ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಎಚ್ ಆರ್ ಎಸ್ ಫೌಂಡೇಶನ್ ಹಾಗು ಅಡ್ವೋಕೇಟ್ ಅಸೋಷಿಯೇಷನ್ ನಿಂದ ಏರ್ಪಡಿಸಿದ್ದ ಹಿರಿಯ ವಕೀಲ ದಿವಂಗತ ಹೆಚ್.ಆರ್.ಸೀತಾರಾಂ ಸ್ಮಾರಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೀರ್ಪು ಸಂಕ್ಷಿಪ್ತವಾಗಿರಬೇಕುನ್ಯಾಯಾಲಯಗಳಲ್ಲಿ ತೀರ್ಪು ನೀಡುವಾಗ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಸಂಕ್ಷಿಪಗತವಾಗಿದ್ದರೆ ಮಾತ್ರ ಎಲ್ಲರಿಗೂ ಅರ್ಥವಾಗುತ್ತದೆ. ಕನ್ನಡ ಕಲಿಕೆ ಎಲ್ಲರಿಗೂ ಬೇಕು. ಆದರೆ ದೇಶ ವಿದೇಶಗಳ ಇತಿಹಾಸ ತಿಳಿಯಬೇಕಾದರೆ ನಿಮಗೆ ಇಂಗ್ಲೀಷ್ ಜ್ಞಾನ ಬೇಕಾಗುತ್ತದೆ. ಹಾಗೆ ನೋಡಿದರೆ ಎನೂ ಓದದೆ ಇರುವ ಸಾಮಾನ್ಯ ಜನರು ಅಲ್ಲಲ್ಲಿ ಮಾತನಾಡುವ ಪದಗಳಲ್ಲಿ ಇಂಗ್ಲಿಷ್ ಪದಗಳ ಬಳಕೆಯೂ ಇದೆ ನೋಡಿ ಎಂದರು.ಈ ವೇಳೆ ಉಚ್ಚನ್ಯಾಯಾಲಯದ ಅಡಳಿತಾದಧಿಕಾರಿ ನ್ಯಾಯಮೂರ್ತಿ ನಾಗಾನಂದ್, ಆಕಾಶವಾಣಿ ನಿವೃತ್ತ ವಾಚಕ ಕೃಷ್ಣಕಾಂತ್, ಹೆಚ್ ಅರ್ ಎಸ್ ಪೌಂಡೇಶನ್ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್, ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹಾಗು ಉಚ್ಚನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರು ಮತ್ತು ವಕೀಲರು ಇದ್ದರು.