ದಿ ವೇಕೆಂಟ್ ಹೌಸ್ ಸಿನಿಮಾ ಬಿಡುಗಡೆ ಸಿದ್ಧ

KannadaprabhaNewsNetwork | Published : Nov 16, 2023 1:16 AM

ಸಾರಾಂಶ

ಕೇವಲ 1 ಗಂಟೆ 40 ನಿಮಿಷದ ಚಿತ್ರವಾಗಿದ್ದು, ಚಿತ್ರದಲ್ಲಿ ಎಲ್ಲಿಯೂ ಬೇಕಾಬಿಟ್ಟು ಪಾತ್ರಗಳನ್ನು ತೋರಿಸಿಲ್ಲ. ಚಿತ್ರದ ಕಥೆಗೆ ಅಗತ್ಯವಾದ ಪಾತ್ರಗಳನ್ನು ಮಾತ್ರಲೀ ಚಿತ್ರದಲ್ಲಿ ಇದೆ. ಚಿತ್ರದಲ್ಲಿ 2 ಹಾಡುಗಳಿದ್ದು, ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿವೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ.

- ನನ್ನ ಹೊಸ ಕನಸು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ: ನಟಿ ಎಸ್ತಾರ್‌ ನರೋನ್ಹಾ

- - -

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗ್ಲಾಮರ್‌ ಪಾತ್ರಗಳ ಮೂಲಕ ಫೇಮಸ್‌ ಆಗಿರುವ ನಟಿ ಎಸ್ತಾರ್‌ ನರೋನ್ಹಾ ಅವರ ಖಾಲಿ ಮನೆ ಸುತ್ತ ಸಾಗುವ ಪ್ರೀತಿ ಮತ್ತು ಎಮೋಷನ್‌ ಸೇರಿಸಿದ ಎಣೆದಿರುವ ಕಥೆ ದಿ ವೇಕೆಂಟ್‌ ಹೌಸ್‌ ಇದೇ ನ.17ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿದೆ.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಟಿ ಎಸ್ತಾರ್‌ ನರೋನ್ಹಾ, ನಾನು ಈಗಾಗಲೇ ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿ ಕೂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇನೆ. ನನ್ನ ಹೊಸ ಕನಸು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ ಎಂದರು.

ದಿ ವೇಕೆಂಟ್ ಹೌಸ್ ಇದು ಹಾರರ್ ಸಿನಿಮಾವಲ್ಲ. ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯುವಜನತೆಗೆ ಸಂಬಂಧಿಸಿದ ಸಿನಿಮಾವಿದು. ಪ್ರೀತಿ ಮತ್ತು ಭಾವನೆ ಎರಡನ್ನೂ ಸೇರಿಸಿ ಎಣೆದಿರುವ ಕಥೆ ಎಂದರು.

ಈ ಸಿನಿಮಾ ನೈಜ ಘಟನೆಯಾಧಾರಿತ ಚಿತ್ರವಲ್ಲ. ಕೇವಲ 1 ಗಂಟೆ 40 ನಿಮಿಷದ ಚಿತ್ರವಾಗಿದ್ದು, ಚಿತ್ರದಲ್ಲಿ ಎಲ್ಲಿಯೂ ಬೇಕಾಬಿಟ್ಟು ಪಾತ್ರಗಳನ್ನು ತೋರಿಸಿಲ್ಲ. ಚಿತ್ರದ ಕಥೆಗೆ ಅಗತ್ಯವಾದ ಪಾತ್ರಗಳನ್ನು ಮಾತ್ರಲೀ ಚಿತ್ರದಲ್ಲಿ ಇದೆ. ಚಿತ್ರದಲ್ಲಿ 2 ಹಾಡುಗಳಿದ್ದು, ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿವೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್‌ರಾಜ್ ಸಂಕಲನವಿದೆ. ತನ್ನ ತಾಯಿ ಜಾನೆಟ್ ಜೆಸಿಂತಾ ನೊರೊನ್ಹಾ ನಿರ್ಮಾಪಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಇಷ್ಟು ವರ್ಷದ ನಟನೆ ಅನುಭವವನ್ನು ಧಾರೆ ಎರೆದು ದಿ ವೇಕೆಂಟ್ ಹೌಸ್ ಸಿನಿಮಾ ನಿರ್ದೇಶಿಸಿ ನಟಿಸಿ ತಮ್ಮದೇ ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ನಿರ್ಮಾಣ ಕೂಡ ಮಾಡಲಾಗಿದೆ. ಇದೇ ನ.17ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಶಿವಮೊಗ್ಗದಲ್ಲೂ ಭಾರತ್‌ ಸಿನಿಮಾಸ್‌ ಮಲ್ಟಿಫೆಕ್ಸ್‌ ಚಿತ್ರಮಂದಿರದಲ್ಲಿ ಚಿತ್ರದಲ್ಲಿ ಈ ಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾನೆಟ್‌ ನೋರಾನ್ಹಾನ, ಶಶಿಕುಮಾರ್‌ ಇದ್ದರು.

- - - ಬಾಕ್ಸ್‌

ಮಂಗಳೂರು ಮೂಲ, ಮುಂಬೈ ಬೆಡಗಿನಟಿ ಮಂಗಳೂರಿನವರಾದರೂ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಕನ್ನಡ ಸಿನಿಮಾ ’ಉಸಿರಿಗಿಂತ ನೀನೇ ಹತ್ತಿರ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ.

ಬಾಲಿವುಡ್‌ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗ ಪ್ರವೇಶಿಸಿ, ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಕನ್ನಡದಲ್ಲಿ ’ನಾವಿಕ’, ’ಅತಿರಥ’, ’ನುಗ್ಗೇಕಾಯಿ’, ’ಲೋಕಲ್ ಟ್ರೈನ್, ಲಂಕೆ’ ಇನಾಮ್ಹಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

- - - -15ಎಸ್‌ಎಂಜಿಕೆಪಿ04:

ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿ ವೆಕೆಂಟ್‌ ಹೌಸ್‌ ಚಿತ್ರದ ನಟಿ ಎಸ್ತಾರ್‌ ನರೋನ್ಹಾ ಮಾತನಾಡಿದರು.

Share this article