‘ಸ್ವಚ್ಛತೆಯೇ ಶ್ರೇಷ್ಠ ಎಂದು ಭಾವಿಸಿ’

KannadaprabhaNewsNetwork |  
Published : Feb 10, 2024, 01:48 AM IST
ಸಿಕೆಬಿ-1 ನ್ಯಾ. ನೇರಳೆ ವೀರಭದ್ರಯ್ಯ  ಭವಾನಿ ನೇತೃತ್ವದಲ್ಲಿ ಬಿಬಿ ರಸ್ತೆಯ  ಕನ್ನಡ ಭವನ(ಬಸಪ್ಪ ಛತ್ರ) ದ   ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಯಿತು | Kannada Prabha

ಸಾರಾಂಶ

ಸ್ವಚ್ಛತೆ ಎಂಬುದು ನಮ್ಮ ಮನ ಮನೆಗಳ ಮೂಲಕವೇ ಆಗಬೇಕು. ಗಿಡ-ಮರಗಳನ್ನು ಬೆಳೆಸುವ ಮೂಲಕ ನಗರವನ್ನು ಹಸಿರಾಗಿಸಬೇಕು. ಈ ಹಿನ್ನೆಲೆಯಲ್ಲಿ ಯುವ ಜನತೆ ಪ್ರಮುಖ ಪಾತ್ರ ವಹಿಸಬೇಕು, ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಾತ್ಮ ಗಾಂಧೀಜಿಯ ಕನಸು ನನಸಾಗಲು ಸ್ವಚ್ಛತೆಯನ್ನು ಶ್ರೇಷ್ಠ ಎಂದು ಭಾವಿಸಿ ಸಮಾನತೆ  ಮೂಲ ಮಂತ್ರವಾಗಿಸಿ ಮುನ್ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತಿ, ಜಿಲ್ಲಾ ವಕೀಲರ ಸಂಘ, ನಗರಸಭೆ ಮತ್ತು ಭಾರತಿ ವಿದ್ಯಾ ಮಂದಿರಗಳ ಸಹಯೋಗದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನಗರದ ಕನ್ನಡ ಭವನದ(ಬಸಪ್ಪ ಛತ್ರ) ಕಲ್ಯಾಣಿ ಸ್ವಚ್ಛತಾ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಚ್ಛತೆ ಮನೆಯಿಂದಲೇ ಆರಂಭಿಸಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅರುಣ ಕುಮಾರಿ ಸ್ವಚ್ಛತೆ ಎಂಬುದು ನಮ್ಮ ಮನ ಮನೆಗಳ ಮೂಲಕವೇ ಆಗಬೇಕು. ಈ ಹಿನ್ನೆಲೆಯಲ್ಲಿ ಯುವ ಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದರು.ಜಿಪಂ ಸಿಇಒ ಪ್ರಕಾಶ್.ಜಿ.ಟಿ. ನಿಟ್ಟಾಲಿ ಮಾತನಾಡಿ, ಆಮ್ಲಜನಕ ನೀಡುವ ಗಿಡ-ಮರಗಳನ್ನು ಬೆಳೆಸುವ ಮೂಲಕ ನಗರವನ್ನು ಹಸಿರಾಗಿಸಬೇಕಿದೆ. ಅಲ್ಲದೇ ಹಸಿಕಸ-ಒಣಕಸ ವಿಂಗಡಿಸಿ ನೀಡುವಂತೆ ಸಲಹೆ ನೀಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ್ ಮಾತನಾಡಿ, ಸ್ವಚ್ಛತೆ ಎನ್ನುವುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ನಗರದ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಬಡಾವಣೆಗೆ ಬಂದಾಗ ಗೌರವದಿಂದ ಕಾಣಿ ಎಂದು ಹೇಳಿದರು. ಈ ವೇಳೆ ನ್ಯಾ.ಶಿವಪ್ರಸಾದ್, ನ್ಯಾ. ವಿವೇಕಾನಂದ ಪಂಡಿತ್, ನ್ಯಾ.ಮಹಮದ್ ರೋಷನ್, ನಗರಸಭೆ ಪೌರಾಯುಕ್ತ ಮಂಜುನಾಥ್‌, ಮಾನಸ ಶೇಖರ್, ತಹಸಿಲ್ದಾರ್ ಅನಿಲ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್, ನಗರ ಸಭೆ ಸದಸ್ಯರಾದ ಅಂಬರೀಶ್, ವಕೀಲರಾದ ಜಿ.ಆರ್.ಹರಿಕುಮಾರ್ ಸಿ,ಆರ್. ನವೀನ್ ಕುಮಾರ್, ಮಂಜುನಾಥ್ ರೆಡ್ಡಿ, ವೆಂಕಟೇಶಪ್ಪ, ಸೌಜನ್ಯ ಗಾಂಧಿ, ಎಂ.ವಿ.ವೆಂಕಟೇಶ್, ಮತ್ತಿತರರು ಇದ್ದರು..

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌