ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರ ಹತ್ತಿರವಿರುವ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಬಿಲ್ಲಪತ್ರೆ ಶಿವನ ದೇವಾಲಯ ಎಲ್ಲಾ ಭಕ್ತರ ಸಹಕಾರದಿಂದ ಉತ್ತಮ ರೀತಿಯಲ್ಲಿ ದೇವಾಲಯ ನಿರ್ಮಾಣ ಮಾಡಿ ಪೂಜೆಗಳು ನಡೆಯುತ್ತಿವೆ. ದೇವಾಲಯಗಳು ಚೆನ್ನಾಗಿದ್ದರೆ ಅದು ಗ್ರಾಮದ ಹಿರಿಮೆಯ ಪ್ರತೀಕ. ಇಂತಹ ದೇವಾಲಯ ಕೆಲವು ಭಕ್ತರುಗಳಿಂದ ದೇವಾಲಯ ಅಭಿವೃದ್ಧಿಯಾಗಿದೆ. ಆದರೆ, ಕೆಲವು ನದಿ ಪಾತ್ರದ ಅಲ್ಲಲ್ಲಿ ದೇವಾಲಯಗಳು ಶಿಥಿಲವಾದ ನೂರಾರು ದೇವಾಲಯಗಳು ಇವೆ. ಇಂತಹ ದೇವಾಲಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿ ಜಿರ್ಣೋದ್ಧಾರಕ್ಕೆಸಹಕರಿಸುವಂತೆ ಮುಖ್ಯ ಅರ್ಚಕರು ಶ್ರೀ ದೇವರಾಜು ಮನವಿ ಮಾಡಿದ್ದಾರೆ.
ನದಿ ಪಾತ್ರದ ದೇವಾಲಯಗಳ ಜೀರ್ಣೋದ್ಧಾರ ಮಾಡಿ:ಜೀವನದಿ ಕಾವೇರಿ ನದಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಪಂಪೂಹಾರ್ ಸಮುದ್ರ ಸೇರುವ ತನಕ ಕಾವೇರಿ ನದಿಯ ಎರಡು ದಂಡೆಯಲ್ಲಿ ಚೋಳರ ಕಾಲದ ಅವಧಿಯಲ್ಲಿ ಅನೇಕ ಶಿವನದೇ ದೇವಾಲಯಗಳನ್ನು ನಿರ್ಮಿಸಲಾಗಿದ್ದು ನದಿಯ ಎರಡು ದಂಡೆಯಲ್ಲಿ ಬೃಹತ್ ಮತ್ತು ಸಣ್ಣ ದೇವಾಲಯಗಳನ್ನು ನಾವು ಎಂದಿಗೂ ಕಾಣಬಹುದಾಗಿದೆ.
ಚೋಳರ ಕಾಲದ ಇತಿಹಾಸ:
ಪವಿತ್ರ ಜೀವನದಿ ಕಾವೇರಿ ತೀರದಲ್ಲಿ ಚೋಳರ ಕಾಲದಲ್ಲಿ ಬರೀ ಕಲ್ಲಿನಿಂದ ಅನೇಕ ಶಿವ ದೇವಾಲಯವನ್ನು ನದಿಯ ದಂಡೆಯಲ್ಲಿ ನಿರ್ಮಿಸಿದ್ದು, ದೇವಸ್ಥಾನವು ಸಾವಿರಾರು ವರ್ಷಗಳ ಪ್ರಕೃತಿಯಿಂದ ಶಿಥಿಲವಾಗಿದ್ದು ದೇವಸ್ಥಾನದ ಮೇಲೆ ಗಿಡಗಂಟೆಗಳು ಬೆಳೆದು ಹಾಗೂ ಪಕ್ಕದಲ್ಲಿರುವ ಮರ ಗಿಡಗಳ ಬೇರು ದೇವಸ್ಥಾನದ ತಳಭಾಗಕ್ಕೆ ಸೇರಿ ತಳಪಾಯವೇ ಕುಸಿದು ಕೆಲವು ದೇವಸ್ಥಾನಗಳು ಬಿದ್ದುಹೋಗಿವೆ. ಇಂತಹ ದೇವಾಲಯಗಳನ್ನು ಮುಜರಾಯಿ ಇಲಾಖೆ ಜಿರ್ಣೋದ್ಧಾರ ಮಾಡಿಸಬೇಕಾಗಿದೆ.ನೆರವಿಗೆ ಸರ್ಕಾರಕ್ಕೆ ಬೇಡಿಕೆಗೆ ಒತ್ತಾಯ:
ನದಿ ಪಾತ್ರದ ಗ್ರಾಮಸ್ಥರು ಪಾಳು ಬಿದ್ದಿರುವ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೆಲವು ಗ್ರಾಮಗಳಲ್ಲಿ ಸಮಿತಿ ಮಾಡಿ ಇದಕ್ಕಾಗಿ ಶ್ರಮಿಸಲು ಕೆಲವು ಗ್ರಾಮಸ್ಥರು ಮುಂದೆ ಬರುತ್ತಿದ್ದಾರೆ. ಇದರ ಜೊತೆಗೆ ಸರ್ಕಾರದ ಜೊತೆಗೆ ಗ್ರಾಮದ ಗ್ರಾಮಸ್ಥರು ಸಮಿತಿ ರಚಿಸಿಕೊಂಡು ಜೊತೆಗೆ ಆರ್ಥಿಕ ಸೌಲಭ್ಯ ಪಡೆದುಕೊಂಡು ಹಿಂದಿನ ವೈಭವವನ್ನು ಮರುಕಳಿಸುವಂತೆ ಮಾಡುವ ಗ್ರಾಮಸ್ಥರು ಸಮಾಜದ ಮುಖಂಡರು ಬಂಧುಗಳು ದೇವಸ್ಥಾನದ ಪುನರ್ ನಿರ್ಮಾಣಕ್ಕೆ ನದಿ ಪಾತ್ರದ ಗ್ರಾಮಸ್ಥರು ಮುನ್ನುಗುತ್ತಿದ್ದಾರೆ. ಇದಕ್ಕೆ ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಸಹಕರಿಸಿ ಸಹಕರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.