ಕನ್ನಡಪ್ರಭ ವಾರ್ತೆ ಬೆಂಗಳೂರು
ಇವು, ರಾಜ್ಯ ಸರ್ಕಾರದ ಆಡಳಿತ ಸುಧಾರಣೆಗೆ ಮಾಜಿ ಸಚಿವ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 10ನೇ ವರದಿಯಲ್ಲಿ ನೀಡಿರುವ ಪ್ರಮುಖ ಶಿಫಾರಸುಗಳು.
ಎರಡು ತಿಂಗಳ ಹಿಂದಷ್ಟೇ ನಷ್ಟದಲ್ಲಿರುವ ಏಳು ನಿಗಮ-ಮಂಡಳಿಗಳನ್ನು ಮುಚ್ಚುವ ಜತೆಗೆ ಒಂಬತ್ತು ನಿಗಮ-ಮಂಡಳಿಗಳನ್ನು ವಿಲೀನಗೊಳಿಸಬೇಕು. ಇದೇ ಆಯೋಗ ತನ್ನ 9ನೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಆಯೋಗದ ಅಧ್ಯಕ್ಷರು ಮಂಗಳವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ತಮ್ಮ ಅವಧಿಯ ಕೊನೆಯ ಹಾಗೂ ಆಯೋಗದ 10ನೇ ವರದಿ ಸಲ್ಲಿಸಿದರು.ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನಾ ಇಲಾಖೆಯ ದತ್ತಾಂಶಗಳ ಆಧಾರದ ಮೇಲೆ ವಿವಿಧ ಒಟ್ಟು 2,874 ಯೋಜನೆಗಳನ್ನು ಆಯೋಗ ಪರಿಶೀಲಿಸಿತು. ಅದರಲ್ಲಿ 1280 ಯೋಜನೆಗಳು ಶೂನ್ಯ ಅಥವಾ ಅತ್ಯಲ್ಪ ಅನುದಾನ ಹಂಚಿಕೆ ಹೊಂದಿರುವುದು ಕಂಡುಬಂದಿದೆ. ಅವುಗಳನ್ನು ಮುಚ್ಚಬೇಕು. ಇದರ ಜತೆಗೆ ಒಂದು ಕೋಟಿ ರು.ಗಿಂತ ಕಡಿಮೆ ಅನುದಾನ ಹಂಚಿಕೆ ಮಾಡಲಾಗಿರುವ 280 ಯೋಜನೆಗಳು ಇವೆ. ಅವುಗಳನ್ನು ಕಾಲಮಿತಿಯೊಳಗೆ ಪರಿಶೀಲಿಸಿ, ವಿಲೀನ ಅಥವಾ ಸ್ಥಗಿತಗೊಳಿಸಬೇಕು ಎಂದು ಶಿಫಾರಸು ಮಾಡಿರುವುದಾಗಿ ಮಾಹಿತಿ ನೀಡಿದರು.
ಅಲ್ಲದೆ, 42 ವಿವಿಧ ಇಲಾಖೆಗಳಲ್ಲಿನ ಕನಿಷ್ಠ 2ರಿಂದ ಗರಿಷ್ಠ 396 ಯೋಜನೆಗಳನ್ನು ಸ್ಥಗಿತಗೊಳಿಸಲು ಆಯೋಗ-2 ಶಿಫಾರಸು ಮಾಡಿದೆ. ಈ ಯೋಜನೆಗಳು ಆಡಿಟ್ ಮತ್ತು ವರದಿ ಮಾಡುವ ಪ್ರಕ್ರಿಯೆಗಳಲ್ಲಿ ಅನಗತ್ಯ ಗೊಂದಲ ಮತ್ತು ಆಡಳಿತಾತ್ಮಕ ಕೆಲಸದ ಹೊರೆ ಹೆಚ್ಚಿಸುತ್ತಿವೆ. ಇದರಿಂದ ಫಲಾನುಭವಿಗಳಿಗೂ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದೆ.ಇನ್ನು, ಮುಂಬರುವ ದಿನಗಳಲ್ಲಿ ಯಾವುದೇ ಹೊಸ ಯೋಜನೆಯನ್ನು ಸರ್ಕಾರ ಘೋಷಿಸಿದಲ್ಲಿ, ಈಗಾಗಲೇ ಇರುವ ಹಳೆಯ ಮತ್ತು ಅಷ್ಟೇನೂ ಉಪಯುಕ್ತವಲ್ಲದ ಯೋಜನೆ ಕೈಬಿಡಬೇಕು ಎಂದು ಆಯೋಗ ಸಲಹೆ ಮಾಡಿದೆ. ಆರ್‌ಕೆವಿವೈ (ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ)ಯಂತಹ ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಓವರ್‌ಲ್ಯಾಪ್ ಆಗುವ ರಾಜ್ಯದ ಯೋಜನೆಗಳನ್ನು ವಿಲೀನಗೊಳಿಸಿ, ಅಗತ್ಯವಿದ್ದಲ್ಲಿ ಹೆಚ್ಚು ಸಹಾಯಧನ ಒದಗಿಸಲು ಮಾತ್ರ ಸೀಮಿತಗೊಳಿಸುವಂತೆ ಶಿಫಾರಸು ಮಾಡಲಾಗಿದೆ. ಭವಿಷ್ಯದ ಬಜೆಟ್‌ನಲ್ಲಿ ಬಳಕೆಯಾಗದ ಯೋಜನೆಗಳು ಸೇರಿಕೊಳ್ಳುವುದನ್ನು ತಡೆಯಲು ಸರಳೀಕೃತ ಮತ್ತು ಪ್ರಮಾಣೀಕೃತ ಲೆಕ್ಕಶೀರ್ಷಿಕೆ ಚೌಕಟ್ಟು ಅಭಿವೃದ್ಧಿಪಡಿಸಿ, ನಿಯಮಿತ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊರಗುತ್ತಿಗೆ ಸಿಬ್ಬಂದಿ ಅವಲಂಬನೆ ಕಡಿತಗೊಳಿಸಿ:ಇತರೆ ಪ್ರಮುಖ ಶಿಫಾರಸುಗಳ ಪೈಕಿ, ಸಿಬ್ಬಂದಿ ಕೊರತೆ ನೀಗಿಸಲು ಮರುನಿಯೋಜನೆಗೆ ಪ್ರಥಮ ಆದ್ಯತೆ ನೀತಿ ಅಳವಡಿಸಿಕೊಳ್ಳಬೇಕು. ಅದರಂತೆ ಕಡಿಮೆ ಕೆಲಸದ ಹೊರೆ ಇರುವ ಘಟಕಗಳಿಂದ ಮುಂಚೂಣಿ ಸೇವಾ ವಿತರಣಾ ಇಲಾಖೆಗಳಿಗೆ ಹೆಚ್ಚುವರಿ ಹುದ್ದೆಗಳನ್ನು ವರ್ಗಾಯಿಸಬೇಕು. ನಗರ ಮೂಲಸೌಕರ್ಯ ಮತ್ತು ಸೇವಾ ವಿತರಣೆಯಲ್ಲಿನ ಕೊರತೆಗಳನ್ನು ನೀಗಿಸಲು ಪ್ರಮುಖ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಹುದ್ದೆಗಳನ್ನು ಅದ್ಯತೆ ಮೇಲೆ ಭರ್ತಿ ಮಾಡಬೇಕು. ಗ್ರಾಪಂ ಮತ್ತು ತಾಲೂಕು ಮಟ್ಟದಲ್ಲಿ ಸಿಬ್ಬಂದಿ ಹೆಚ್ಚಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರು ಮತ್ತು ಮೇಲ್ವಿಚಾರಣೆ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಹೊರಗುತ್ತಿಗೆ ಸಿಬ್ಬಂದಿ ಮೇಲಿನ ಅತಿಯಾದ ಅವಲಂಬನೆ ಕಡಿಮೆ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಯೋಗದ ಸಲಹೆಗಾರ ಎನ್.ಎಸ್. ಪ್ರಸನ್ನಕುಮಾರ್ ಮತ್ತಿತರರು ಇದ್ದರು. -ಬಾಕ್ಸ್-ಶಿಫಾರಸುಗಳ ಅನುಷ್ಠಾನಕ್ಕೆ ಏನೇನು ಶಿಫಾರಸು?
ಆಯೋಗದ ಅವಧಿ ಮುಗಿದ ನಂತರವೂ ಶಿಫಾರಸುಗಳ ಅನುಷ್ಠಾನ ಮೇಲೆ ನಿರಂತರ ನಿಗಾ ಇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸುಧಾರಣಾ ಮೇಲ್ವಿಚಾರಣಾ ಘಟಕ ಸ್ಥಾಪಿಸಬೇಕು. ಆನ್‌ಲೈನ್ ಟ್ರ್ಯಾಕಿಂಗ್ ಪೋರ್ಟಲ್ ಮೂಲಕ ಪಾರದರ್ಶಕ ಮೇಲ್ಚಿವಾರಣೆ ಮುಂದುವರಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಿಎಂ ನಡೆಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಗ ನೀಡಿರುವ ಶಿಫಾರಸುಗಳ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ಆಗಬೇಕು ಎಂದು ಆಯೋಗ ಹೇಳಿದೆ.ಪಾಯಿಂಟರ್
- ಆಡಳಿತ ಸುಧಾರಣಾ ಆಯೋಗದ 10ನೇ ವರದಿ ಒಟ್ಟು ಶಿಫಾರಸುಗಳು- 354- ಇದುವರೆಗಿನ ಅಂದರೆ 1-10 ವರದಿಗಳಲ್ಲಿ ಮಾಡಿದ ಒಟ್ಟು ಶಿಫಾರಸುಗಳು- 6,031
- ಈವರೆಗೆ ಅನುಷ್ಠಾನಗೊಂಡ ಶಿಫಾರಸುಗಳು -2,014- ಭಾಗಶಃ ಅನುಷ್ಠಾನಗೊಂಡ ಶಿಫಾರಸುಗಳು-186
- ಸಕ್ರಿಯ ಅನುಷ್ಠಾನ ಹಂತದಲ್ಲಿರುವ ಶಿಫಾರಸುಗಳು- 839- ಪರಿಶೀಲನೆ ಹಂತದಲ್ಲಿರುವ ಶಿಫಾರಸುಗಳು- 2,274