ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ 1,06,421 ಪ್ರಕರಣ ಇತ್ಯರ್ಥ

KannadaprabhaNewsNetwork |  
Published : Dec 16, 2023, 02:01 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 3204 ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ 1,06,421 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ ಗೀತಾ ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಧೀಶ ಗೀತಾ ಕೆ.ಬಿ ಮಾಹಿತಿ । ವೈಮನಸ್ಸು ತೊರೆದು ಒಂದಾದ 9 ದಂಪತಿಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 3204 ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ 1,06,421 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ ಗೀತಾ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ್‌ ಅದಾಲತ್ ಪ್ರಕರಣಗಳ ಬಗ್ಗೆ ಈ ಕುರಿತು ಮಾಹಿತಿ ನೀಡಿರುವ ಅವರು, ಇತ್ಯರ್ಥದ ಒಟ್ಟು ಮೊತ್ತ 17,36,39,597 ರು ಆಗಿದೆ. ಈ ಬಾರಿ ನಡೆದ ಲೋಕ್ ಅದಾಲತ್‍ನಲ್ಲಿ ವಿಶೇಷವಾಗಿ 41 ಪಾಲು ವಿಭಾಗದ ಪ್ರಕರಣಗಳು, 80 ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, 200 ಚೆಕ್ ಬೌನ್ಸ್ ಪ್ರಕರಣ, 42 ಅಪರಾಧಿಕ ಕಾಂಪೌಂಡ್ ಪ್ರಕರಣಗಳು, 76 ಅಪಘಾತ ವಿಮಾ ಪ್ರಕರಣಗಳು, 14 ಕೌಟುಂಬಿಕ ಪ್ರಕರಣಗಳು, 144 ಅಮಲ್ ಜಾರಿ ಪ್ರಕರಣಗಳು, ಕರಾರಿಗೆ ಸಂಬಂಧಿಸಿದ 10 ದಾವೆಗಳು, ವಿವಿಧ ರೀತಿಯ 94 ಸಿವಿಲ್ ದಾವೆಗಳು, ಅಪರಾಧಿಕ ಕಾಂಪೌಂಡಬಲ್ ಪ್ರಕರಣಗಳು (ವಿವಿಧ ಅಪರಾಧಿಕ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು) ಇತರೆ ಅಪರಾಧಿಕ ಕಾಯ್ದೆಗಳ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ ಎಂದಿದ್ದಾರೆ.

ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಒಟ್ಟು 9 ದಂಪತಿಗಳು, ಅಂದರೆ ಹಿರಿಯೂರು ನ್ಯಾಯಾಲಯದಲ್ಲಿ ಮೂರು ದಂಪತಿಗಳು, ಮೊಳಕಾಲ್ಮೂರು ನ್ಯಾಯಾಲಯದಲ್ಲಿ ಇಬ್ಬರು ಹಾಗೂ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ನ್ಯಾಯಾಲಯದಲ್ಲಿ ತಲಾ ಒಂದು ದಂಪತಿ ತಮ್ಮ ವೈಮನಸ್ಸು ಬಿಟ್ಟು ಮತ್ತೆ ಒಂದಾಗಿದ್ದಾರೆ. ವಿಶೇಷವಾಗಿ ಸುಮಾರು 374 ಸಿವಿಲ್ ದಾವೆಗಳು ರಾಜಿಯಾಗಿರುತ್ತದೆ. ಅಲ್ಲದೇ 200 ಚೆಕ್ ಅಮಾನ್ಯ ಪ್ರಕರಣಗಳು ರಾಜಿಯಾಗಿವೆ. ಮುಂಬರುವ ಲೋಕ್ ಅದಾಲತ್‍ನಲ್ಲಿ ಇನ್ನೂ ಹೆಚ್ಚು ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಗೀತಾ ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

-------

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ