ರಾಜ್ಯದಲ್ಲಿ 1.25 ಲಕ್ಷ ಮಂದಿ ಮದ್ಯವ್ಯಸನದಿಂದ ಮುಕ್ತ: ಮುರುಳೀಧರ್

KannadaprabhaNewsNetwork |  
Published : Sep 20, 2024, 01:33 AM IST
19ಕೆಎಂಎನ್ ಡಿ19 | Kannada Prabha

ಸಾರಾಂಶ

ಪ್ರತಿಯೊಬ್ಬರಿಗೂ ಕುಟುಂಬ, ಹೆಂಡತಿ, ಮಕ್ಕಳಿರುತ್ತಾರೆ. ಕೆಲವರು ಕುಡಿತ ಚಟಕ್ಕೆ ಒಳಗಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಹೊಸ ಜೀವನ ನೀಡುವ ಉದ್ದೇಶದಿಂದ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮದ್ಯವರ್ಜನ ಶಿಬಿರದ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೂ ರಾಜ್ಯದಲ್ಲಿ 1.25 ಲಕ್ಷ ಮಂದಿಯನ್ನು ಮದ್ಯವ್ಯಸನದಿಂದ ಮುಕ್ತಗೊಳಿಸಿದೆ ಎಂದು ಸಂಸ್ಥೆ ಜಿಲ್ಲಾ ನಿರ್ದೇಶಕ ಮುರುಳೀಧರ್ ಹೇಳಿದರು.

ಪಟ್ಟಣದ ಹಾರೋಹಳ್ಳಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಕುಟುಂಬ, ಹೆಂಡತಿ, ಮಕ್ಕಳಿರುತ್ತಾರೆ. ಕೆಲವರು ಕುಡಿತ ಚಟಕ್ಕೆ ಒಳಗಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಹೊಸ ಜೀವನ ನೀಡುವ ಉದ್ದೇಶದಿಂದ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ನಡೆಸುತ್ತಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿವ ಎಲ್ಲರು ಜೀವನದಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕು. ನಿಮಗಾಗಿ ನಿಮ್ಮ ಕುಟುಂಬ ಇರುತ್ತದೆ. ಅವರ ಜೀವನ ನಿರ್ವಹಣೆ ಬಗ್ಗೆಯೂ ಎಚ್ಚರವಹಿಸಬೇಕು ಎಂದರು.

ಬೇಬಿಬೆಟ್ಟ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ಮಹಿಳೆಯರು ಸಹ ಕುಡಿತ ಚಟ್ಟಕ್ಕೆ ದಾಸರಾಗಿದ್ದಾರೆ. ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತಿದೆ. ತಾಯಿ-ತಂದೆಯರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ, ಮಾರ್ಗದರ್ಶನ ನೀಡಬೇಕು ಎಂದರು.

ಸಬ್ ಇನ್ಸ್ ಪೆಕ್ಟರ್ ಉಮೇಶ್ ಮಾತನಾಡಿ, ಪೊಲೀಸ್ ಠಾಣೆಗೆ ಬರುವ 10 ಪ್ರಕರಣಗಳ ಪೈಕಿ ಕನಿಷ್ಠ 2 ಪ್ರಕರಣಗಳು ಮದ್ಯ ಸೇವನೆ ಪರಿಣಾಮ ಉಂಟಾಗಿರುತ್ತವೆ. ಆದ್ದರಿಂದ ಮದ್ಯೆ ಸೇವನೆಯಿಂದ ವಿಮುಕ್ತರಾಗಿ ಆರೋಗ್ಯರ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಜನಜಾಗೃತಿ ಸಮಿತಿ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಸದಸ್ಯರಾದ ಶಾಂತಲ ರಾಮಕೃಷ್ಣೇಗೌಡ, ಪುರಸಭೆ ಉಪಾಧ್ಯಕ್ಷ ಎಲ್.ಆಶೋಕ್, ಬಿಜೆಪಿ ತಾಲೂಕು ಅಧ್ಯಕ್ಷ ದನಂಜಯ, ಕೋ.ಪು.ಗುಣಶೇಖರ, ಸಿ.ಡಿ.ಮಹದೇವ, ಪ.ರಮೇಶ್, ಪ್ರಭಾಕರ, ರಾಜಕುಮಾರ್, ಎಚ್.ಆರ್.ಧನ್ಯಕುಮಾರ್, ಯೋಜನಾಧಿಕಾರಿ ಯಶವಂತ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!