ಶೈಕ್ಷಣಿಕ ಸೇವೆಗೆ ₹1 ಲಕ್ಷ ಶಾಶ್ವತ ಠೇವಣಿ

KannadaprabhaNewsNetwork |  
Published : Aug 01, 2026, 04:00 AM IST
ಯರಗಟ್ಟಿ | Kannada Prabha

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಗೆ ಮತ್ತೂಂದು ಉತ್ತಮ ನಿದರ್ಶನವಾಗಿ ಯರಗಟ್ಟಿ ಪಟ್ಟಣದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿ.ಡಾ.ಶೀತಲ ತಾಂವಶಿ ಸ್ಮರಣಾರ್ಥ ಡಾ.ವಿಶ್ವನಾಥ ತಾಂವಶಿ ಅವರು ₹1 ಲಕ್ಷ ಹಣವನ್ನು ಶಾಶ್ವತ ಠೇವಣಿ ರೂಪದಲ್ಲಿ ಶಾಲೆಗೆ ನೀಡಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಗೆ ಮತ್ತೂಂದು ಉತ್ತಮ ನಿದರ್ಶನವಾಗಿ ಯರಗಟ್ಟಿ ಪಟ್ಟಣದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿ.ಡಾ.ಶೀತಲ ತಾಂವಶಿ ಸ್ಮರಣಾರ್ಥ ಡಾ.ವಿಶ್ವನಾಥ ತಾಂವಶಿ ಅವರು ₹1 ಲಕ್ಷ ಹಣವನ್ನು ಶಾಶ್ವತ ಠೇವಣಿ ರೂಪದಲ್ಲಿ ಶಾಲೆಗೆ ನೀಡಿದರು.

ಶಾಲೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಶಾಶ್ವತ ಠೇವಣಿ ಪ್ರಮಾಣಪತ್ರವನ್ನು ಶಾಲೆಯ ಪ್ರಧಾನ ಗುರು ಎ.ಎ.ಮುಕ್ತುಮ್ಮನವರ ಅವರಿಗೆ ಅಧಿಕೃತವಾಗಿ ಹಸ್ತಂತರಿಸಲಾಯಿತು. ಈ ಶಾಶ್ವತ ಠೇವಣಿಯಿಂದ ದೊರೆಯುವ ವಾರ್ಷಿಕ ಬಡ್ಡಿ ಮೊತ್ತವನ್ನು ಶಾಲೆಯ ಶೈಕ್ಷಣಿಕ ಅಭಿವೃದ್ಧಿ, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಬಹುಮಾನ ವಿತರಣೆ, ಕಲಿಕಾ ಸಾಮಾಗ್ರಿಗಳ ಒದಗಿಸುವಿಕೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ತಿಳಿಸಲಾಯಿತು.ಡಾ.ವಿಶ್ವನಾಥ ತಾಂವಶಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಮಾಜದ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದರೇ ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಲಿವೆ ಎಂದು ತಿಳಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಪರವಾಗಿ ಡಾ.ವಿಶ್ವನಾಥ್ ತಾಂವಶಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಉದಾತ್ತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಧಾನ ಗುರು ಕುರುಬಗಟ್ಟಿಮಠ, ಶಂಕರ ಮುಗಳಿ, ಭಾಸ್ಕರ ಹಿರೇಮಠ, ತಮ್ಮಣ್ಣ ವಾಲಿ, ಮುಡೇನ್ನವರ ಕುಮಾರ ಹಿರೇಮಠ, ತಮ್ಮಣ್ಣ ಕಾಮಣ್ಣವರ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷಪ್ಪ ಜಗದಾರ, ಉಪಾಧ್ಯಕ್ಷೆ ಸುಣಿತಾ ಹಿರೇಮಠ, ಸದಸ್ಯರಾದ ದುಂಡಯ್ಯ ಹಿರೇಮಠ, ಎಸ್‌ಡಿಎಂಸಿ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ದಾನಶೀಲತೆ ಸರ್ಕಾರಿ ಶಾಲೆಗಳು ಅಭಿವೃದ್ಧಿಗೆ ಹೊಸ ಪ್ರೇರಣೆಯಾಗಿದ್ದು, ಇಂತಹ ಸಮಾಜಮುಖಿ ಕಾರ್ಯಗಳು ಹೊಸ ಪ್ರೇರಣೆಯಾಗಿದ್ದು, ಇಂತಹ ಸಮಾಜಮುಖಿ ಕಾರ್ಯಗಳು ಶಿಕ್ಷಣ ಕ್ರೇತ್ರಕ್ಕೆ ದೊಡ್ಡ ಬಲ ನೀಡಲಿವೆ.

-ಡಾ.ವಿಶ್ವನಾಥ ತಾಂವಶಿ, ತಾಂವಶಿ ಆಸ್ಪತ್ರೆ ಯರಗಟ್ಟಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಷ್ಠಾನವಾಗದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ: ಉದಯಸಿಂಗ್ ರಾಯಚೂರ
ವೈಜ್ಞಾನಿಕ ಬೇಸಾಯದಿಂದ 100 ಟನ್‌ ಕಬ್ಬಿನ ಇಳುವರಿ