ಛಲ, ಶ್ರದ್ಧೆ ಇದ್ದಾಗ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

KannadaprabhaNewsNetwork |  
Published : Apr 05, 2025, 12:49 AM IST
ಶಿರ್ಷಿಕೆ-3ಕೆ.ಎಂ.ಎಲ್‌.ಆರ್.3-ಮಾಲೂರು ತಾಲೂಕಿನ ಕೋಡೂರು ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಕಾರ್ಯ ವಿಭಾಗ ಸಂಪನ್ಮೂಲ ಕೇಂದ್ರ, ದೊಡ್ಡ ಶಿವಾರ ಗ್ರಾ.ಪಂ, ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೨೦೨೫ರ ಸಮಾಜಕಾರ್ಯ ಗ್ರಾಮೀಣ ಕಲಿಕಾ ಶಿಬಿರ ಕಾರ್ಯಕ್ರಮವನ್ನು ಶಾಸಕ ಕೆ.ವೈ.ನಂಜೇಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲಿ ಸ್ವಚ್ಛತೆ ,ಜನರ ಜೀವನ ,ರೈತರು ಹಾಲು ಉತ್ಪಾದಕರ ಸಮಸ್ಯೆಗಳು ಅರಿಯಲು ಸಮಾಜಕಾರ್ಯ ಗ್ರಾಮೀಣ ಕಲಿಕೆ ಕಾರ್ಯಕ್ರಮ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜು ವ್ಯಾಸಂಗದ ದಿನಗಳಲ್ಲಿ ಬಹಳ ಎಚ್ಚರವಹಿಸಿ, ಅಭ್ಯಾಸ ಮಾಡುವ ಮೂಲಕ ಪ್ರಗತಿ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ವಿದ್ಯಾರ್ಥಿಗಳ ಜೀವನದಲ್ಲಿ ಆಸಕ್ತಿ, ಛಲ, ಶ್ರದ್ಧೆ, ಸಮಯಪ್ರಜ್ಞೆ, ಜವಾಬ್ದಾರಿ, ಇದ್ದರೆ ಭವಿಷ್ಯದ ಜೀವನ ಸುಂದರಗೊಳಿಸಿಕೊಳ್ಳಬಹುದು ಎಂದು ಶಾಸಕ ಕೆ.ವೈ.ನಂಜೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ದೊಡ್ಡ ಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡೂರು ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಕಾರ್ಯ ವಿಭಾಗ ಸಂಪನ್ಮೂಲ ಕೇಂದ್ರ ದೊಡ್ಡ ಶಿವಾರ ಗ್ರಾಮ ಪಂಚಾಯಿತಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾಜಕಾರ್ಯ ಗ್ರಾಮೀಣ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಭ್ಯಾಸಕ್ಕೆ ಗಮನಕೊಡಿ

ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲಿ ಸ್ವಚ್ಛತೆ ,ಜನರ ಜೀವನ ,ರೈತರು ಹಾಲು ಉತ್ಪಾದಕರ ಸಮಸ್ಯೆಗಳು ಅರಿಯಲು ಸಮಾಜಕಾರ್ಯ ಗ್ರಾಮೀಣ ಕಲಿಕೆ ಕಾರ್ಯಕ್ರಮ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜು ವ್ಯಾಸಂಗದ ದಿನಗಳಲ್ಲಿ ಬಹಳ ಎಚ್ಚರವಹಿಸಿ, ಅಭ್ಯಾಸ ಮಾಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು. ಎಲ್ಲ ಸೌಲಭ್ಯ ಇರುವ ಕಾಲೇಜ

ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಪಟ್ಟಣದಲ್ಲಿರುವ ಪ್ರಥಮ ದರ್ಜೆ ಕಾಲೇಜಿಗೆ ಮೂಲಭೂತ ಸೌಲತ್ತುಗಳು ರಸ್ತೆ ಬೀದಿ ದೀಪ, ಬಸ್ ಸೌಲಭ್ಯ, ಸಹ ಕಲ್ಪಿಸಲಾಗಿದೆ, ಸರ್ಕಾರಿ ಶಾಲಾ ಮಕ್ಕಳು ಯಾವುದರಲ್ಲಿಯೂ ಸಹ ಕಡಿಮೆ ಇಲ್ಲ ತಾಲೂಕಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು. ಪ್ರಾಂಶುಪಾಲ ಜಿ.ಅಶ್ವತನಾರಾಯಣ, ಹೆಡ್ ಸ್ಟ್ರೀಮ್ಸ್ ಸಂಸ್ಥೆಯ ವ್ಯವಸ್ಥಾಪಕ ಲೋಕೇಶ್ ವಿ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ದೊಡ್ಡ ಶಿವಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತ್ರಿವೇಣಿ ಗೋಪಾಲ, ಸದಸ್ಯರಾದ ಅಮರನಾಥ್ , ಪ್ರಾ.ಶಾ.ಶಿ. ತಾಲ್ಲೂಕು ಸಂಘದ ಅಧ್ಯಕ್ಷ ಷಣ್ಮುಖಯ್ಯ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''