ಲಿಂಗಾಪುರ ಅಂಗನವಾಡಿಯಲ್ಲಿ ಕಳ್ಳತನ

KannadaprabhaNewsNetwork |  
Published : Oct 16, 2025, 02:00 AM IST
15ಎಚ್ಎಸ್ಎನ್4 : ಬೇಲೂರು ತಾಲೂಕಿನ  ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ತಡರಾತ್ರಿ  ಕಳ್ಳರು  ಸಾವಿರಾರು ರೂಪಾಯಿ ಮೌಲ್ಯದ ಟಿವಿ, ಗ್ಯಾಸ್ ಸಿಲಿಂಡರ್, ದಿನಸಿ ಪದಾರ್ಥ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. | Kannada Prabha

ಸಾರಾಂಶ

ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಟಿ.ವಿ, ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರ ಹಲವಾರು ವಸ್ತುಗಳನ್ನು ಹಾಗೂ ಪಕ್ಕದ ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಇದ್ದಂತಹ ಗ್ಯಾಸ್ ಸಿಲಿಂಡರ್‌, ದಿನಸಿ ಪದಾರ್ಥ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದೋಚಿದ್ದಾರೆ. ಇದಲ್ಲದೆ ಶಾಲೆಯ ಬೀಗ ಒಡೆದು ಅಲ್ಲಿಯೂ ಹುಡುಗಾಟ ನಡೆಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿಗೆ ಮಾದರಿ ಎನಿಸಿಕೊಂಡಿದ್ದ ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳ್ಳರು ಕನ್ನ ಹಾಕಿ ಸಾವಿರಾರು ರುಪಾಯಿ ಮೌಲ್ಯದ ಟಿವಿ, ಗ್ಯಾಸ್ ಸಿಲಿಂಡರ್‌, ದಿನಸಿ ಪದಾರ್ಥ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಇತ್ತೀಚೆಗೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಪೆಟ್ಟಿಗೆ ಅಂಗಡಿಯ ಕಳವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ಪ್ರಕರಣ ಅರೇಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರನ್ನು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಟಿ.ವಿ, ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರ ಹಲವಾರು ವಸ್ತುಗಳನ್ನು ಹಾಗೂ ಪಕ್ಕದ ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಇದ್ದಂತಹ ಗ್ಯಾಸ್ ಸಿಲಿಂಡರ್‌, ದಿನಸಿ ಪದಾರ್ಥ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದೋಚಿದ್ದಾರೆ. ಇದಲ್ಲದೆ ಶಾಲೆಯ ಬೀಗ ಒಡೆದು ಅಲ್ಲಿಯೂ ಹುಡುಗಾಟ ನಡೆಸಿದ್ದಾರೆ.ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರವನ್ನು ಮಾದರಿಯಾಗಿಸಲು ಕಾರ್ಯಕರ್ತೆ ಸಾವಿತ್ರಿಯವರು ಈ ಹಿಂದೆ ಸಾಕಷ್ಟು ಶ್ರಮ ವಹಿಸಿದ್ದರಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಮಕ್ಕಳ ವಿದ್ಯಾಭ್ಯಾಸ ಮತ್ತು ಆಟೋಟ ಸಂಬಂಧಿಸಿದ ಅನೇಕ ವಸ್ತುಗಳನ್ನು ಖರೀದಿಸಿ ಸ್ವಂತ ಮನೆಯ ರೀತಿಯಲ್ಲಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ಇದೀಗ ಕಳ್ಳರ ಹಾವಳಿಯಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡು ಭಾವುಕರಾಗಿದ್ದಾರೆ. ಚಿಕ್ಕ ಮಕ್ಕಳು ಒಂದು ವಿಷಯದ ಬಗ್ಗೆ ಆಸಕ್ತಿ ವಹಿಸಿ ಗಂಭೀರವಾಗಿ ಕೂರಲು ಆಟೋಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿಯಲ್ಲಿ ವಿನ್ಯಾಸಗೊಳಿಸಲಾದ ಅನಿಮೇಟೆಡ್ ವಿಡಿಯೋ ಪಾಠಗಳು ಪ್ರಬಲ ಬೋಧನಾ ಸಾಧನವಾಗುತ್ತವೆ ಎಂಬ ಚಿಂತನೆಯಿಂದ ಇಲಾಖೆಯು ಇತ್ತೀಚೆಗೆ ಸ್ಮಾರ್ಟ್ ಟಿವಿಗಳನ್ನು ವಿತರಣೆ ಮಾಡಿದ್ದರು. ಆದರೆ ಇದೀಗ ಖದೀಮರು ಅದನ್ನು ದೋಚುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಡು ಬಡವರ ಮನೆ ಕಳ್ಳರ ಟಾರ್ಗೆಟ್:

ಇತ್ತೀಚಿನ ದಿನಗಳಲ್ಲಿ ಕಡು ಬಡವರ ಮನೆಯಲ್ಲಿನ ಸಿಲಿಂಡರ್ ಪಾತ್ರೆ ಸೇರಿದಂತೆ ವಸ್ತ್ರಗಳನ್ನು ದೋಚುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ರಾತ್ರಿ ಮತ್ತು ಹಗಲು ವೇಳೆ ಮನೆ ಒಳಗೆ ನುಸುಳುವ ಕಳ್ಳರು ಸಂಪೂರ್ಣ ಮನೆಯನ್ನು ದೋಚಿ ಪರಾರಿಯಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈಗಲಾದರೂ ಪೊಲೀಸರು ಎಚ್ಚೆತ್ತು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಕಳ್ಳರು ವಲಸಿಗರೇ ಅಥವಾ ಸ್ಥಳೀಯರೇ ಎಂಬ ಜಾಲವನ್ನು ಬೆನ್ನತ್ತಿ ಬೇಟೆಯಾಡುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ