ಮಸ್ಕಿ ಅಶೋಕ ಶಿಲಾಶಾಸನ ಅಭಿವೃದ್ಧಿಗೆ 10 ಕೋಟಿ ಸಚಿವ ಸಂಪುಟ ಅಸ್ತು

KannadaprabhaNewsNetwork |  
Published : Sep 19, 2024, 01:54 AM IST
18-ಎಂಎಸ್ಕೆ-02:  | Kannada Prabha

ಸಾರಾಂಶ

10 crore for the development of Maski Ashoka inscriptions by the Cabinet

-ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಂದು ನಡೆದ ಸಚಿವ ಸಂಪುಟ ಸಭೆ

---

ಇಂದರಪಾಷ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಲ್ಲಿಸಿದ ಪ್ರವಾಸಿ ತಾಣಗಳ ಅಭಿವೃದ್ಧಿ ಪಟ್ಟಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಅದರಲ್ಲಿ ಮಸ್ಕಿ ಶಾಸನ ಸ್ಥಳದ ಅಭಿವೃದ್ಧಿ 10 ಕೋಟಿ ಪ್ರಸ್ಥಾವನೆಗೆ ಒಪ್ಪಿಗೆ ಸಿಕ್ಕಿದೆ.

ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದ ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎಂಬ ಇಲ್ಲಿಯ ಜನರ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಶಿಲಾಶಾಸನ ಇತಿಹಾಸ: ಮಸ್ಕಿ ಪಟ್ಟಣದಿಂದ 2 ಕಿಮೀ ದೂರದಲ್ಲಿನ ಬೆಟ್ಟದಲ್ಲಿ ಈ ಶಾಸನವನ್ನು 1915 ರಲ್ಲಿ ಸಂಶೋಧಕ ಸಿ.ಬೀಡನ್ ಎಂಬುವರು ಪತ್ತೆ ಹಚ್ಚಿದ್ದರು. ಬ್ರಾಹ್ಮಿಲಿಪಿಯಲ್ಲಿರುವ ಈ ಶಾಸನವು ಅಶೋಕನನ್ನು ದೇವನಾಂಪ್ರೀಯ ಅಶೋಕ ಎಂದು ಗುರುತಿಸಿದ ಶಾಸನವಾಗಿದೆ. ಈ ಶಾಸನಕ್ಕೆ ಈಗಾಗಲೇ 109 ವರ್ಷ ಪೂರ್ಣಗೊಂಡಿದೆ. ಈಗಲಾದರೂ ಸರ್ಕಾರ ಶಾಸನ ಅಭಿವೃದ್ಧಿಗೆ ಮುಂದಾಗಿರುವುದು ಸಂತಸ ತಂದಿದೆ ಎಂಬ ಮಾತುಗಳು ಇತಿಹಾಸಕಾರರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

---------------------

....ಕೋಟ್ಸ್ ...

ದೇವಾನಾಂಪ್ರೀಯ ಅಶೋಕನ ಶಿಲಾಶಾಸನದ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಪ್ರವಾಸಿಗರು ಆಗಮಿಸುತ್ತಾರೆ. ಸರ್ಕಾರ ಅಶೋಕನ ಶಿಲಾಶಾಸನದ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಆದಷ್ಟು ಬೇಗ ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಅನೂಕೂಲಮಾಡಿಕೊಡಲಿ-ಹಿರಿಯ ಸಾಹಿತಿ -ಮಹಾಂತೇಶ ಮಸ್ಕಿ.

-----------------

....ಕೋಟ್ಸ್ ...

ಮಸ್ಕಿಯ ಅಶೋಕ ಶಿಲಾಶಾಸನ ನೂರು ವರ್ಷ ಪೂರೈಸಿರುವ ಅಭಿವೃದ್ಧಿಗೆ ಸಂಬಂದಪಟ್ಟ ಇಲಾಖೆಯವರೊಂದಿಗೆ ಶೀಘ್ರ ಚರ್ಚಿಸಲಾಗುವುದು. ಯಾವ ರೀತಿ ಅಭಿವೃದ್ಧಿ ಪಡಿಸಬೇಕು ಎಂಬುದರ ನೀಲನಕ್ಷೆ ಸಿದ್ಧಪಡಿಸಲಾಗುವುದು. ಶಾಸನ ಸ್ಥಳವನ್ನು ಪ್ರಮುಖ ಪ್ರವಾಸೋದ್ಯಮ ಸ್ಥಳವನ್ನಾಗಿಸಲಾಗುವುದು. -ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ.

-------------------

18-ಎಂಎಸ್ಕೆ-02: ಮಸ್ಕಿಯ ಅಶೋಕ ಶಿಲಾಶಾಸನ

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ