕರಾಮ್, ಸಚಿನ್, ರಂಗರಾಜು, ಕುಮಾರ್‌ ನಾಟಕ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ.

ರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಹಾಬುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಹಾಗು ಕೇಸರಿ ನಂದನ ಕಲಾ ಸಂಘ ದಿಂದ ಆಯೋಜಿಸಿದ್ದ ನಾಟಕ ಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು. ಸೊಗಸಾದ ಅಭಿನಯದ ಮೂಲಕ ಎಲ್ಲಾ ಪಾತ್ರಧಾರಿ ಗಳು ಚಪ್ಪಾಳೆ ಗಿಟ್ಟಿಸಿದರು. ನಾಟಕ ಯಶಸ್ಸಿಗೆ ವಿದ್ವಾನ್ ರಾಮಚಂದ್ರ, ನಿರ್ದೇಶಕ ಪ್ರಜ್ವಲ್ ಜಗದೀಶ್, ಕಾರ್ಯಕ್ರಮದ ರೂವಾರಿ ರಾಜೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್, ಸುರೇಶ್ ರಾಜಕುಮಾರ್, ಮುಂತಾದ ವರು ಬಿ.ಬಿ.ಗೌಡ ಸಹಕರಿಸಿದ್ದಾರೆ.

ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ, ನಾಟಕ, ಕಲೆ, ಸಂಸ್ಕೃತಿಯನ್ನು ಬೆಳೆಸುವ, ನಶಿಸುತ್ತಿರುವ ರಂಗಕಲೆಯನ್ನ ಪುನರುಜ್ಜೀವನಗೊಳಿಸುವ ಹಾಗೂ ಮೊಬೈಲ್‌ನಿಂದ ಮಕ್ಕಳನ್ನು ದೂರ ಇರಿಸುವ ಪ್ರಯತ್ನ ಇದಾಗಿದೆ.

೧೮ ಮಕ್ಕಳ ತಂಡ ರಚಿಸಿ ಏಳು ತಿಂಗಳ ನಾಟಕದ ಕಾಲ ಸತತ ಕುರುಕ್ಷೇತ್ರ ತಾಲಿಮು ನೀಡಿದ್ದು ವಿಶೇಷ, ಹಿರಿಯ ಕಲಾವಿದರನ್ನು ಮೀರಿಸುವಂತೆ ಮಕ್ಕಳು ನಾಟಕದಲ್ಲಿ ತಲ್ಲೀನರಾಗಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೃಷ್ಣನ ಪಾತ್ರಧಾರಿಯಾಗಿ ಕೆ.ಆರ್‌. ಧಣಿ, ದುರ್ಯೋಧನ-ಧನುಷ್‌, ರುಕ್ಮಿಣಿ-ಹನಿ, ಅರ್ಜುನ-ಧ್ಯಾನ್, ಭೀಮ-ರಿಶಾಂತ್ ವಿಶಿಷ್ಟ ಅಭಿನಯದ ಮೂಲಕ ಪ್ರೌಢಿಮೆ ಮೆರೆದರು. ನಿರಂತರವಾಗಿ ಸುಮಾರು ೭ ಗಂಟೆಗಳ ಕಾಲ ನಾಟಕ ನಡೆದು ಪಾತ್ರದಲ್ಲಿ ಬರುವ ಸಂಗೀತ ಹಾಡು ಸಂಭಾಷಣೆಗಳನ್ನು ನಿರರ್ಗಳವಾಗಿ ತಪ್ಪಿಲ್ಲದಂತೆ ಭಾವಪೂರ್ಣವಾಗಿ ಅಭಿನಯಿಸಿದ್ದು ವಿಶೇಷ ತಂದಿತ್ತು.

ವಿದುರ-ಕುಶಾಲ್, ಅಭಿಮನ್ಯು-ಮಧುವನ, ಕುಂತಿ, ದೌಪದಿ ಪಾತ್ರದಲ್ಲಿ ಧನ್ಯರಾಜ್, ಉತ್ತರೆ ಪಾತ್ರದಲ್ಲಿ ಲಹರಿ, ದುಶ್ಯಾಸನಾಗಿ ಧನ್ಯರಾಜ್ ಕರ್ಣನಾಗಿ ಉತ್ಕರ್ಷ, ಶಕುನಿಯಾಗಿ ರಮ್ಯ, ಸಾತ್ಯಕೀ ಶೀತಲಾಂಬ, ಭೀಮ ಶೌರ್ಯ, ದ್ರೋಣಾಚಾರ್ಯ ಪ್ರಥಮ್, ನರ್ತಕಿಯರಾಗಿ ಕೀರ್ತನ, ತ್ರಿಶಾ ಅಭಿನಯ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿಆನಂದ್, ಬಿಜೆಪಿ ಮುಖಂಡ ಸಿ. ಆರ್‌. ಚಿದಾನಂದ್, ಎಂ.ಎ.ರಂಗಸ್ವಾಮಿ ಮತ್ತಿತರಿದ್ದರು.

PREV

Recommended Stories

ದಿಲ್ಲಿಯಲ್ಲಿ ಈಗ ಡಿಕೆಶಿ ಪರ ಆಪ್ತ ಶಾಸಕರ ಬಹಿರಂಗ ಲಾಬಿ!
ಮನೆ ಬಳಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೇರಳಿಗರ ಗೂಂಡಾಗಿರಿ