ರಂಗಕರ್ಮಿ ಪ್ರಸನ್ನರಿಗೆ ರಂಗಭೂಮಿ ಪ್ರಶಸ್ತಿ

KannadaprabhaNewsNetwork |  
Published : Feb 23, 2026, 03:00 AM IST
20ಪ್ರಸನ್ನ | Kannada Prabha

ಸಾರಾಂಶ

ಉಡುಪಿ ರಂಗಭೂಮಿ ಸಂಸ್ಥೆ ವತಿಯಿಂದ ಮಾ. 4ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ವಾರ್ಷಿಕ ‘ರಂಗಭೂಮಿ ಪ್ರಶಸ್ತಿ -2025’ನ್ನು ಹಿರಿಯ ರಂಗಕರ್ಮಿ, ನಾಟಕಕಾರ, ದೇಸಿ ಚಿಂತನೆಗಳ ರಾಯಭಾರಿ ಪ್ರಸನ್ನ ಅವರಿಗೆ ಪ್ರದಾನ ಮಾಡಲಾಗುವುದು.

ಉಡುಪಿ: ಉಡುಪಿ ರಂಗಭೂಮಿ ಸಂಸ್ಥೆ ವತಿಯಿಂದ ಮಾ. 4ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ವಾರ್ಷಿಕ ‘ರಂಗಭೂಮಿ ಪ್ರಶಸ್ತಿ -2025’ನ್ನು ಹಿರಿಯ ರಂಗಕರ್ಮಿ, ನಾಟಕಕಾರ, ದೇಸಿ ಚಿಂತನೆಗಳ ರಾಯಭಾರಿ ಪ್ರಸನ್ನ ಅವರಿಗೆ ಪ್ರದಾನ ಮಾಡಲಾಗುವುದು.ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ 1951ರಲ್ಲಿ ಜನಿಸಿದ ಪ್ರಸನ್ನ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ಕನ್ನಡ, ಹಿಂದಿ, ಇಂಗ್ಲಿಷ್ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಷ್ಯ ಹಾಗೂ ಜರ್ಮನಿ ದೇಶಗಳ ರಂಗಭೂಮಿಯ ಅಧ್ಯಯನ ಮಾಡಿದ್ದಾರೆ. ಕನ್ನಡ ರಂಗಭೂಮಿಯ ದಿಕ್ಕನ್ನು ಬದಲಿಸಿದ ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಹೊಸ ಚಿಂತನೆ ಮೂಲಕ ಪ್ರೇಕ್ಷಕರ ಜಾಗೃತಿಗೆ ಕಾರಣರಾದರು.ಪ್ರಸನ್ನರು ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ನೌಟಂಕಿ, ಸ್ವಯಂವರ, ತದ್ರೂಪಿ, ನಾಶವಾಯ್ತೆ ಲಂಕಾದ್ರಿಪುರ ಮೊದಲಾದ ನಾಟಕಗಳನ್ನೂ ಪ್ರಸನ್ನರು ರಚಿಸಿದ್ದಾರೆ. ಹೆಗ್ಗೋಡಿನ ‘ಕವಿ ಕಾವ್ಯ ಟ್ರಸ್ಟ್’ ಮೂಲಕ ಅವರು ಕನ್ನಡದ ಸಾಂಸ್ಕೃತಿಕ ಕೆಲಸಕ್ಕೆ, ಕೆ.ವಿ. ಸುಬ್ಬಣ್ಣರ ಜೊತೆಗೂಡಿ ರುಜುವಾತು ಪತ್ರಿಕೆಗೆ ಹೊಸರೂಪ ನೀಡಲೂ ನೆರವಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ರೆ ಬೀದಿಗಳಿದು ಹೋರಾಟ: ಬಿ.ಶ್ರೀರಾಮುಲು
ಕಿನ್ನಿಗೋಳಿಯಲ್ಲಿ ಶೀಘ್ರದಲ್ಲಿ ಒಳಚರಂಡಿ ಯೋಜನೆ ಜಾರಿ: ಶಾಸಕ ಉಮಾನಾಥ ಕೋಟ್ಯಾನ್‌