೧.೫೦ ಲಕ್ಷ ಮೌಲ್ಯದ ಬ್ಯಾಟರಿ ಕಳವು

KannadaprabhaNewsNetwork |  
Published : Oct 26, 2023, 01:00 AM IST

ಸಾರಾಂಶ

೧.೫೦ ಲಕ್ಷ ಮೌಲ್ಯದ ಬ್ಯಾಟರಿ ಕಳವು

ಚಳ್ಳಕೆರೆ: ತಾಲೂಕಿನ ದೊಡ್ಡೇರಿ ಗ್ರಾಮದ ಖಾಸಗಿ ಜಮೀನಿನಲ್ಲಿದ್ದ ಇಂಡಸ್ ಟವರ್ ಕಂಪನಿಗೆ ಸೇರಿದ ಸುಮಾರು ೪೮ ಬ್ಯಾಟರಿಗಳು ಕಳ್ಳತನವಾಗಿದ್ದು, ಪತ್ತೆ ಮಾಡಿಕೊಂಡುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆರ್‌ಸಿಪಿಜಿ ಕಂಪನಿಯ ಮೇಲ್ವಿಚಾರಕ ಜಿ.ಆರ್.ಮಂಜುನಾಥ ಈ ಬಗ್ಗೆ ದೂರು ನೀಡಿ, ದೊಡ್ಡೇರಿ ಗ್ರಾಮದ ಆರ್.ವೀರಣ್ಣ ಎಂಬುವವರ ರಿ.ಸರ್ವೆ ನಂ ೪೬೦ರಲ್ಲಿ ಇಂಡಸ್ ಕಂಪನಿಯ ಮೊಬೈಲ್ ಟವರ್‌ ಕಾರ್ಯನಿರ್ವಹಣೆಗಾಗಿ ೪೮ ಬ್ಯಾಟರಿಗಳನ್ನು ಕಳೆದ ಆರು ತಿಂಗಳ ಹಿಂದೆ ಅಳವಡಿಸಿದ್ದು, ಅಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ದೇವರಾಜ್ ಟವರ್ ಶೆಟ್‌ಡೌನ್ ಆಗಿದೆ ಎಂದು ಮಾಹಿತಿ ನೀಡಿದಾಗ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು ಬ್ಯಾಟರಿಗಳು ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಅವರ ಮೌಲ್ಯ ೧.೫೦ ಲಕ್ಷ ರು. ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ