ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲು ಬಾರಿ ಸಿಇಟಿ, ಅರ್ಜಿಯು ''''''''ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡೆಲ್'''''''' (ಪರಿಶೀಲನೆ ನಮೂನೆಯೊಂದಿಗೆ) ಹೊಂದಿರುವಂತೆ ಮಾಡಲಾಗಿದೆ. ಅಂದರೆ, ಅರ್ಜಿ ತುಂಬುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ‘ಸ್ಯಾಟ್ಸ್’ ನಂಬರ್ ಆಧರಿಸಿ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಂತ್ರಾಂಶವು ಲಭ್ಯವಾಗಿಸಿ ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ. ಏಕಕಾಲಕ್ಕೆ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಯಾಟ್ಸ್ ದತ್ತಾಂಶ ಕೋರಿದಾಗ ಉಂಟಾಗಿದ್ದ ಸಮಸ್ಯೆ ಪರಿಹರಿಸಲಾಗಿದೆ.ಅಭ್ಯರ್ಥಿಗಳು ಅರ್ಜಿ ತುಂಬುವಾಗ ಒಟ್ಟೊಟ್ಟಿಗೆ ನಾಲ್ಕೈದು ಸೆಷನ್ ತೆರೆದಿಟ್ಟುಕೊಂಡಿದ್ದರೆ ಆಗ ಒಂದು ಸೆಷನ್‌ಗೆ ತುಂಬುವ ಮಾಹಿತಿ ಮತ್ತೊಂದು ಸೆಷನ್‌ಗೂ ತಾನಾಗಿಯೇ ದಾಖಲಾಗಿ ತಪ್ಪಿಗೆ ಎಡೆಮಾಡಿಕೊಟ್ಟ ಪ್ರಕರಣಗಳು ಬೆಳಕಿಗೆ ಬಂದಿದ್ದವು. ತಂತ್ರಾಂಶದ ಮೂಲಕ ಅದಕ್ಕೂ ಪರಿಹಾರ ಒದಗಿಸಲಾಗಿದೆ. ಆದರೂ, ಅಭ್ಯರ್ಥಿಗಳು ಒಂದು ಸಮಯದಲ್ಲಿ ಒಂದೇ ಸೆಷನ್ ತೆರೆದುಕೊಂಡು ಅರ್ಜಿ ತುಂಬುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.
ಸ್ಯಾಟ್ಸ್ ಮಾಹಿತಿಗೆ ಸಂಬಂಧಿಸಿದಂತೆ ಗೊಂದಲ, ದೋಷಗಳಿದ್ದರೆ ಅಭ್ಯರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ. ವಿದ್ಯಾರ್ಥಿ ಓದಿದ ಶಾಲೆಯ ಹೆಸರು ಹಾಗೂ ಓದಿದ ವರ್ಷ ಸರಿಯಾಗಿದ್ದರೆ ಸ್ಯಾಟ್ಸ್ ಮೂಲಕ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ತಪ್ಪುಗಳನ್ನು ಸರಿಪಡಿಸಲು ಫೆ.10ರ ನಂತರವು ಪ್ರಾಧಿಕಾರದ ಪೋರ್ಟಲ್‌ನಲ್ಲಿ ಎಡಿಟಿಂಗ್ ಆಪ್ಷನ್ ಸಕ್ರಿಯಗೊಳಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ರಮ್ಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.