ಇಂದಿನಿಂದ ಹೋಟೆಲ್ ಮಥುರಾ ಗೋಕುಲ್‌ನಲ್ಲಿ ‘ಉಡುಪಿ ಸಂಸ್ಕೃತಿ’ ಕೈಮಗ್ಗ, ಕರಕುಶಲ ಮೇಳ

KannadaprabhaNewsNetwork |  
Published : Feb 19, 2025, 12:49 AM IST
ಮೇಳ | Kannada Prabha

ಸಾರಾಂಶ

ನೇಕಾರ ಮತ್ತು ಕರಕುಶಲಕರ್ಮಿಗಳಿಂದ ಸಿದ್ಧಪಡಿಸಲಾದ ಸೀರೆ, ಶಾಲ್, ಕುರ್ತಾ, ಕುರ್ತೀ, ಟವೆಲ್, ಖಾದಿ ಉಡುಪುಗಳು, ಸೌಂದರ್ಯ ವರ್ಧಕಗಳು, ಚೆನ್ನಪಟ್ಟಣ ಆಟಿಕೆಗಳು, ಸಾಂಬಾರ ಪದಾರ್ಥಗಳು, ಎಕ್ಕದ ಎಣ್ಣೆ, ಡ್ರೈ ಫ್ರೂಟ್ಸ್, ವಾಲೆ ಬೆಲ್ಲ, ಗೋವಿನ ಉತ್ಪನ್ನಗಳು, ಪೇಂಟಿಂಗ್ಸ್, ಸಾವಯವ ಉತ್ಪನ್ನಗಳು, ತರಕಾರಿ ಧಾನ್ಯ ಹಾಗೂ ಮಣ್ಣಿನ ಉತ್ಪನ್ನಗಳು ಲಭ್ಯ ಇರಲಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೈಮಗ್ಗ ಸಹಿತ ಕರಕುಶಲ ಮತ್ತು ಸಾಂಪ್ರದಾಯಿಕ ಉದ್ಯಮಗಳನ್ನು ಪರಿಚಯಿಸಿ ಪ್ರೋತ್ಸಾಹಿಸುವ ಸಲುವಾಗಿ ಫೆ.19ರಿಂದ ಉಡುಪಿಯ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾ ಸಮೀಪ ಇರುವ ಹೋಟೆಲ್ ಮಥುರ ಗೋಕುಲ್‌ನಲ್ಲಿ ಉಡುಪಿ ಸಂಸ್ಕೃತಿ ಕೈಮಗ್ಗ ಹಾಗೂ ಕರಕುಶಲ ಮೇಳ ಜರುಗಲಿದೆ. ಮೇಳವು ಫೆ.19ರಂದು ಉಡುಪಿಯ ಜನಪ್ರಿಯ ಮಹಿಳಾ ಮುಂದಾಳುಗಳಿಂದ ಉದ್ಘಾಟನೆಗೊಳ್ಳಲಿದೆ.ನೇಕಾರ ಮತ್ತು ಕರಕುಶಲಕರ್ಮಿಗಳಿಂದ ಸಿದ್ಧಪಡಿಸಲಾದ ಸೀರೆ, ಶಾಲ್, ಕುರ್ತಾ, ಕುರ್ತೀ, ಟವೆಲ್, ಖಾದಿ ಉಡುಪುಗಳು, ಸೌಂದರ್ಯ ವರ್ಧಕಗಳು, ಚೆನ್ನಪಟ್ಟಣ ಆಟಿಕೆಗಳು, ಸಾಂಬಾರ ಪದಾರ್ಥಗಳು, ಎಕ್ಕದ ಎಣ್ಣೆ, ಡ್ರೈ ಫ್ರೂಟ್ಸ್, ವಾಲೆ ಬೆಲ್ಲ, ಗೋವಿನ ಉತ್ಪನ್ನಗಳು, ಪೇಂಟಿಂಗ್ಸ್, ಸಾವಯವ ಉತ್ಪನ್ನಗಳು, ತರಕಾರಿ ಧಾನ್ಯ ಹಾಗೂ ಮಣ್ಣಿನ ಉತ್ಪನ್ನಗಳು ಲಭ್ಯ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದುದ್ದೇಶದಿಂದ ನರೇಗಾ ಯೋಜನೆಯಲ್ಲಿ ಬದಲಾವಣೆ
ಕನ್ಸರ್‌ವೆನ್ಸಿ ರಸ್ತೆಯಲ್ಲಿರುವ ಶೌಚಾಲಯಗಳ ತೆರವುಗೊಳಿಸಿ: ಬಿ.ಚನ್ನಬಸಪ್ಪ