ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ಗುರತ್ವಾಕರ್ಷಣೆಯ ಮೂಲಕ ಈಗಾಗಲೇ ಕೆನಾಲ್ ಕೆಲಸ ಆಗಿರುವಂತಹ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯಿಂದ ಹುಳಿಯಾರು ಕೆರೆಯವರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ತಾಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗಡಬನಹಳ್ಳಿ ಬಳಿಯ ಮುಖ್ಯನಾಲೆಯಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಗೇಟ್‌ನ್ನು ತೆರವು ಮಾಡುವ ಮೂಲಕ ಚಾಲನೆ ನೀಡಿ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ಮೂರು ತಿಂಗಳ ಕಾಲ ಕೆನಾಲ್ ಮೂಲಕ ಹರಿಯುವಂತ ನೀರು ನಮ್ಮ ತಾಲೂಕಿನ ಸಾಸಲು ಕೆರೆಯಿಂದ ಪ್ರಾರಂಭವಾಗಿ ಶೆಟ್ಟಿಕೆರೆ, ಅಜ್ಜನಕೆರೆ, ಗೌಡನಹಳ್ಳಿಕೆರೆ, ಹೆಸರಹಳ್ಳಿಕೆರೆ, ಅಂಕಸಂದ್ರಹಣೆಯ ಮೂಲಕ ತಿಮ್ಲಾಪುರದ ಕೆರೆಯಿಂದ ಹುಳಿಯಾರು ಕೆರೆಯನ್ನು ತಲುಪುವುದು ಹಾಗೇ ಮುಂದುವರೆದು ಸಾಧ್ಯವಾದರೆ ಬೋರನಕಣಿವೆಗೂ ಹರಿಸಲಾಗುವುದು.ಈ ಕೆನಾಲ್ ನಲ್ಲಿ ಹೂಳು ತುಂಬಿತ್ತು ಅದನ್ನು ೨೮ಲಕ್ಷ ರು. ವೆಚ್ಚದಲ್ಲಿ ತೆಗೆಸಲಾಗಿದೆ. ಈ ಬಾರಿ ಸಂಪೂರ್ಣ ನೀರು ಸರಾಗವಾಗಿ ಹರಿಯಲಿದೆ. ಈ ಕೆಲಸದ ಬಗ್ಗೆ ಸಹಕರಿಸಿದ ಎಂಜಿನಿಯರ್‌ಗಳು, ರೈತರಿಗೆ ಹಾಗೂ ಗುತ್ತಿಗೆದಾರರಿಗೆ ಧನ್ಯವಾದಗಳು. ಈ ಕೆಲಸದ ಬಗ್ಗೆ ನಮ್ಮನ್ನು ಎಚ್ಚರಿಕೆ ನೀಡಿ ನಿಂದಿಸಿದವರಿಗೂ ಧನ್ಯವಾದಗಳು ನಿಮ್ಮ ನಿಂದನೆಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ನಿಮ್ಮ ನಿಂದನೆ ನಮಗೆ ಜಾಗೃತಿಇದ್ದಂತೆ ಅದನ್ನು ನಾನು ಸ್ವೀಕರಿಸುತ್ತೇನೆ.ಎಂದರು.
ಇನ್ನೊಂದು ಭಾಗವಾದ ನವಿಲೆಕೆರೆ ಭಾಗದ ಕೆನಾಲ್ ಕೆಲಸಕ್ಕೆ ರೈತರು ಭೂಮಿ ನೀಡಲು ಮುಂದೆ ಬಂದಿದ್ದು ಅವರನ್ನು ವಿಶ್ವಾಸಕ್ಕೆ ಪಡೆದು ಈ ಭಾಗದ ಕೆಲಸ ಮಾಡುತ್ತೆನೆ ರೈತರಿಗೆ ಭೂಸ್ವಾಧೀನಕ್ಕೆ ೧೫ಕೋಟಿ ಹಣ ಇದ್ದು ರೈತರು ದೊಡ್ಡಮನಸ್ಸು ಮಾಡಿ ತಮ್ಮ ಭೂಮಿ ಬಿಟ್ಟುಕೊಟ್ಟರೆ ಕೆನಾಲ್ ಕೆಲಸ ಮಾಡಿ ಈ ವರ್ಷದ ಕೊನೆಯ ವೇಳೆಗೆ ನೀರನ್ನು ಪ್ರಾಯೋಗಿಕವಾಗಿ ಹರಿಸುತ್ತೇನೆ ಈಗಾಗಲೇ ದಾಖಲೆ ನೀಡಿರುವಂತಹ ರೈತರಿಗೆ ಮೂರುಕೋಟಿಗಳಷ್ಟು ಪರಿಹಾರದ ಹಣ ನೀಡಲಾಗಿದೆ. ಅದೇ ರಿತಿ ಗ್ಯಾರೇಹಳ್ಳಿ ಭಾಗದ ರೈತರ ಮನವೊಲಿಸುವ ಕೆಲಸ ಮಾಡಿದ್ದೇನೆ ರೈತರು ಸಹಕರಿಸಿದರೆ ಖಂಡಿತ ಈ ಹೇಮಾವತಿ ನಾಲಾ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತೆನೆ ಎಂದರು. ಕಾವೇರಿ ನೀರಾವತಿ ನಿಗದಮದ ಎಕ್ಸಿಕಿಟಿವ್ ಎಂಜಿನಿಯರ್ ಮುರುಳಿಧರ್ ಎಚ್.ಆರ್ ಮಾತನಾಡಿ ಮುಖ್ಯ ನಾಲೆಯಿಂದ ೧೪೨ಕ್ಯೂಸೆಕ್ಸ್ ನೀರನ್ನು ಹಂಚಿಕೆ ಮಾಡಿದ್ದು ಈ ಹೇಮಾವತಿ ನಾಲೆಯಲ್ಲಿ ಹರಿಸಲಾಗುವುದು ಇದು ಮರುಳು ಮಿಶ್ರಿತ ಮಣ್ಣು ಹೆಚ್ಚಾಗಿದ್ದು ಅದು ಪ್ರತಿವರ್ಷ ಕುಸಿಯುತ್ತಿದೆ. ಅದ್ದರಿಂದ ಇದಕ್ಕೆ ಕಟ್ ಆ್ಯಂಡ್ ಕವರ್ ಮಾಡಿಸಲೇ ಬೇಕಿದೆ. ಈ ಕಟ್ ಆ್ಯಂಡ್ ಕವರ್ ಮಾಡದೇ ಇದ್ದರೆ ಹೂಳು ತೆಗೆಯಲು ಪ್ರತಿವರ್ಷ ಒಂದರಿಂದ ಒಂದುವರೆ ಕೋಟಿ ಹಣ ಬೇಕಾಗುತ್ತದೆ ಅದ್ದರಿಂದ ಶಾಸಕರಿಗೆ ಈ ಬಗ್ಗೆ ಅರಿವಿದ್ದು ಅವರು ಈಗಾಗಲೇ ಅದರ ಬಗ್ಗೆ ಕಾರ್ಯೋನ್ಮೂಖರಾಗಿದ್ದಾರೆ. ಎಂದರು.ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ ಎಚ್.ದಯಾನಂದ್,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿದರ್, ನಿರ್ದೇಶಕ ರಾಮಚಂದ್ರಯ್ಯ, ಕಾವೇರಿ ನಿರಾವರಿ ನಿಗಮದ ಎಇಇ ಕೀರ್ತಿ ನಾಯ್ಕ, ಎಇ ಸೌಜನ್ಯ ಸೇರಿದಂತೆ ನೀರಾವರಿ ಹೋರಾಟಗಾರರಾದ ಆಟೋ ಮಂಜುನಾಥ್, ಶ್ಯಾವಿಗೆಹಳ್ಳಿ ಮಧು ಗುತ್ತಿಗೆದಾರರು ಮುಖಂಡರುಗಳು ಇದ್ದರು.