ಬಿಜೆಪಿಗೆ ಹೋಗುವ ಮಾತೇ ಇಲ್ಲ

KannadaprabhaNewsNetwork |  
Published : Feb 11, 2024, 01:48 AM IST
 ಫೋಟೋ ಶಿರ್ಷಿಕೆ: (10 ಕಾಗವಾಡ-1) ಉಗಾರ ಖುರ್ದ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಶಾಸಕ ರಾಜು ಕಾಗೆ, ವಸಂತ ಖೋತ, ಶಂಕರ ವಾಘಮೋಡೆ, ವಲ್ಲಭ ಕಾಗೆ ಮತ್ತು ಇತತರು.  | Kannada Prabha

ಸಾರಾಂಶ

ನನ್ನ ಆಪ್ತ ಸ್ನೇಹಿತ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ .

ಕನ್ನಡಪ್ರಭ ವಾರ್ತೆ ಕಾಗವಾಡ

ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ ಅವರು ಪುನಃ ಬಿಜೆಪಿ ಮರಳಿದ ಬೆನ್ನಲ್ಲೆ ರಾಜಕೀಯ ವಲಯದಲ್ಲಿ ಹಲವು ಉಹಾಪೋಹಗಳು ಸೃಷ್ಠಿಯಾಗಿವೆ. ನನ್ನ ಆಪ್ತ ಸ್ನೇಹಿತ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ರಾಜು ಕಾಗೆ ಸ್ಪಷ್ಟ ಪಡಿಸಿದರು.

ಅವರು ತಾಲೂಕಿನ ಉಗಾರ ಖುರ್ದ ಪುರಸಭೆಯ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ಅನುದಾನದಡಿ, 15ನೇ ಹಣಕಾಸು ಯೋಜನೆಯ ಸ್ಚಚ್ಛ ಭಾರತ ಮಿಷನ್‌ದಡಿ ಮಂಜೂರಾದ ₹2.53 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ವಾರ್ಡಗಳಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಆ ಪಕ್ಷ ಬೇಡವೆಂದೇ ಬಿಟ್ಟು ಬಂದಿರುವಾಗ ಮರಳಿ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೇವಲ ಮಾಧ್ಯಮದವರ ಸೃಷ್ಟಿ. ಕೆಲವು ಸುದ್ದಿ ವಾಹಿನಿಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಕ್ಕೆ ಇಂತಹ ಸುದ್ದಿಗಳನ್ನು ಬಿತ್ತರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ನಿರ್ಮಾಣ, ಸಿಸಿ ರಸ್ತೆ, ಫೇವರ್ಸ್‌ ಅಳವಡಿಕೆ, ಒಳಚರಂಡಿ, ಬೋರವೆಲ್ ಕೊರೆಸುವುದು, ಜಲಕುಂಭ ನಿರ್ಮಾಣ, ಮೋಟಾರ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದಿಂದ ಹಾಗೂ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದು, ಉಗಾರ ಖುರ್ದ ಪಟ್ಟಣದ ಅಭಿವೃದ್ಧಿಗಾಗಿ ಸುಮಾರು ₹2.53 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಮುಖಂಡರಾದ ಶಂಕರ ವಾಘಮೋಡೆ, ವಸಂತ ಖೋತ, ಗಂಗಾಧರ, ಜೋರಾಪೂರ ವಲ್ಲಭ ಕಾಗೆ, ಪ್ರಫುಲ್ ಥೋರೂಸೆ, ಈಶ್ವರ ಕಾಂಬಳೆ, ರಾಘವೇಂದ್ರ ಜಾಯಗೊಂಡೆ, ಅಮರ ಜಗತಾಪ, ವಸಂತ ಖೋತ, ಪ್ರಕಾಶ ಥೋರೂಸೆ, ರಾಜು ಗುರುವ, ಹರುಣ ಮುಲ್ಲಾ, ವಿಜಯ ಅಸೋದೆ, ದೀಲಿಪ ಹುಲ್ಲೋಳ್ಳಿ, ರಸೂಲ ನದಾಫ, ಬಸ್ಸು ಸಾಂಗಾವೆ, ಸೋನಾಬಾಯಿ ಸಾಂಗಾವೆ, ಶೈಲಾ ಮಾದರ, ರಾಜು ಪಾಟೀಲ, ಬಸವರಾಜ ಪಾಟೀಲ, ಪ್ರತಾಪ ಜತ್ರಾಟೆ, ವಿಕ್ರಂ ಧನಗರ, ರುಸ್ತುಂ ಸುತಾರ, ರವಿ ರಾಜಮಾನೆ, ಗುತ್ತಿಗೆದಾರರಾದ ಸಂದೀಪ ಖರಾಡೆ, ಚಂದ್ರಕಾಂತ ಕಾಂಬಳೆ, ಶ್ರೀಶೈಲ ಪಾಟೀಲ, ಅಜೀತ ಭೋಸಲೆ, ಹುಸೆನ ನದಾಫ, ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಕಪ್ ವಾಹನ ಅಡ್ಡಗಟ್ಟಿ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಕೆ ದರೋಡೆ
ಪೋಕ್ಸೋ ಕಾಯ್ದೆ ಸರಿಯಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತೆಯರ ರಕ್ಷಣೆ