ತಾತಯ್ಯನವರ ತತ್ವಪದ ಅನುಕರಣೀಯ

KannadaprabhaNewsNetwork |  
Published : Mar 16, 2025, 01:45 AM IST
ಶಿರ್ಷಿಕೆ-14ಕೆ.ಎಂ.ಎಲ್‌.ಅರ್.4-ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೈವಾರ ತಾತಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮ ಅಂಗವಾಗಿ ತಾತಯ್ಯ ನವರ ಮೆರವಣಿಗೆಗೆ ಶಾಸಕ ಕೆ ವೈ ನಂಜೇಗೌಡ ಪುಷ್ಪ ನಮನ ಅರ್ಪಿಸಿ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೈವಾರ ನಾರಾಯಣ ತಾತಯ್ಯ ತ್ರೆತ ಯುಗದಲ್ಲಿ ಶ್ರೇಷ್ಠ ದಾರ್ಶನಿಕರು ಸಂತರು ಆಧ್ಯಾತ್ಮಿಕವುಳ್ಳವರಾಗಿದ್ದರು. ಅವರು ರಚಿಸಿರುವ ತತ್ವಪದಗಳು ಸಮಾಜಕ್ಕೆ ಮಾರ್ಗ ದರ್ಶಕವಾಗಿವೆ. ಇಲ್ಲಿನ ಬಲಜ ಸಮುದಾಯದವರು ಮುಖ್ಯರಸ್ತೆಯ ಒಂದು ವೃತ್ತದಲ್ಲಿ ಕೈವಾರ ನಾರಾಯಣ ತಾತಯ್ಯನವರ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮಾಲೂರು

ಕೈವಾರ ಶ್ರೀ ಯೋಗಿ ನಾರಾಯಣ ತಾತಯ್ಯ ನವರು ರಚಿಸಿರುವ ಕಾಲಜ್ಞಾನ ತತ್ವಪದಗಳು ಸಮಾಜದಲ್ಲಿ ಸಾರ್ವಕಾಲಿಕವಾದುದು ಸರ್ಕಾರದಿಂದ ಆಚರಣೆ ಮಾಡುವ ಜಯಂತಿ ಕಾರ್ಯಕ್ರಮಗಳನ್ನು ಎಲ್ಲಾ ಜಾತಿ ಧರ್ಮದವರು ಒಗ್ಗೂಡಿ ಆಚರಣೆ ಮಾಡುವಂತಾಗಬೇಕು ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ತಹಸೀಲ್ದಾರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗಿ ನಾರಾಯಣ ಕೈವಾರ ತಾತಯ್ಯನವರ ಜಯಂತ್ಯುತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಮೆ ಸ್ಥಾಪನೆಗೆ ಸಹಕಾರ

ಇಲ್ಲಿನ ಬಲಜ ಸಮುದಾಯದವರು ಮುಖ್ಯರಸ್ತೆಯ ಒಂದು ವೃತ್ತದಲ್ಲಿ ಕೈವಾರ ನಾರಾಯಣ ತಾತಯ್ಯನವರ ಪ್ರತಿಮೆ ಅನಾವರಣ ಮಾಡುವುದು ಹಾಗೂ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ಅವಶ್ಯಕತೆ ಇರುವ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಸಹಕಾರ ನೀಡಲಾಗುವುದು ಎಂದರು.ಮಾಜಿ ಶಾಸಕ ಎ. ನಾಗರಾಜು ಮಾತನಾಡಿ ಕೈವಾರ ನಾರಾಯಣ ತಾತಯ್ಯ ತ್ರೆತ ಯುಗದಲ್ಲಿ ಶ್ರೇಷ್ಠ ದಾರ್ಶನಿಕರು ಸಂತರು ಆಧ್ಯಾತ್ಮಿಕವುಳ್ಳವರಾಗಿದ್ದರು. ಅವರು ರಚಿಸಿರುವ ತತ್ವಪದಗಳು ಸಮಾಜಕ್ಕೆ ಮಾರ್ಗ ದರ್ಶಕವಾಗಿವೆ ಎಂದರು.ತಹಸೀಲ್ದಾರ್ ಎಂ.ವಿ.ರೂಪ, ಪುರಸಭಾಧ್ಯಕ್ಷ ಕೋಮಲ ನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಲಕ್ಷ್ಮೀನಾರಾಯಣ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಬಲಜಿಗರ ಸಂಘದ ಅಧ್ಯಕ್ಷ ಡಿ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ರಂಗಪ್ಪ, ಇನ್ಸ್‌ಪೆಕ್ಟರ್‌ ವಸಂತ್, ಪುರಸಭಾ ಮುಖ್ಯ ಅಧಿಕಾರಿ ಎಬಿ ಪ್ರದೀಪ್, ವಕೀಲ ಆನಂದ್ ಕುಮಾರ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು