ಕನ್ನಡಪ್ರಭ ವಾರ್ತೆ ಕೋಲಾರಸಮಾಜದಲ್ಲಿ ಮಹಿಳೆಯರು ಧೈರ್ಯವಾಗಿ ನಿಂತುಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಎಂಬ ಶಿಖರವನ್ನು ಸುಲಭಾಗಿ ಏರಬಹುದು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು. ನಗರದ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಶುಶ್ರೂಷಾದಿಕಾರಿಗಳ ಕ್ಷೇಮಾಭಿವೃದ್ದಿ ಸಂಘ, ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಹಾಗೂ ಶುಶ್ರೂಷಾಧಿಕಾರಿಗಳ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಶುಶ್ರೂಷಕಿಯರ ಸೇವೆ ಅಪಾರವಾದದ್ದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಧೈರ್ಯವಾಗಿ ನಿಂತು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.ಮಹಿಳೆಯರು ಧೈರ್ಯ ವಹಿಸಲಿ
ಮಹಿಳೆಯರುವ ಜೀವನದಲ್ಲಿ ಧೈರ್ಯವಾಗಿ ನಿಂತಾಗ ಸಾಧನೆ ಎನ್ನುವ ಮುಕುಟವನ್ನು ಏರಲು ಸಾಧ್ಯವಾಗುತ್ತದೆ. ಆ ಸಾಧನೆಯ ಹಿಂದೆ ತಾಯಿ, ಗಂಡ, ಅಣ್ಣ ತಮ್ಮ ಯಾರಾದ್ರೂ ಒಬ್ಬರು ಇರುತ್ತಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯ ತುಂಬಿದ್ದು ನನ್ನ ತಾಯಿ. ಅಂದು ಅವರು ಧೈರ್ಯ ತುಂಬಲಿಲ್ಲವೆಂದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಪ್ರತಿಯೊಬ್ಬರು ಧೈರ್ಯದಿಂದ ನಿಂತುಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಶುಶ್ರೂಕಿಯ ಸೇವೆ ಸಮಾಜಕ್ಕೆ ಅಪಾರವಾದದ್ದು, ಯಾವುದೇ ತರಹದ ಆರೋಗ್ಯ ಸಮಸ್ಯೆ ಎದುರಾದಾಗ ರೋಗಿಯ ರೋಗ ಗುಣಮುಖ ಹೊಂದಲು ಅವರ ಸೇವೆ ಪ್ರಮುಖವಾದದ್ದು ಎಂದು ತಿಳಿಸಿದರು. ಶಿಶ್ರೂಷಕಿಯರಿಗೆ ಸಹಕಾರ ಶುಶ್ರೂಷಕಿಯರು ಮಾಡುವ ಸೇವೆ ಸಾಮಾನ್ಯವಲ್ಲ. ಸಮಾಜದ ಪ್ರತಿಯೊಂದು ಕುಟುಂಬದ ಜೀವನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಧ್ವನಿಯಾಗಿ ಬೆನ್ನಿಗೆ ನಿಂತಿದ್ದಾರೆ. ಅವರಿಗೆ ಸಹಕಾರ ನೀಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟನಲ್ಲಿ ನಮ್ಮ ಪಕ್ಷದ ಸಂಸದರಾಗಿರುವ ಮಲ್ಲೇಶ್ ಬಾಬು ಹಾಗೂ ನಮ್ಮಗಳ ಸಹಕಾರ ಇರುತ್ತದೆ ಎಂದರು.ಹೆಚ್ಚುವರು ಪೊಲೀಸ್ ಅಧಿಕ್ಷಕ ಜಗದೀಶ್ ಮಾತನಾಡಿ, ಮನುಷ್ಯನಿಗೆ ಸಾಮಾನ್ಯವಾಗಿ ಕಷ್ಟ ಅಂತ ಬಂದಾಗ ದೇವರನ್ನು ನೆನಪಿಸಿಕೊಳ್ಳುತ್ತಾನೆ, ಆರೋಗ್ಯ ಸಮಸ್ಯೆ ಬಂದಾಗ ಮೊದಲು ವೈದ್ಯರು ಹಾಗೂ ಶುಶ್ರೂಷಕಿಯರನ್ನು ನೆನಪಿಸಿಕೊಳ್ಳುತ್ತಾನೆ .ಆಸ್ಪತ್ರೆಗೆ ಹೋಗುವಂತ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರು ಭಯದಲ್ಲೇ ಇರುತ್ತಾರೆ. ಆಗ ಶ್ರುಶ್ರೂಕಿಯರು ಸಂಯಮದಿಂದ ವರ್ತಿಸಿ ಆತ್ಮ ಸ್ಥೈರ್ಯ ತುಂಬುವುದರಿಂದ ರೋಗಿಗಳಲ್ಲಿ ವಿಶ್ವಾಸ ಮೂಡುತ್ತದೆ ಎಂದರು. ಎಂಎಲ್.ಸಿ ಇಂಚರ ಗೋವಿಂದರಾಜು, ಆರೋಗ್ಯ ಇಲಾಖೆಯ ನಿರ್ದೇಶಕ ಶ್ರೀನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸ ವಿಜಯ್ ಕುಮಾರ್, ನರ್ಸಿಂಗ್ ಅದೀಕ್ಷಕಿ ವಿಜಯಮ್ಮ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಇದ್ದರು.