ಕಾಂಗ್ರೆಸ್‌ ವಿರುದ್ಧ ಮುಯ್ಯಿ ತೀರಿಸಿದ್ದೇವೆ

KannadaprabhaNewsNetwork |  
Published : May 30, 2025, 12:33 AM IST
೨೯ಕೆಎಲ್‌ಆರ್-೨ಮುಳಬಾಗಿಲು ಅಂಬೇಡ್ಕರ್ ಪ್ರತಿಮೆ ಮುಂಭಾಗದ ರಸ್ತೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿರುವುದು. | Kannada Prabha

ಸಾರಾಂಶ

ಜೂ.೨೫ರಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ ನಡೆಯಲಿದ್ದು, ಮುಳಬಾಗಿಲಿನ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ನಿರ್ಧರಿಸಲು ಭಾನುವಾರ ಪಕ್ಷದ ಮುಖಂಡರ ಸಭೆ ನಡೆಸಿ ತೀರ್ಮಾನಿಸಲಾಗುವುದು. ತಾಲೂಕಿನಲ್ಲಿ ಮಾತ್ರ ಅಲ್ಲ ಜಿಲ್ಲೆಯಲ್ಲೂ ಪಕ್ಷ ಪ್ರಬಲವಾಗಿದೆ ಎಂಬುದನ್ನು ಸಾಬೀತಾಗಿದೆ.

ಕನ್ನಡಪ್ರಭ ವಾರ್ತೆ ಮುಳಬಾಗಿಲು ಕಳೆದ ಬಾರಿ ನಡೆದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ನ ಕೆಲ ಸದಸ್ಯರ ಬೆಂಬಲದೊಂದಿಗೆ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದು, ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿದ್ದರು. ಈಗ ಜೆಡಿಎಸ್ ಕಾರ್ಯದರ್ಶಿ ನಲ್ಲೂರು ರಘುಪತಿ ರೆಡ್ಡಿ ಅವರನ್ನು ಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲಿಸಿ ನಿರ್ದೇಶಕರನ್ನಾಗಿ ಮಾಡುವ ಮೂಲಕ ಮುಯ್ಯಿಗೆ ಮುಯ್ಯಿ ತೀರಿಸಿದ್ದೇವೆ ಎಂದು ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.ಕೋಲಾರದಲ್ಲಿ ನಡೆದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಲ್ಲೂರು ವಿ.ರಘುಪತಿ ರೆಡ್ಡಿ ನಿರ್ದೇಶಕರಾಗಿ ಆಯ್ಕೆಯಾದ ಬಳಿಕ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲೂಕಿನಲ್ಲಿ ಮಾತ್ರ ಅಲ್ಲ ಜಿಲ್ಲೆಯಲ್ಲೂ ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ ಎಂದರಲ್ಲದೆ, ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ. ನಮ್ಮ ಜೊತೆ ಒಟ್ಟು ಹತ್ತು ಜನ ಮತದಾರರಿದ್ದು ಇಬ್ಬರು ಮತದಾರರನ್ನು ಹೇಗಾದರೂ ಮಾಡಿ ಕಾಂಗ್ರೆಸ್ ನವರು ವಶಕ್ಕೆ ಪಡೆದುಕೊಳ್ಳಲು ನಡೆಸಿದ ಎಲ್ಲಾ ಪ್ರಯತ್ನಗಳನ್ನು ನಮ್ಮ ಪಕ್ಷದ ನಾಯಕರು ವಿಫಲಗೊಳಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಜೂ.೨೫ರಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ ನಡೆಯಲಿದ್ದು, ಮುಳಬಾಗಿಲಿನ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ನಿರ್ಧರಿಸಲು ಭಾನುವಾರ ಪಕ್ಷದ ಮುಖಂಡರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ ಮಾತನಾಡಿ, ಶಾಸಕರು ಮತ್ತು ಜೆಡಿಎಸ್ ಅಧ್ಯಕ್ಷರು ಮುಖಂಡರು ನನ್ನ ಆಯ್ಕೆಗೆ ತುಂಬಾ ಶ್ರಮಿಸಿದ್ದಾರೆ, ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಅವರ ಋಣ ತೀರಿಸಲು ಶಕ್ತಿಮೀರಿ ಶ್ರಮಿಸುತ್ತೇನೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಜೆಡಿಎಸ್ ಮುಖಂಡರಾದ ಸಿನಿಗೆನಳ್ಳಿ ಜಿ.ಆನಂದ ರೆಡ್ಡಿ, ಡೆಕ್ಕನ್ ಶ್ರೀನಿವಾಸ್ ಬಿ.ಎಂ.ಸಿ.ವೆಂಕಟರಾಮೇಗೌಡ, ಕೆಪಿ ಟ್ರಾವೆಲ್ಸ್ ಪ್ರಭಾಕರ್ಇ ಮತ್ತಿತರರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ