ಚಿಕ್ಕತುಪ್ಪೂರು ಬಳಿ ೧೦ ಎಕರೆಯಲ್ಲಿ ಆಶ್ರಯ ನಿವೇಶನ ಭರವಸೆ

KannadaprabhaNewsNetwork |  
Published : Mar 02, 2024, 01:48 AM IST
ʼಚಿಕ್ಕತುಪ್ಪೂರು ಬಳಿ ೧೦ ಎಕರೆಯಲ್ಲಿ ಆಶ್ರಯ ನಿವೇಶನʼ | Kannada Prabha

ಸಾರಾಂಶ

ತಾಲೂಕಿನ ಚಿಕ್ಕತುಪ್ಪೂರಿನ ಗ್ರಾಮಸ್ಥರ ಕೋರಿಕೆ ಮೇರೆಗೆ ಸ.ನಂ.೫೫ ರಲ್ಲಿ ಗ್ರಾಮಸ್ಥರಿಗೆ ೧೦ ಎಕರೆಯಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆಯ ಹಿನ್ನಲೆ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಚಿಕ್ಕತುಪ್ಪೂರಿನ ಗ್ರಾಮಸ್ಥರ ಕೋರಿಕೆ ಮೇರೆಗೆ ಸ.ನಂ.೫೫ ರಲ್ಲಿ ಗ್ರಾಮಸ್ಥರಿಗೆ ೧೦ ಎಕರೆಯಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆಯ ಹಿನ್ನಲೆ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದರು.ತಾಲೂಕಿನ ಚಿಕ್ಕತುಪ್ಪೂರು ಸ.ನಂ.೫೫ ರಲ್ಲಿ ದೇವರಾಜ ಟ್ರಕ್‌ ಟರ್ಮಿನಲ್‌ಗೆ ೧೫ ಎಕರೆ ಪ್ರದೇಶ ಮಂಜೂರಾಗಿತ್ತು. ಟ್ರಕ್‌ ಟರ್ಮಿನಲ್‌ಗೆ ಮಂಜೂರಾದ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದೇವೆ ಮುಕ್ಕಾಲು ಎಕರೆ ಭೂಮಿ ಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಸ್ಥಳಕ್ಕಾಗಮಿಸಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರತಿಭಟನಾಕಾರರ ಮನವಿ ಆಲಿಸಿದರು. ಆಗ ಗ್ರಾಮಸ್ಥರು ಟ್ರಕ್‌ ಟರ್ಮಿನಲ್‌ ಆಗಲಿ ಆದರೆ ನಮಗೆ ಸ.ನಂ.೫೫ ರ ಪೈಕಿ ೧೦ ಎಕರೆಯಲ್ಲಿ ನಿವೇಶನ ಹಂಚಿಸಿ ಕೊಡಿ ಎಂದು ಶಾಸಕರಿಗೆ ಮನವಿ ಮಾಡಿದರು.ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಆಶ್ರಯ ಯೋಜನೆಯಡಿ ೧೦ ಎಕರೆ ನಿವೇಶನ ಹಂಚಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಭಟನೆ ಕೈ ಬಿಡಿ ಎಂದಾಗ ಗ್ರಾಮಸ್ಥರು ಪ್ರತಿಭಟನೆ ವಾಪಸ್‌ ಪಡೆದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯೆ ಜಯಂತಿ, ಗ್ರಾಮದ ಮುಖಂಡ ಮಹೇಶ್‌ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಇದ್ದರು.ಶಾಸಕರೊಂದಿಗೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು,ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ಪುರಸಭೆ ಸದಸ್ಯ ಗೌಡ್ರ ಮಧು,ಮುಖಂಡರಾದ ನೇನೇಕಟ್ಟೆ ಪ್ರದೀಪ್,ದೇವರಹಳ್ಳಿ ಪ್ರಕಾಶ್‌,ವೀರನಪುರ ಗುರು,ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ,ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?