ವಿದ್ಯಾರ್ಥಿಗಳು ವ್ಯಾಸಂಗ ಮಾಡುವಾಗಲೇ ವೃತ್ತಿ ಆಯ್ಕೆ ಮಾಡಿರಬೇಕು: ವಿ.ಬಿ.ಚಿರಂಜೀವಿ ಸಲಹೆ

KannadaprabhaNewsNetwork |  
Published : Mar 06, 2025, 12:30 AM IST
ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಉದ್ಘಾಟಿಸಿದರು | Kannada Prabha

ಸಾರಾಂಶ

ನರಸಿಂಹರಾಜಪುರ, ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುವಾಗಲೇ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು ಎಂದು ಭದ್ರಾವತಿ ಸರ್.ಎಂ.ವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿ.ಬಿ.ಚಿರಂಜೀವಿ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುವಾಗಲೇ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು ಎಂದು ಭದ್ರಾವತಿ ಸರ್.ಎಂ.ವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿ.ಬಿ.ಚಿರಂಜೀವಿ ಸಲಹೆ ನೀಡಿದರು.ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶದ ಆಶ್ರಯದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಂತ್ರಜ್ಞಾನ ಬದಲಾದಂತೆ ಅದನ್ನು ಟೀಕಿಸುವ ಬದಲು ಅದಕ್ಕೆ ತಕ್ಕಂತೆ ಜ್ಞಾನ, ಕೌಶಲ್ಯ ಬೆಳೆಸಿಕೊಂಡು ಅದಕ್ಕೆ ಹೊಂದಿಕೊಳ್ಳಬೇಕು. ಜೀವನದಲ್ಲಿ ನಿರಂತರ ಕಲಿಯುವುದು ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಎದುರಿಸಲು ಜಗತ್ತು ಬದಲಾದಂತೆ ನಾವು ಬದಲಾಗಬೇಕು ಎಂದು ಹೇಳಿದರು.

ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಅಭಿವೃದ್ಧಿಯಿಂದ(ಎಐ) ವೃತ್ತಿ ಜೀವನಕ್ಕೆ ಹಲವಾರು ಸವಾಲುಗಳಿವೆ. ಪದವಿ ನಂತರ ಉದ್ಯೋಗ ಮಾಡುವುದೇ ಉನ್ನತ ವ್ಯಾಸಂಗ ಮಾಡುವುದೇ ಎಂಬ ಬಗ್ಗೆ ನಿಮ್ಮ ಒಳಿತನ್ನು ಬಯಸುವವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಪದವಿ ಪೂರ್ಣಗೊಳ್ಳುವ ಮುಂಚೆಯೇ ನಿರ್ಧರಿಸಿರಬೇಕು ಎಂದರು. ನಂತರ ಪ್ರಾತ್ಯಕ್ಷಿಕೆ ಮೂಲಕ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಉದ್ಘಾಟಿಸಿ ಮಾತನಾಡಿ, ಉತ್ತಮ ನಾಗರಿಕರಾಗಿ ಬದುಕುವ, ಕೌಶಲಕ್ಕೆ ತಕ್ಕಂತೆ ಉದ್ಯೋಗ ಹೊಂದುವುದು ಸಹ ವೃತ್ತಿ ಅಭಿವೃದ್ಧಿಯಾಗಿದೆ. ಕೇವಲ ಸರ್ಕಾರಿ ಹುದ್ದೆ ಪಡೆಯು ವುದು ಮಾತ್ರ ಉದ್ಯೋಗವಲ್ಲ. ಖಾಸಗಿ ಕ್ಷೇತ್ರಗಳಲ್ಲೂ ಉತ್ತಮ ಉದ್ಯೋಗ ಪಡೆಯುವ ಅವಕಾಶವಿದೆ. ಉಜ್ವಲ ಭವಿಷ್ಯ ರೂಪಿಸಿ ಕೊಳ್ಳಲು ವೃತ್ತಿ ಮಾರ್ಗದರ್ಶನ ಅವಶ್ಯಕತೆಯಿದೆ. ವೃತ್ತಿ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ಧಾರಿ ಉಪನ್ಯಾಸಕರ ಮೇಲೂ ಇದೆ. ಭವಿಷ್ಯ ರೂಪಿಸುವ ಜವಾಬ್ಧಾರಿ ವಿದ್ಯಾರ್ಥಿಗಳ ಮೇಲೂ ಇದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಜ್ಞಾನ, ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಣದ ಜತೆಗೆ ಕಠಿಣ ಶ್ರಮ ಮತ್ತು ಸ್ವಜವಾಬ್ಧಾರಿಯಿಂದ ವೃತ್ತಿ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.ಸ್ನಾತಕೋತ್ತರ ವಿಭಾಗದ ಉದ್ಯೋಗ ಮಾಹಿತಿ ಕೋಶದ ಸಂಚಾಲಕಿ ಎಸ್.ಮಂಜುಳಾ ಮಾತನಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್, ಭದ್ರಾವತಿ ಸರ್.ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ, ಸ್ನಾತಕ ವಿಭಾಗದ ಉದ್ಯೋಗ ಮಾಹಿತಿ ಕೋಶದ ಸಂಚಾಲಕಿ ಬಿ.ಟಿ.ರೂಪಾ, ವಿದ್ಯಾರ್ಥಿನಿ ಸೌಮ್ಯ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ