ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ

KannadaprabhaNewsNetwork |  
Published : Oct 17, 2026, 02:00 AM IST
ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ ಪರಿಹಾರ ವಿತರಿಸಲಾಯಿತು. | Kannada Prabha

ಸಾರಾಂಶ

ಕೈಗಾದ ಸಿಐಎಸ್‌ಎಫ್ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತರ ಪತ್ನಿ ಅಂಜನಿ ಶೇಖರ್ ಜಗದಾಳೆ ಹಾಗೂ ಪುತ್ರ ಅಥರ್ವ ಶೇಖರ್ ಜಗದಾಳೆ ಅವರಿಗೆ ವಿಮೆ ಪರಿಹಾರವನ್ನು ಹಸ್ತಾಂತರಿಸಲಾಯಿತು.

ಕಾರವಾರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟ ಸಿಐಎಸ್‌ಎಫ್ ಸಿಬ್ಬಂದಿ ಶೇಖರ್ ಬಿ. ಜಗದಾಳೆ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ವೇತನ ಪ್ಯಾಕೇಜ್‌ನಡಿ ₹1 ಕೋಟಿ ಅಪಘಾತ ವಿಮೆ ಪರಿಹಾರ ನೀಡಲಾಗಿದೆ. ಇದೇ ಪ್ಯಾಕೇಜ್‌ನಡಿ ಈ ಹಿಂದೆ ಕುಟುಂಬಕ್ಕೆ ₹10 ಲಕ್ಷ ಟರ್ಮ್ ಲೈಫ್ ವಿಮೆ ಪರಿಹಾರವನ್ನೂ ಪಾವತಿಸಲಾಗಿತ್ತು.ಕೈಗಾದ ಎನ್‌ಪಿಸಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖರ್ ಬಿ. ಜಗದಾಳೆ ಅವರು 2025ರ ನವೆಂಬರ್ 8ರಂದು ಮೃತಪಟ್ಟಿದ್ದರು. ಅವರು ಎಸ್‌ಬಿಐನ ಎನ್‌ಪಿಸಿ ಕೈಗಾ ಶಾಖೆಯ ಗ್ರಾಹಕರಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಸಿಬ್ಬಂದಿಗಾಗಿ ರೂಪಿಸಲಾದ ಸಿಎಪಿಎಸ್‌ಪಿ ವೇತನ ಪ್ಯಾಕೇಜ್‌ನಡಿ ವಿಮಾ ಸೌಲಭ್ಯ ಹೊಂದಿದ್ದರು. ಈ ಸೌಲಭ್ಯದಡಿ ಅವರ ಪತ್ನಿ ಅಂಜನಿ ಶೇಖರ್ ಜಗದಾಳೆ ಅವರಿಗೆ ₹1 ಕೋಟಿ ಅಪಘಾತ ವಿಮೆ ಪರಿಹಾರ ಪಾವತಿಸಲಾಗಿದೆ.ಕೈಗಾದ ಸಿಐಎಸ್‌ಎಫ್ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತರ ಪತ್ನಿ ಅಂಜನಿ ಶೇಖರ್ ಜಗದಾಳೆ ಹಾಗೂ ಪುತ್ರ ಅಥರ್ವ ಶೇಖರ್ ಜಗದಾಳೆ ಅವರಿಗೆ ವಿಮೆ ಪರಿಹಾರವನ್ನು ಹಸ್ತಾಂತರಿಸಲಾಯಿತು. ಕುಟುಂಬಕ್ಕೆ ಈಗಾಗಲೇ ₹10 ಲಕ್ಷ ಟರ್ಮ್ ಲೈಫ್ ವಿಮೆ ಪರಿಹಾರವೂ ದೊರೆತಿದ್ದು, ಈ ನೆರವು ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಬೆಂಬಲ ಒದಗಿಸಿದಂತಾಗಿದೆ.

ಸಿಐಎಸ್‌ಎಫ್ ಪರವಾಗಿ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಉಪ ಕಮಾಂಡೆಂಟ್ ಬಿರೇಂದ್ರ ಕುಮಾರ್ ಹಾಗೂ ಸಹಾಯಕ ಕಮಾಂಡೆಂಟ್ ಮನೋಜ್ ಕುಮಾರ್ ಉಪಸ್ಥಿತರಿದ್ದರು.ಎಸ್‌ಬಿಐ ಪರವಾಗಿ ಹುಬ್ಬಳ್ಳಿಯ ಉಪಪ್ರಧಾನ ವ್ಯವಸ್ಥಾಪಕ ಮೊಣಿಕಂಡನ್ ರಾಮಕೃಷ್ಣನ್, ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ, ಕಾರವಾರದ ಮುಖ್ಯ ವ್ಯವಸ್ಥಾಪಕ ಗಣೇಶ್ ಎಲ್. ಭಟ್ ಹಾಗೂ ಎಸ್‌ಬಿಐ ಎನ್‌ಪಿಸಿಸಿ ಕೈಗಾ ಶಾಖೆಯ ವ್ಯವಸ್ಥಾಪಕ ಮನೀಶ್ ದುಮಾಡೆ ಪಾಲ್ಗೊಂಡಿದ್ದರು. ಸುಮಾರು 80ರಷ್ಟು ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಎಸ್‌ಬಿಐ ಎನ್‌ಪಿಸಿಸಿ ಕೈಗಾ ಶಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ
ಇಲಾಖೆಗಳ ಜಮೀನು, ನಿವೇಶನ ಸಮಸ್ಯೆ ತ್ವರಿತ ಇತ್ಯರ್ಥಪಡಿಸಿ