ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನಕ್ಕೆ ₹1.25 ಕೋಟಿ: ಶಾಸಕ ನೇಮರಾಜನಾಯ್ಕ

KannadaprabhaNewsNetwork |  
Published : May 11, 2026, 02:15 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು ವರರಿಗೆ ತಾಳಿ ಮತ್ತು ವಸ್ತ್ರ ದಾನಗೈದ ಶಾಸಕ ನೇಮರಾಜ ನಾಯ್ಕ ಅವರನ್ನು ರೆಡ್ಡಿ ಸಮಾಜ ಬಾಂಧವರು ಸನ್ಮಾನಿಸಿದರು. ನಾನಾ ಮಠಾಧೀಶರು ಮತ್ತು ಮುಖಂಡ ಕನ್ನಿಹಳ್ಳಿ ಚಂದ್ರಶೇಖರ್ ಮತ್ತಿತರರಿದ್ದರು | Kannada Prabha

ಸಾರಾಂಶ

ರಾಜ್ಯ ಸರಕಾರ ಅನುದಾನ ನೀಡದಿದ್ದರೂ ಕೇಂದ್ರದ ನಾನಾ ಇಲಾಖೆಗಳ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ನೇಮರಾಜ ನಾಯ್ಕ ಹೇಳಿದರು.

ಹಗರಿಬೊಮ್ಮನಹಳ್ಳಿ: ಇದೇ ಜೂನ್‌ನಲ್ಲಿ ₹1.25 ಕೋಟಿ ಅನುದಾನ ಒದಗಿಸಿ ಪಟ್ಟಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ನೇಮರಾಜನಾಯ್ಕ ಪ್ರಕಟಿಸಿದರು.

ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಉಚಿತ ವಿವಾಹ ಸಮಾರಂಭದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರಕಾರ ಅನುದಾನ ನೀಡದಿದ್ದರೂ ಕೇಂದ್ರದ ನಾನಾ ಇಲಾಖೆಗಳ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇವಲ ಎರಡು ವರ್ಷಗಳಲ್ಲಿ ಗ್ರಾಮದಲ್ಲಿ ನಾಲ್ಕು ಕೋಟಿ ಅನುದಾನ ಒದಗಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ₹60 ಕೋಟಿ ವೆಚ್ಚದಲ್ಲಿ ತಾಲೂಕಿನ ರಸ್ತೆ ಸುಧಾರಣೆಯ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ವಿವರಿಸಿದರು.

ಇನ್ನು ಎರಡು ವರ್ಷ ಕಳೆದರೆ ಜನಪರ ಸರಕಾರವನ್ನು ಚುನಾಯಿಸುವ ಜವಾಬ್ದಾರಿ ನಿಮ್ಮ ಪಾಲಿಗೆ ಬರುತ್ತದೆ. ಅನುದಾನ ಒದಗಿಸದ ಸರಕಾರವನ್ನು ಆಯ್ಕೆ ಮಾಡದೇ ಜನಪರವಾಗಿ ಕೆಲಸ ಮಾಡುವ ಸರಕಾರ ಆಯ್ಕೆ ಮಾಡಿಕೊಳ್ಳುವ ಪ್ರಬುದ್ಧತೆ ರಾಜ್ಯದ ಜನತೆ ತೋರಬೇಕು ಎಂದು ಆಶಿಸಿದರು.

ಹಂಪಸಾಗರದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ಉತ್ತಂಗಿಯ ಸೋಮಶಂಕರ ಶ್ರೀಗಳು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ನಂದೀಪುರ ಡಾ. ಮಹೇಶ್ವರ ಶ್ರೀಗಳು ಮತ್ತು ಹಾಲಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದ ವಿವಾಹ ಸಮಾರಂಭದಲ್ಲಿ 18 ಜೋಡಿಗಳು ಸಪ್ತಪದಿ ತುಳಿದರು.

ಸಮಾರಂಭದಲ್ಲಿ ನೂತನ ವಧು ವರರಿಗೆ ಮಾಂಗಲ್ಯ ಮತ್ತು ವಸ್ತ್ರ ದಾನ ನೀಡಿದ್ದ ಶಾಸಕ ನೇಮರಾಜ್ ನಾಯ್ಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಕೆ.ಬಸವರೆಡ್ಡಿ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಟ್ರಸ್ಟನ ಅಧ್ಯಕ್ಷ ಎ.ಟಿ. ಹನುಮನಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಎಂ. ಬಸವರೆಡ್ಡಿ, ಹಡಗಲಿ ಸಮಾಜದ ಸಿ.ಮೋಹನರೆಡ್ಡಿ, ಭರಮರೆಡ್ಡಿ, ಗದ್ದಿಕೇರಿಯ ಪ್ರಗತಿಪರ ದಾಳಿಂಬೆ ಕೃಷಿಕ ತಿಪ್ಪಾರೆಡ್ಡಿ ಮಂಜುನಾಥ್, ಕಲ್ಯಾಣೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವಸಂತಕುಮಾರ್, ಸಮಾಜದ ತಾಲೂಕು ಉಪಾಧ್ಯಕ್ಷ ಕೆ.ಬಿ. ಪ್ರಶಾಂತರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸಂತೋಷಕುಮಾರ್, ವರಕನಹಳ್ಳಿಯ ಮೋಹನ್ ರೆಡ್ಡಿ, ಗ್ರಾಮ ಆಡಳಿತಾಧಿಕಾರಿ ಎಂ. ರಾಮಪ್ಪ, ವಕೀಲರಾದ ಗೋವಿನಹಾಳ ಮಲ್ಲಪ್ಪ ಮತ್ತು ದ್ವಿತೀಯ ದರ್ಜೆ ಸಹಾಯಕ ಬೆಟ್ಟನಗೌಡ್ರು ಮೋಹನರೆಡ್ಡಿ ನಿರ್ವಹಿಸಿದರು.

ಹೇಮರಡ್ಡಿ ಮಲ್ಲಮ್ಮನ ಜಯಂತಿ

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದಲ್ಲಿ ರಡ್ಡಿ ಸಮಾಜದ ಮಹಿಳೆಯರು ಶಿವ ಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರ ಪೂಜೆ ಸಲ್ಲಿಸಿದ ಮಹಿಳೆಯರು, ಹೇಮರಡ್ಡಿ ಮಲ್ಲಮ್ಮನ ಜೀವನ ಚರಿತ್ರೆಯನ್ನು ಮಾಹಿತಿಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಹುಲಕೋಟಿ ಪುಷ್ಪಾವತಿ, ಕೆ. ಲಕ್ಷ್ಮೀದೇವಿ, ಶಿಲ್ಪಾ ಮೇಟಿ, ಕೆ. ಲತಾ, ಶೋಭಾ, ರೇಣುಕಾ ಕುಸಬೂರ್‌, ಕೆ. ಸತ್ಯನಾರಾಯಣರಡ್ಡಿ, ಹುಲಕೋಟಿ ಬಸವರಡ್ಡಿ, ಕೆ. ರಮೇಶ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಒಂದು ದಿನದ ಆಲೋಚನೆಯಾಗದಿರಲಿ
ಆಧ್ಯಾತ್ಮದ ರತ್ನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ