ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಬಸವೇಶ್ವರಸ್ವಾಮಿ ದೇಗುಲಕ್ಕೆ 1 ಲಕ್ಷ ರು. ವಿತರಣೆ

KannadaprabhaNewsNetwork |  
Published : Nov 22, 2024, 01:20 AM IST
20ಕೆಎಂಎನ್ ಡಿ22 | Kannada Prabha

ಸಾರಾಂಶ

ಮದ್ದೂರು ತಾಲೂಕಿನ ನೀಲಕಂಠನಹಳ್ಳಿ ಬಸವೇಶ್ವರಸ್ವಾಮಿ ದೇಗುಲದ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ 1 ಲಕ್ಷ ರು. ಡಿಡಿಯನ್ನು ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ದೇವಸ್ಥಾನ ಟ್ರಸ್ಟಿಗಳಿಗೆ ನೀಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ನೀಲಕಂಠನಹಳ್ಳಿ ಬಸವೇಶ್ವರಸ್ವಾಮಿ ದೇಗುಲದ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ 1 ಲಕ್ಷ ರು. ಡಿಡಿಯನ್ನು ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ದೇವಸ್ಥಾನ ಟ್ರಸ್ಟಿಗಳಿಗೆ ನೀಡಿದರು.

ಟ್ರಸ್ಟಿ ಚಂದ್ರು ಮಾತನಾಡಿ, ದಾನ ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಪ್ರಗತಿಪರ ಕೆಲಸದಲ್ಲಿ ಸಮುದಾಯ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯು ದೇವಸ್ಥಾನಗಳ ಜೀರ್ಣೋದ್ಧಾರ , ಹಾಲಿನ ಡೈರಿ ಕಟ್ಟಡ, ಶಾಲೆಯ ಕಾಂಪೌಂಡ್, ಶೌಚಾಲಯಗಳ ರಚನೆ, ಹಿಂದೂ ರುದ್ರಭೂಮಿ, ಸಮುದಾಯ ಭವನಗಳ ಕಟ್ಟಡ ಹೀಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಸಹಾಯಧನವಾಗಿ ನೀಡುತ್ತಿದೆ ಎಂದರು.

ತಾಲೂಕಿಗೆ ಇದುವರೆಗೆ 4 ಕೋಟಿಗೂ ಮೀರಿ ಅಧಿಕ ಅನುದಾನವನ್ನು ಪೂಜ್ಯರು ನೀಡಿದ್ದು ವಿಶೇಷವಾಗಿದೆ. ಎಲ್ಲಾ ಸಮಾಜಮುಖಿ ಪ್ರಗತಿಪರ ಕಾರ್ಯಕ್ರಮಗಳ ಬಗ್ಗೆ ಪೂಜ್ಯರು ಮಾಡುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ಬಸವೇಶ್ವರ ಸ್ವಾಮಿ ಕಮಿಟಿ ಅಭಿನಂದನೆ ಸಲ್ಲಿಸಿದರು.

ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ಮಾತನಾಡಿ, ಹಿಂದೂ ಧರ್ಮ, ಮಕ್ಕಳಲ್ಲಿನ ಸಂಸ್ಕಾರ , ಕೂಡು ಕುಟುಂಬ ಹಾಗೂ ಧರ್ಮಸ್ಥಳದ ಕಾರ್ಯಕ್ರಮ ದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಪದಾಧಿಕಾರಿಗಳಾದ ಬಸವರಾಜು, ಸುರೇಶ್, ನಾಗರಾಜು, ಶಿವಣ್ಣ, ಚಿಕ್ಕಮೊಗ, ಮಹೇಶ್, ಎನ್.ಡಿ.ಬಸವರಾಜು, ಗ್ರಾಪಂ ಅಧ್ಯಕ್ಷೆ ತಾಯಮ್ಮ, ಒಕ್ಕೂಟದ ಅಧ್ಯಕ್ಷೆ ಭಾಗ್ಯ, ಮೇಲ್ವಿಚಾರಕಿ ಚೈತ್ರಾ, ಸೇವಾ ಪ್ರತಿನಿಧಿ ಶಾರದಮ್ಮ, ಭವ್ಯ, ಇಂದ್ರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!