ಸಾಧಕರ ಪಟ್ಟಿಯಲ್ಲಿ ಮಹಿಳೆ ಅಗ್ರಗಣ್ಯ ಸ್ಥಾನ ಪಡೆಯಬೇಕು

KannadaprabhaNewsNetwork |  
Published : Mar 16, 2025, 01:47 AM IST
14ಎಚ್ಎಸ್ಎನ್9 : ಲೇಡಿಸ್ ರಿಕ್ರಿಯೇಷನ್‌ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಧುನಿಕ ಯುಗದಲ್ಲಿ ಮಹಿಳೆ ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ಧಾಳೆ. ದೇಶದ ಸಾಧಕರ ಪಟ್ಟಿಯಲ್ಲಿ ಮಹಿಳೆ ಅಗ್ರಗಣ್ಯ ಸ್ಥಾನ ಪಡೆಯಬೇಕು ಎಂದು ಚಲನಚಿತ್ರ ಹಿರಿಯ ನಟಿ ಸುಧಾರಾಣಿ ಅಭಿಪ್ರಾಯಪಟ್ಟರು. ನಾಲ್ಕೈದು ದಶಗಳ ಹಿಂದೆ ಪ್ರತಿ ಕುಟುಂಬ ಒಂದು ಗಂಡು ಮಗು ಬೇಕು ಎನ್ನುತ್ತಿದ್ದರು, ಈಗ ಕಾಲ ಬದಲಾಗಿದೆ ಹೆಣ್ಣಾಗಲಿ ಗಂಡಾಗಲಿ ಒಂದು ಮಗುವನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿ ದೇಶಕ್ಕೆ ಉತ್ತಮ ಪ್ರಜೆ ಮಾಡುವುದರೊಂದಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಕಲಿಸುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಆಧುನಿಕ ಯುಗದಲ್ಲಿ ಮಹಿಳೆ ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ಧಾಳೆ. ದೇಶದ ಸಾಧಕರ ಪಟ್ಟಿಯಲ್ಲಿ ಮಹಿಳೆ ಅಗ್ರಗಣ್ಯ ಸ್ಥಾನ ಪಡೆಯಬೇಕು ಎಂದು ಚಲನಚಿತ್ರ ಹಿರಿಯ ನಟಿ ಸುಧಾರಾಣಿ ಅಭಿಪ್ರಾಯಪಟ್ಟರು.

ಪಟ್ಟಣದ ಸುಮಿತ್ರ ಕೆಂಬಾಳು ಪ್ರಕಾಶ್ ಕನ್ವೆನ್ಷನ್ ಹಾಲ್‌ನಲ್ಲಿ ಲೇಡಿಸ್ ರಿಕ್ರಿಯೇಷನ್‌ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎರಡು ದಶಕಗಳ ಹಿಂದೆ ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗುತ್ತಿದ್ದರು, ಆದರೆ ಇತ್ತೀಚಿನ ದಿವಸಗಳಲ್ಲಿ ಪುರುಷರಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮಯ ಸಂಗತಿ ಎಂದು ಹೇಳಿದರು.ದೇಶದ ಸಾಕಷ್ಟು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ನಿರ್ವಹಣೆ ಮಾಡುವ ಮೂಲಕ ಮನೆಯ ಜವಾಬ್ದಾರಿಯನ್ನು ಹೆಣ್ಣು ಹೊರುತ್ತಿದ್ದಾಳೆ, ವಿಶ್ವದ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸಿಇಒ ಆಗುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಹಿಳೆ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದು ತಿಳಿಸಿದರು.

ನಾಲ್ಕೈದು ದಶಗಳ ಹಿಂದೆ ಪ್ರತಿ ಕುಟುಂಬ ಒಂದು ಗಂಡು ಮಗು ಬೇಕು ಎನ್ನುತ್ತಿದ್ದರು, ಈಗ ಕಾಲ ಬದಲಾಗಿದೆ ಹೆಣ್ಣಾಗಲಿ ಗಂಡಾಗಲಿ ಒಂದು ಮಗುವನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿ ದೇಶಕ್ಕೆ ಉತ್ತಮ ಪ್ರಜೆ ಮಾಡುವುದರೊಂದಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಕಲಿಸುತ್ತಿದ್ದಾರೆ ಎಂದರು.ಲೇಡಿಸ್ ಕ್ಲಬ್‌ಗಳು ಮಹಾನಗರದಲ್ಲಿ ಒಟ್ಟಾಗಿ ಸೇರಿ ಪಾರ್ಟಿಗಳನ್ನು ಮಾಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿನ ಹಾಗೂ ಪಟ್ಟಣಗಳಲ್ಲಿ ಲೇಡಿಸ್ ಕ್ಲಬ್‌ನ ಸದಸ್ಯರು ಒಟ್ಟಾಗಿ ದೇಶದ ಬಗ್ಗೆ ಚಿಂತಿಸುತ್ತಾರೆ, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಡೆ ಮುಂದಾಗುತ್ತಿದ್ದಾರೆ, ಆಧುನಿಕ ಯುಗದಲ್ಲಿ ವಿದೇಶ ಸಂಸ್ಕೃತಿಗೆ ಮಾರುಹೋಗಿ ಈ ಮಣ್ಣಿನ ಸಂಸ್ಕೃತಿಯನ್ನು ಮೆರಯುತ್ತಿದ್ದಾರೆ ಇದಾಗಬಾರದು, ನಾವು ನಮ್ಮ ನೆಲದ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಕಡೆ ಆಲೋಚಿಸಬೇಕು ಇದನ್ನು ನೀವು ಮಾಡುತ್ತಿರುವುದು ಶ್ಲಾಘನೀಯ ಎಂದರು.ಮಹಿಳೆ ತಾನು ಕಲಿತ ಜ್ಞಾನವನ್ನು ಇತರರಿಗೆ ಹಂಚಬೇಕು, ಕೆಲ ಮಹಿಳೆಯರು ತನ್ನ ಜ್ಞಾನವನ್ನು ತನ್ನ ಸ್ನೇಹಿತೆಗೆ ಇಲ್ಲವೆ ಸಹೋದರಿಗೆ ತಿಳಿಸಿದರೆ ಅವಳು ಮುಂದೆ ಬರುತ್ತಾರೆ ಎಂಬ ಭಾವನೆಯಿಂದ ತನ್ನ ಜ್ಞಾನ ತನಗ ಸೀಮಿತ ಮಾಡುತ್ತಾಳೆ ಇದಾಗಬಾರದು. ತಾಯಿಯಾಗಿ ಮಗುವಿಗೆ ಯಾವ ರೀತಿ ತನ್ನಲ್ಲಿ ಇರುವುದನ್ನು ಧಾರೆ ಎರೆಯುತ್ತಾಳೆ ಅದೇ ರೀತಿ ತನ್ನಲ್ಲಿನ ಜ್ಞಾನವನ್ನು ಇತರರಿಗೆ ಹಂಚಲು ಮುಂದಾಬೇಕು ಎಂದು ಕಿವಿಮಾತು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಂದಿರಾ ಮಾತನಾಡಿ, ಇಬ್ಬರು ಮಹಿಳೆಯರು ಒಟ್ಟಾಗಿ ಸೇರಿದರೆ ಅಲ್ಲಿ ವ್ಯಾಜ್ಯ ನಡೆಯುತ್ತದೆ ಎಂದು ಮಾತನಾಡುತ್ತಾರೆ. ಇದು ಇತ್ತೀಚಿನ ದಿವಸಗಳಲ್ಲಿ ಮರೆಯಾಗುತ್ತಿದೆ. ಮಹಿಳೆ ಒಟ್ಟಾಗಿ ಸಾಕಷ್ಟು ಸಲವತ್ತುಗಳನ್ನು ಸರ್ಕಾದಿಂದ ಪಡೆಯುತ್ತಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಇದು ಮಹಿಳಾ ಸಂಘಟನೆಗೆ ಇರುವ ಶಕ್ತಿ ಎಂದರು.ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಹೇಮಾ ಬಾಬು, ವನಜಾ ಧಮೇಂದ್ರ, ನೇತ್ರಾನವೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು, ಲೇಡಿಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷೆ ಸಿ.ಕೆ.ಕುಸುಮಾ ರಾಣಿ, ಕ್ಲಬಿನ ಮುಖ್ಯಸ್ಥರಾದ ವಾಣಿರವೀಶ್, ಗೀತಾ ಬಾಲಕೃಷ್ಣ, ಗಿರಿಜಾ ಗಂಗಾಧರ್, ನೇತ್ರಾ ನವೀನ್, ರಮ್ಯಾ ಆನಂದ್, ವೀಣಾ ಚಿದಂಬರ್, ಅಂಭಿಕಾ ರಾಮಣ್ಣ, ನಾಗರತ್ನ ಶೇಖರ್ ಹಾಗೂ ಕ್ಲಬ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ