ಇಂದಿನಿಂದ ಮೂರು ದಿನ ‘ಯಲಹಂಕ ಸಂಭ್ರಮ’

KannadaprabhaNewsNetwork |  
Published : Jul 12, 2024, 01:31 AM IST
ಎಸ್‌.ಆರ್‌.ವಿಶ್ವನಾಥ್‌ | Kannada Prabha

ಸಾರಾಂಶ

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್ ಆಯೋಜಿಸಿರುವ ಯಲಹಂಕ ಸಂಭ್ರಮ ಶುಕ್ರವಾರಿಂದ ಆರಂಭ ಆಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಆಯೋಜಿಸುತ್ತಿರುವ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ ಮೂರು ದಿನ ನಡೆಯಲಿದ್ದು, ಇಂದು (ಜುಲೈ 12) ಅದ್ಧೂರಿಯಾಗಿ ಪ್ರಾರಂಭವಾಗಲಿದೆ.

ಜುಲೈ 12ರಿಂದ 14ರವರೆಗೆ ಯಲಹಂಕ ನ್ಯೂಟೌನ್‌, ಹೊಯ್ಸಳ ಮೈದಾನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ‘ಯಲಹಂಕ ಸಂಭ್ರಮ’ ನಡೆಯಲಿದೆ. ಇಂದು(ಶುಕ್ರವಾರ) ಸಂಜೆ 7ಕ್ಕೆ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಚಾಲನೆ ನೀಡಲಿದ್ದಾರೆ. ಮೂರು ದಿನ ನಡೆಯಲಿರುವ ಯಲಹಂಕ ಸಂಭ್ರಮದಲ್ಲಿ, ರುಚಿಯಾದ ಸ್ಥಳೀಯ ತಿಂಡಿ, ತಿನಿಸುಗಳನ್ನು ಸವಿಯಬಹುದು. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೊಂದು ಸುವರ್ಣ ಅವಕಾಶ.

ಸಂಭ್ರಮದಲ್ಲಿ ರಾಜಕೀಯ ಗಣ್ಯರು, ಕಲಾವಿದರು ಹಾಗೂ ನಟ ನಟಿಯರು ಭಾಗವಹಿಸಲಿದ್ದಾರೆ, ಮೂರೂ ದಿನವೂ ಯಲಹಂಕ ಜನತಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಕ್ಯೂಟ್ ಬೇಬಿ ಸ್ಪರ್ಧೆ ಹಾಗೂ ಬೊಂಬಾಟ್ ಜೋಡಿ, ಫ್ಯಾಷನ್ ಶೋ, ಅಡುಗೆ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳು ಇರಲಿವೆ. ವಿವಿಧ ಕಲಾ ತಂಡಗಳು ಮೂರು ದಿನದ ಯಲಹಂಕ ಸಂಭ್ರಮದಲ್ಲಿ ಜನರನ್ನು ರಂಜಿಸಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.ಇಂದಿನ ಕಾರ್ಯಕ್ರಮ

ಮಧ್ಯಾಹ್ನ 2ಕ್ಕೆ ಯಲಹಂಕ ಸಂಭ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 3ಕ್ಕೆ ಮುದ್ದುಮಗು ಮತ್ತು ವೇಷಭೂಷಣ(ಮಕ್ಕಳಿಗಾಗಿ), ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ಮತ್ತು ಯಲಹಂಕ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಹಾಸ್ಯ ಸಂಜೆ- ಮಿಮಿಕ್ರಿ ಸಾಗರ್‌ ಹಾಗೂ ರಾಘವೇಂದ್ರ ಅವರಿಂದ ಮಿಮಿಕ್ರಿ ಕಾರ್ಯಕ್ರಮಗಳು. ರಾತ್ರಿ 8ಕ್ಕೆ ಚಲನಚಿತ್ರ ಕಲಾವಿದ ಲೋಕೇಶ್‌, ವೈಷ್ಣವಿ ಮೆಲೋಡಿಸ್‌ ಮತ್ತು ತಂಡ ಹಾಗೂ ಸರಿಗಮಪ ಖ್ಯಾತಿಯ ಜ್ಞಾನಾ ಗುರುರಾಜ್‌ ಅವರಿಂದ ಸಂಗೀತ ಸಂಜೆ, ರಾತ್ರಿ 9ಕ್ಕೆ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...