ಕನ್ನಡಪ್ರಭ ವಾರ್ತೆ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಸಭಾಂಗಣದಲ್ಲಿ ಡಾ. ಡಿ.ಸಿ. ಪಾವಟೆ ಫೌಂಡೇಷನ್ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ''''ಅಪರೂಪದ ಭೂಮಿಯ ಉಲ್ಕೆಗಳು ಮತ್ತು ಆಯಸ್ಕಾಂತಗಳು'''' ವಿಷಯದ ಕುರಿತು ಮಾತನಾಡಿದರು.
ಲೋಹ ಭೂಮಿಯ ಒಂದು ಭಾಗವಾಗಿದ್ದು, ಲೋಹಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಇದಕ್ಕೆ ಸಂಬಂಧಿಸಿದ ಜಾಗತಿಕ ಮಟ್ಟದಲ್ಲಿ ಅನೇಕ ಅನ್ವೇಷಣೆಗಳು ನಡೆಯುತ್ತಲಿವೆ. ಅನೇಕ ವಿಶಿಷ್ಠವಾದ ಲೋಹಗಳನ್ನು ಭುಮಿಯ ಮೇಲೆ ಕಾಣಬಹುದು ಎಂದ ಅವರು ಜಾಗತಿಕವಾಗಿ ಚೀನಾ, ಅಮೇರಿಕಾ ದೇಶಗಳು ಭೂಮಿಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ ಎಂದರು.ಲೋಹವನ್ನು ವೈದ್ಯಕೀಯ ಸೇರಿದಂತೆ ಅನೇಕ ವಿವಿಧ ಕ್ಷೇತ್ರದಲ್ಲಿ ಬೇರೆ-ಬೇರೆ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಆಯಸ್ಕಾಂತ ಇಂದು ಮಾರುಕಟ್ಟೆಯ ಒಂದು ಉತ್ಪನ್ನವಾಗಿದೆ. ಪ್ರಸ್ತುತ ಲೋಹವನ್ನು ವೈಜ್ಞಾನಿಕವಾಗಿ ಮರು ವ್ಯಾಖ್ಯಾನ ಮಾಡಲಾಗುತ್ತದೆ ಎಂದರು.
ಉಪನ್ಯಾಸದ ಸಂಯೋಜಕ ಡಾ. ಬಿ.ಎಚ್. ನಾಗೂರ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡಿನ ಸಿಡ್ನಿ ಸೆಸಕ್ಸ್ ಕಾಲೇಜಿನ ಸಹಯೋಗದಲ್ಲಿ ಪ್ರತಿವರ್ಷ ಮೂರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಫೆಲೋಶಿಪ್ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಾಲ್ಕು ತಿಂಗಳ ವರೆಗೆ ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ ಎಂದರು. ಪ್ರಸ್ತುತ ವರ್ಷದಲ್ಲಿ ಡಾ. ಡಿ.ಸಿ. ಪಾವಟೆ ಫೌಂಡೇಶನ್ ಫೆಲೋಶಿಪ್‌ಗೆ ಖಲೀಲ್ ಅಹ್ಮದ ದಿಲಷಾದ, ಸಂಜನಾ ಕೃಷ್ಣನ್ ಆಯ್ಕೆ ಆಗಿದ್ದಾರೆ ಎಂದರು.
ಕಳೆದ ವರ್ಷಗಳಿಂದ ಪಾವಟೆ ಫೌಂಡೇಶನ್ ಪ್ರತಿಭಾವಂತ ಸಂಶೋಧಕರನ್ನು ಗುರುತಿಸುವಲ್ಲಿ ತನ್ನದೇ ಪಾತ್ರವನ್ನು ಹೊಂದಿದೆ ಎಂದರು.