ಬಸ್‌ ಡಿಪೋಗೆ ತೆರಳಿ ಪ್ರತಿಭಟಿಸಿದ ವಿದ್ಯಾರ್ಥಿಗಳು

KannadaprabhaNewsNetwork |  
Published : Dec 18, 2025, 12:15 AM IST
17ಎಚ್ಎಸ್ಎನ್12 : ನಿಗಧಿತ ಸಮಯಕ್ಕೆ ಬಸ್ ಬಾರದೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು  ಬಾಸುರ , ಉಂಬಳಗೋಡು, ಹಿರೇಸೀಗರ  ಸುತ್ತಮುತ್ತಲಿನ ವಿದ್ಯಾರ್ಥಿಗಳು ಬಸ್ ಡಿಪೋಗೆ ತೆರಳಿ ಪ್ರತಿಭಟನೆ  ನಡೆಸಿದರು,.  | Kannada Prabha

ಸಾರಾಂಶ

ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿ ತಿಳಿಸಿದ ಬಳಿಕ ಮೂರ್ನಾಲ್ಕು ದಿನ ನಿಗದಿತ ಸಮಯಕ್ಕೆ ಬಂದಿತ್ತು. ತದನಂತರ ಅದೇ ನಾಡಾಗಿದೆ. ಒಂದು ದಿನ 9ಕ್ಕೆ ಬಂದರೆ ಇನ್ನೊಂದು ದಿನ 9.30ಕ್ಕೆ ಬರುತ್ತೆ. ಅದೇ ಪರಿಸ್ಥಿತಿ ಮುಂದುವರಿದರೆ ಶಾಲೆಗೆ ತೆರಳಲು ಸಮಸ್ಯೆ ಆಗುತ್ತದೆ, ಲೇಟಾಗಿ ಶಾಲೆಗೆ ಹೋದರೆ ಶಿಕ್ಷಕರು ಶಾಲೆಗೆ ಬರಬೇಡಿ ಅನ್ನುತ್ತಾರೆ. ಆಗ ನಾವೇನು ಮಾಡಬೇಕು. ಹಣ ಇದ್ದವರು ಖಾಸಗಿ ವಾಹನದಲ್ಲಿ ತೆರಳುತ್ತಾರೆ ಬಡವರಾದ ನಾವೇನು ಮಾಡೋದು ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕೆಲವು ದಿನಗಳಿಂದ ನಿಗದಿತ ಸಮಯಕ್ಕೆ ಬಸ್ ಬಾರದೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಬಾಸುರ, ಉಂಬಳಗೋಡು, ಹಿರೇಸೀಗರ ಸುತ್ತಮುತ್ತಲಿನ ವಿದ್ಯಾರ್ಥಿಗಳು ಬಸ್ ಡಿಪೋಗೆ ತೆರಳಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆದಿದೆ.

ಅರೇಹಳ್ಳಿ ಪಟ್ಟಣದ ವಿವಿಧಶಾಲೆಗಳಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಕೆಲವು ದಿನಗಳಿಂದ ನಿಗದಿತ ಸಮಯಕ್ಕೆ ಬಸ್ ಬಾರದೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಿದ್ಯಾರ್ಥಿನಿ ವಿನುತಾ ಮಾತನಾಡಿ, ನಮ್ಮ ಗ್ರಾಮಕ್ಕೆ ಬಸ್ ಬರುವುದು ವಿಳಂಬವಾದರೆ ನಾವು ಶಾಲೆಗಳಿಗೆ ತಡವಾಗಿ ಹೋದರೆ ಶಿಕ್ಷಕರು ಶಾಲೆಗೆ ಸೇರಿಸುವುದಿಲ್ಲ , ಆ ಸಮಯದ ತರಗತಿ ಕಳೆದುಕೊಳ್ಳುತ್ತೇವೆ ಅದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತದೆ. ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿ ತಿಳಿಸಿದ ಬಳಿಕ ಮೂರ್ನಾಲ್ಕು ದಿನ ನಿಗದಿತ ಸಮಯಕ್ಕೆ ಬಂದಿತ್ತು. ತದನಂತರ ಅದೇ ನಾಡಾಗಿದೆ. ಒಂದು ದಿನ 9ಕ್ಕೆ ಬಂದರೆ ಇನ್ನೊಂದು ದಿನ 9.30ಕ್ಕೆ ಬರುತ್ತೆ. ಅದೇ ಪರಿಸ್ಥಿತಿ ಮುಂದುವರಿದರೆ ಶಾಲೆಗೆ ತೆರಳಲು ಸಮಸ್ಯೆ ಆಗುತ್ತದೆ, ಲೇಟಾಗಿ ಶಾಲೆಗೆ ಹೋದರೆ ಶಿಕ್ಷಕರು ಶಾಲೆಗೆ ಬರಬೇಡಿ ಅನ್ನುತ್ತಾರೆ. ಆಗ ನಾವೇನು ಮಾಡಬೇಕು. ಹಣ ಇದ್ದವರು ಖಾಸಗಿ ವಾಹನದಲ್ಲಿ ತೆರಳುತ್ತಾರೆ ಬಡವರಾದ ನಾವೇನು ಮಾಡೋದು ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಪ್ರತಿ ಭಾಷಣಗಳಲ್ಲೂ ರಾಜಕಾರಣಿಗಳು ಹೇಳುತ್ತಾರೆ. ಆದರೆ ವಿದ್ಯಾರ್ಥಿಗಳು ಈಗ ಶಾಲೆಗೆ ತೆರಳದೆ ಶಿಕ್ಷಣ ಪಡೆಯದೆ ಭವಿಷ್ಯದಲ್ಲಿ ಉತ್ತಮ ವಿದ್ಯಾವಂತ ಪ್ರಜೆಗಳಾಗಲು ಹೇಗೆ ಸಾಧ್ಯ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸ್ಪಂದನ, ವಂದನಾ, ಪೂಜಾ, ಚೈತ್ರಾ, ವೇಣು, ಶ್ರೇಯಸ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ
ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ