ಕನ್ನಡಪ್ರಭ ವಾರ್ತೆ ಕೆಜಿಎಫ್ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ಕಾಯ್ದೆ ರೂಪಿಸಲಾಗಿದೆ. ಪೋಕ್ಸೋ ಕಾಯ್ದೆ ಜಾರಿಗೆ ಬಂದ ನಂತರ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ನೀಡಲು ಸಹಕಾರಿಯಾಗಿದೆ ಎಂದು ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಅಭಿಪ್ರಾಯಪಟ್ಟರು. ಬೇತಮಂಗಲ ಸರಕಾರಿ ಪ್ರೌಢಶಾಲೆಯಲ್ಲಿ ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕಾನೂನು ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಕ್ಸೋ ಕಾಯಿದೆ ಅರಿವು ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಎಲ್ಲರಿಗೂ ಕಾನೂನು ಅರಿವು ಅಗತ್ಯಮಹಿಳೆ ಇಲ್ಲದೆ ಜಗತ್ತು ಇಲ್ಲ, ಹೆಣ್ಣು ಒಬ್ಬ ಶಕ್ತಿ ಸ್ವರೂಪಣಿ, ಅಂತಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ, ಹೆಣ್ಣು ಮಕ್ಕಳ ರಕ್ಷಣೆ ಮಾಡಲು ನಮ್ಮ ದೇಶದಲ್ಲಿ ವಿಶೇಷ ಕಾನೂನು ರೂಪಿಸಿದ್ದು, ಕಾನೂನು ಅರಿವುವನ್ನು ಮೂಡಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ವಿನೋದ್‌ಕುಮಾರ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೋಕ್ಸೋ ಕಾಯ್ದೆ ರೂಪಿಸಲಾಗಿದೆ. ಪೋಕ್ಸೋ ಕಾಯ್ದೆ ಜಾರಿಗೆ ಬಂದ ನಂತರ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ನೀಡಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಆವರಣ, ಸಾರ್ವಜನಿಕ ಸ್ಥಳ ಹೀಗೆ ಯಾವುದೇ ಸ್ಥಳದಲ್ಲಿ ನಿಮಗೆ ಸಮಸ್ಯೆಯಾದಲ್ಲಿ, ಯಾರಾದರೂ ಅಸಭ್ಯವಾಗಿ ವರ್ತಿಸಿದಾಗ ಹೆದರದೇ ಪೊಲೀಸರಿಗೆ ಮಾಹಿತಿ ನೀಡಿ. ಕಾನೂನು ನಿಮಗೆ ರಕ್ಷಣೆ ನೀಡಲಿದೆ ಎಂದರು.ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶೆಮಿದ.ಕೆ ಮಾತನಾಡಿ, ಪೋಕ್ಸೋ ಕಾಯ್ದೆ ಪ್ರಕಾರ ದೌರ್ಜನ್ಯವೆಸಗುವ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಸ್ವರೂಪ ಕಠಿಣವಾಗಿವೆ. ಅಸಭ್ಯ ನಡವಳಿಕೆಯನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಸಹ ಕನಿಷ್ಟ ೫ ವರ್ಷದ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದೆ. ಪಾಲಕರು ತಪ್ಪು ಎಸಗಿದರೂ ಶಿಕ್ಷಾರ್ಹ. ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ವಿದ್ಯಾರ್ಥಿನಿಯರು ಧೈರ್ಯವಾಗಿ ಮುಂದೆ ಬರಬೇಕೆಂದು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಕಾನೂನನ್ನು ಗೌರವಿಸುವ, ಪಾಲಿಸುವ ಧೋರಣೆ ಬೆಳೆಸಿಕೊಳ್ಳಬೇಕು. ನಾವುಗಳು ಬೇರೆಯವರ ಹಕ್ಕುಗಳನ್ನು ಗೌರವಿಸುವುದು ಕಾನೂನನ್ನು ಪಾಲಿಸುವ ಮೊದಲ ಹೆಜ್ಜೆ. ಕಾನೂನು ಅರಿವಿನ ಕೊರತೆ ಇರುವವರಲ್ಲಿ ಕಾನೂನು ತಿಳಿವಳಿಕೆ ಮೂಡಿಸಬೇಕು'''''''' ಎಂದು ತಿಳಿಸಿದರು.ಕಾನೂನು ಕುರಿತು ಮಾಹಿತಿ
ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್, ಕರ್ಯದರ್ಶಿ ನಾಗರಾಜ್, ಸ್ಕೂಲ್ ಅಫ್ ಲಾ ಕಾಲೇಜಿನ ಪ್ರಾಂಶುಪಲ ಕೌಶಿಕ್.ಸಿ, ಬೇತಮಂಗಲ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕ ರಂಗಶಾಮಯ್ಯ, ಕಾನೂನು ಅರಿವು ಮೂಡಿಸಿದರು. ಸಿಡಿಪಿಒ ರಾಜೇಶ್, ಪಿಡಿಓ ವಸಂತ್‌ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಜುಮ್ ಮೊಹಮದಿ, ವಕೀಲರಾದ ಪರಮೇಶ್ವರ್, ಕಾನೂನು ನೆರವು ಸಂಯೋಜಕರಾದ ವಿದ್ಯ.ಸಿ ಹಾಗೂ ಠಾಣಾಧಿಕಾರಿ ಗುರುಶಾಲಚಿಂತಕಾಲ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.