ಲೀಡ್ ಜೊತೆ ಪ್ಯಾನಲ್....ಅದ್ದೂರಿ ದಸರಾ ಗಣೇಶೋತ್ಸವದ ಶೋಭಾಯಾತ್ರೆ

KannadaprabhaNewsNetwork |  
Published : Oct 26, 2023, 01:00 AM IST
25ಜಿಯುಡಿ1 | Kannada Prabha

ಸಾರಾಂಶ

ಪಟ್ಟಣದಲ್ಲಿ ದಸರಾ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು, ಗುಡಿಬಂಡೆಯ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ವೈಭವಯುತವಾಗಿ ಶೋಭಾಯಾತ್ರೆಯನ್ನು ಸಹ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯ ಯುವಕರು ಕುಣಿದು ಕುಪ್ಪಳಿಸಿದರು

ಕನ್ನಡಪ್ರಭ ವಾರ್ತೆ ಗುಡಿಬಂಡೆ: ಪಟ್ಟಣದಲ್ಲಿ ದಸರಾ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು, ಗುಡಿಬಂಡೆಯ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ವೈಭವಯುತವಾಗಿ ಶೋಭಾಯಾತ್ರೆಯನ್ನು ಸಹ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯ ಯುವಕರು ಕುಣಿದು ಕುಪ್ಪಳಿಸಿದರು. ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಸರಾ ಗಣೇಶ ಉತ್ಸವ ಸಮಿತಿ ವತಿಯಿಂದ 9 ದಿನಗಳ ಕಾಲ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಜೊತೆಗೆ ಪ್ರತಿನಿತ್ಯ ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಅದರ ಭಾಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಅಂಬೇಡ್ಕರ್ ನಗರದವರೆಗೂ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಳನ್ನು ಮೆರವಣಿಗೆ ಮಾಡಲಾಯಿತು. ತಮಟೆಗಳ ವಾದನದೊಂದಿಗೆ ಶೋಭಾಯಾತ್ರೆ ಮಾಡಲಾಯಿತು. ಮೆರವಣಿಗೆಯಲ್ಲಿದ್ದ ನೂರಾರು ಸಂಖ್ಯೆಯ ಯುವಕರು ತಮಟೆ ಶಬ್ದಗಳಿಗೆ ಕುಣಿದು ಕುಪ್ಪಳಿಸಿದರು. ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಯಾತ್ರೆ ರಾತ್ರಿ 10 ಗಂಟೆಯವರೆಗೂ ನೆರವೇರಿತು. ಲಡ್ಡು ಹರಾಜು: ದಸರಾ ಗಣೇಶೋತ್ಸವದ ಅಂಗವಾಗಿ ಲಡ್ಡು ಹರಾಜು ಪ್ರಕ್ರಿಯೆಯನ್ನು ಸಹ ಆಯೋಜಿಸಲಾಗಿತ್ತು. ಈ ಹಾರಾಜಿನಲ್ಲಿ ಯುವಕರು ಭಾಗವಹಿಸಿದ್ದರು. ಎರಡನೇ ವಾರ್ಡಿನ ರವಿ, ಬಾಲಾಜಿ ರವರು 21 ಸಾವಿರ ರು. ಹರಾಜಿನ ಮೂಲಕ ಲಡ್ಡು ಪಡೆದುಕೊಂಡರು. ಇನ್ನೂ ಮೆರವಣಿಗೆಯ ಉದ್ದಕ್ಕೂ ಪ್ರಸಾದ ವಿನಿಯೋಗ ಸಹ ಮಾಡಲಾಯಿತು. ಅಮಾನಿಬೈರಸಾಗರ ಕೆರೆಯಲ್ಲಿ ವಿಗ್ರಹ ವಿಸರ್ಜನೆ: 9 ದಿನಗಳ ಕಾಲ ಪ್ರತಿಷ್ಟಾಪಿಸಿದ್ದ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ಸಹ ಒದಗಿಸಿದ್ದರು. 25ಜಿಯುಡಿ1: ಪಟ್ಟಣದ ಮುಖ್ಯರಸ್ತೆಯಲ್ಲಿ ಗಣೇಶ ಹಾಗೂ ದುರ್ಗಾಮಾತೆಯ ವಿಗ್ರಹಗಳ ಶೋಭಾಯಾತ್ರೆ. 25ಜಿಯುಡಿ2:ಗುಡಿಬಂಡೆ ಪಟ್ಟಣದ ಹೊರವಲಯದ ಅಮಾನಿ ಬೈರಸಾಗರ ಕೆರೆಯಲ್ಲಿ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌