ನಿತಿನ್ ಶ್ರೀನಿವಾಸ್ ಅವರು ಬ್ಲಿಂಕ್ ಇಟ್ ಆಪ್‌ನಲ್ಲಿ ಆಹಾರ ಪದಾರ್ಥಗಳನ್ನು ಬುಕ್ ಮಾಡುತ್ತಿದ್ದು ಹಲವಾರು ಬಾರಿ ಅವಧಿ ಮುಗಿದ ವಸ್ತುಗಳನ್ನು ಸರಬರಾಜು ಮಾಡಿದ್ದರು.
ಕನ್ನಡಪ್ರಭವಾರ್ತೆ ಹೊಸಕೋಟೆ
ಆನ್‌ಲೈನ್ ಆಹಾರ ಪದಾರ್ಥ ಸರಬರಾಜು ಮಾಡುವ ಬ್ಲಿಂಕ್ ಇಟ್ ಕಂಪನಿ ಗ್ರಾಹಕರಿಗೆ ಅವಧಿ ಮುಗಿದ ಆಹಾರ ಪದಾರ್ಥ ಸರಬರಾಜು ಮಾಡಿದ್ದು ಗ್ರಾಹಕರ ದೂರಿನ ಮೇರೆಗೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿದ ಘಟನೆ ಬುಧವಾರ ನಡೆದಿದೆ.ಗ್ರಾಹಕರಾದ ನಿತಿನ್ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ನಗರದ ಕಣ್ಣೂರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗೋದಾಮಿಗೆ ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದರು.
ನಿತಿನ್ ಶ್ರೀನಿವಾಸ್ ಅವರು ಬ್ಲಿಂಕ್ ಇಟ್ ಆಪ್‌ನಲ್ಲಿ ಆಹಾರ ಪದಾರ್ಥಗಳನ್ನು ಬುಕ್ ಮಾಡುತ್ತಿದ್ದು ಹಲವಾರು ಬಾರಿ ಅವಧಿ ಮುಗಿದ ವಸ್ತುಗಳನ್ನು ಸರಬರಾಜು ಮಾಡಿದ್ದರು. ಆಪ್‌ನಲ್ಲಿ ದೂರು ದಾಖಲು ಮಾಡಿದ್ದರೂ ಸಹ ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಹಣ ವಾಪಸ್ ಮಾಡುವುದಾಗಿ ತಿಳಿಸಿದ್ದರು. ಆದ್ದರಿಂದ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.ದಾಳಿಯಲ್ಲಿ ಅವಧಿ ಮುಗಿದ ಸಾಕಷ್ಟು ಪದಾರ್ಥಗಳು ಸಿಕ್ಕಿದ್ದು ಅದನ್ನು ವಶಕ್ಕೆ ಪಡೆದ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನಿತಿನ್ ಶ್ರೀನಿವಾಸ್ ಮಾತನಾಡಿ ಅಧಿಕಾರಿಗಳು ಭೇಟಿ ನೀಡಿದ ವೇಳೆ ಬ್ಲಿಂಕ್ ಇಟ್ ಕಂಪನಿಯವರು ಯಾವುದೇ ರೀತಿ ಅನುಮತಿ ಪಡೆಯದೆ, ಪರವಾನಗಿ ಪಡೆಯದೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿದೆ. ಸಂಸ್ಥೆಯವರಿಗೆ ದೂರು ನೀಡಿದರೆ ಹಣ ವಾಪಸ್ ನೀಡುವುದಾಗಿ ಹಾರಿಕೆ ಉತ್ತರ ನೀಡ್ತಾರೆ. ಅವಧಿ ಮುಗಿದ ಆಹಾರ ಸೇವಿಸಿ ಮನುಷ್ಯನ ಪ್ರಾಣಕ್ಕೆ ತೊಂದರೆ ಆದರೆ ಯಾರು ಜವಾಬ್ದಾರಿ. ಆದ್ದರಿಂದ ಇವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಪ್ರತಿಕ್ರಿಯಿಸಿ ಗ್ರಾಹಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಹಲವಾರು ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ಧಾರೆ ಎಂದು ಹೇಳಿದರು.18 ಹೆಚ್‌ಎಸ್‌ಕೆ 4ಹೊಸಕೋಟೆ ನಗರದ ಬ್ಲಿಂಕ್ ಇಟ್ ಗೋದಾಮಿಗೆ ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ತೆರಳಿ ಪರಿಶೀಲಿಸಿದರು.18 ಹೆಚ್‌ಎಸ್‌ಕೆ 4
ಆರೋಗ್ಯ ಇಲಾಖೆ ಅಧಿಕಾರಿಗಳು ಅವಧಿ ಮುಗಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದರು.