‘ನಮ್ಮ ವ್ಯಕ್ತಿತ್ವ ರೂಪಿಸಿದವರನ್ನು ಮರೆಯಬಾರದು’

KannadaprabhaNewsNetwork |  
Published : Mar 18, 2025, 12:32 AM IST
೧೭ಕೆಎಲ್‌ಆರ್-೪ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ರನ್ನು ಅಭಿನಂದಿಸುತ್ತಿರುವುದು. | Kannada Prabha

ಸಾರಾಂಶ

ಪತ್ರಕರ್ತನಾಗಿ ಕಷ್ಟ ಸುಖಗಳನ್ನು ಅನುಭವಿಸಿರುವ ನನಗೆ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಾಗೂ ಅನೇಕ ಗೆಳೆಯರನ್ನು ಕಳೆದುಕೊಂಡ ನೋವು ಮರೆಯಲು ಸಾಧ್ಯವಿಲ್ಲ ಹಾಗಾಗಿ ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ ಎಂಬ ಯೋಜನೆಯಡಿ ೫ ಲಕ್ಷದ ವರೆಗೆ ಉಚಿತ ಚಿಕಿತ್ಸೆ ನೀಡಲು ಯೋಜನೆ ಜಾರಿಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಮರ ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ಬೇರುಗಳು ಇರುವುದು ಭೂಮಿಯಲ್ಲಿ ಎಂಬಂತೆ ನಾವುಗಳು ಎಷ್ಟೆ ಎತ್ತರಕ್ಕೆ ಬೆಳೆದರೂ ಸಹ ನಾವು ಹತ್ತಿ ಬಂದ ಮೆಟ್ಟಿಲುಗಳನ್ನು ಮರೆಯಬಾರದು, ಅದೇ ರೀತಿ ತಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿ ವ್ಯಕ್ತಿತ್ವ ರೂಪಿಸಿಕೊಟ್ಟವರು ಕೋಲಾರ ಜನತೆ. ನನ್ನ ಉಸಿರು ಇರವವರೆಗೂ ಕೋಲಾರದ ಋಣ ಮರೆಯಲಾರೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಿಎಂರಿಂದ ಪತ್ರಕರ್ತರ ಕಲ್ಯಾಣಾ ನಿಧಿಗೆ ೨೫ ಲಕ್ಷ ರು.ಗಳನ್ನು ಬಿಡುಗಡೆ ಮಾಡಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದರು. ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ

ಪತ್ರಕರ್ತನಾಗಿ ಕಷ್ಟ ಸುಖಗಳನ್ನು ಅನುಭವಿಸಿರುವ ನನಗೆ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಾಗೂ ಅನೇಕ ಗೆಳೆಯರನ್ನು ಕಳೆದುಕೊಂಡ ನೋವು ಮರೆಯಲು ಸಾಧ್ಯವಿಲ್ಲ ಹಾಗಾಗಿ ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ ಎಂಬ ಯೋಜನೆಯಡಿ ೫ ಲಕ್ಷದ ವರೆಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಮಂಜೂರು ಮಾಡಿಸುವುದು ನನ್ನ ಕರ್ತವ್ಯವಾಗಿತ್ತು ಎಂದರು.

ಕ್ಷೇಮಾಭಿವೃದ್ದಿಗೆ ನಿಧಿಗೆ ₹25 ಲಕ್ಷ

ಇದರ ಜೊತೆಗೆ ವಿಶೇಷವಾಗಿ ತವರಿನ ಕಾಳಜಿಯ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿಗೆ ನಿಧಿಗೆ ಸರ್ಕಾರದ ೨೫ ಲಕ್ಷ ರೂ ದೇಣಿಗೆ ಕೊಡಿಸಿದೆ ಎಂದು ಹೇಳಿದರು.

ಚಲನ ಚಿತ್ರ ಮಂಡಳಿ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ, ಕೋಲಾರಕ್ಕೂ ನನಗೂ ಅವಿನಾಭಾಜ್ಯ ಸಂಬಂಧವಿದೆ. ನನ್ನ ತಾಯಿಯ ತವರು ಇದೇ ಕೋಲಾರ, ನನ್ನ ತಂದೆ ಬೆಮೆಲ್ ದಿನಗೂಲಿ ನೌಕರರಾಗಿದ್ದು ತೀರ ಬಡತನದ ಪರಿಸ್ಥಿತಿಯಲ್ಲಿ ಬೆಳೆದು ಇಲ್ಲಿನ ಮೇರಿಯಮ್ಮ ಚರ್ಚಿನಲ್ಲಿ ಮಲಗುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡರು.

ಪತ್ರಕರ್ತರಿಗೆ ಪ್ರಭಾಕರ್‌ ಆದರ್ಶ

ವಸತಿ ಸಚಿವರ ಮಾಧ್ಯಮದ ಸಲಹೆಗಾರ ಲಕ್ಷ್ಮೀನಾರಾಯಣ ಮಾತನಾಡಿ, ಕೆ.ವಿ.ಪ್ರಭಾಕರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಸಣ್ಣ ಪತ್ರಿಕೆ, ದೊಡ್ಡ ಪತ್ರಿಕೆ ಎಂಬ ಭೇದಭಾವ ತೋರದೆ ಪತ್ರಕರ್ತರೆಲ್ಲಾರೂ ತಮ್ಮ ಕುಟುಂಬದವರಂತೆ ಭಾವಿಸಿ ಸ್ಪಂದಿಸುವ ಕೆಲಸ ಮಾಡುವ ಮೂಲಕ ನಮಗೆ ಆದರ್ಶವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕರಾದ ಕೆ.ಎಸ್.ಗಣೇಶ್, ವಿ.ಮುನಿರಾಜು. ರಾಜ್ಯ ಖಜಾಂಜಿ ವಾಸುವೇವ ಹೊಳ್ಳ, ಕೆ.ವಿ.ಪ್ರಭಾಕರ್‌ರ ಧರ್ಮಪತ್ನಿ ಮೀರಾ ಪ್ರಭಾಕರ್, ಕರ್ನಾಟಕ ಚಲನ ಚಿತ್ರ ನಿರ್ದೇಶಕ ಚಿದಾನಂದ ಪಾಟೀಲ್ ಇದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿ, ಖಜಾಂಜಿ ಎ.ಜಿ.ಸುರೇಶ್ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ